ಸುದ್ದಿ
ಹಲ್ಲಿನಿಂದ ಕಚ್ಚಿ ತುಟಿ ಕತ್ತರಿಸಿದ ಭೂಪ..!
ಬೆಂಗಳೂರು: ಖ್ಯಾತ ಉದ್ಯಮಿಯ ಮನೆಯಲ್ಲಿ ಕೆಲಸಗಾರರ ಜಗಳ ಅತೀರೇಖಕ್ಕೆ ಹೋಗಿರುವ ಘಟನೆ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ.
ಸಂತೋಷ್ ಎನ್ನುವಾತ ಉದ್ಯಮಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ರಾಜೇಶ್ ಶ್ಯಾಂ ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ.
ನಿದ್ರೆ ಮಾಡುತ್ತಿದ್ದ ವಾಚ್ಮ್ಯಾನ್ ಮೇಲೆ ರಾಜೇಶ್ ಶ್ಯಾಂ ನೀರು ಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಚಾಲಕ ಸಂತೋಷ್ ಇದನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದ್ದು, ರಾಜೇಶ್ ಶ್ಯಾಂ ಸಿಟ್ಟಿನಿಂದ ಹಲ್ಲಿನಿಂದ ಕಚ್ಚಿ ಸಂತೋಷ್ ತುಟಿ ಕತ್ತರಿಸಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ರಾಜೇಶ್ ಶ್ಯಾಂ ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.