ಸುದ್ದಿ
ಇರಸವಾಡಿಯಲ್ಲಿ ಅದ್ದೂರಿಯಾಗಿ ನಡೆದ ಮಂಟೆಸ್ವಾಮಿ ದೊಡ್ಡಮ್ಮತಾಯಿ ಮೆರವಣಿಗೆ

ಚಾಮರಾಜನಗರ: ತಾಲೂಕಿನ ಇರಸವಾಡಿಯಲ್ಲಿ ಶ್ರೀ ಮಂಟೇಸ್ವಾಮಿ, ದೊಡ್ಡಮ್ಮತಾಯಿ ಮೆರವಣಿಗೆಯು ಅದ್ದೂರಿಯಾಗಿ ಇಂದು ನಡೆಯಿತು.ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೋಲು, ತಮಟೆ ವಾದ್ಯಗಳ ಮೂಲಕ ತೆರಳಿತು.ಇದೇ ವೇಳೆ ವಿವಿಧ ಸಮಾಜದ ಭಕ್ತರು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀ ದೊಡ್ಡಮ್ಮತಾಯಿ, ಮಂಟೇಸ್ವಾಮಿ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಕುಲಸ್ತರು, ಯುವಕರು, ಮಹಿಳೆಯರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
*ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ*