ಅನುಷಾ ರೈ ಬಿಗ್ ಬಾಸ್ ಮನೆಯಿಂದ ಹೊರಗೆ

ಬೆಂಗಳೂರು: ಬಿಗ್ ಬಾಸ್ ಪ್ರಾರಂಭವಾಗಿ ಈಗಾಗಲೇ ಐವತ್ತು ದಿನಗಳು ಪೂರೈಸಿದ್ದು, ಈ ಬಾರಿ ಅನುಷಾ ರೈ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಜೊತೆಗೆ 50 ದಿನಗಳ ಪೂರೈಸಿದ ನಂತರ ಮತ್ತೆ ಇದೀಗ ಡಬಲ್ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಅನುಷ ಅವರಿಗೆ ಬಿಗ್ ಬಹುಮಾನ ಕೂಡ ಸಿಕ್ಕಿದೆ.
ಯೆಸ್.. ಈ ವಾರ ಅನುಷಾ ರೈ ಅವರು ‘ಬಿಗ್ ಬಾಸ್’ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. 50 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದ ಅವರು ಈಗ ಹೊರಕ್ಕೆ ಬಂದಿದ್ದಾರೆ. ಅನುಷಾ ಅವರಿಗೆ ‘ಬಿಗ್ ಬಾಸ್’ ಮನೆಯಲ್ಲಿ ಲಕ್ಷ ಲಕ್ಷ ಸಂಭಾವನೆ ಸಿಕ್ಕಿದೆ.
ಅನುಷಾ ರೈ ಅವರ ಕಿರುತೆರೆ ಹಾಗೂ ಹಿರಿತೆರೆ ಮೂಲಕ ಫೇಮಸ್ ಆದವರು. ಅವರು ದೊಡ್ಮನೆಗೆ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದರು. ಅವರು ಧರ್ಮ ಕೀರ್ತಿರಾಜ್ ಜೊತೆಗಿನ ಗೆಳೆತನದ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದರು. ಅವರು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರು ದೊಡ್ಮನೆಯಿಂದ ಹೊರಕ್ಕೆ ಹೋಗಿದ್ದಾರೆ.ಇನ್ನು ಅನುಷಾಗೂ ಸ್ಪಾನ್ಸರ್ಸ್ ಕಡೆಯಿಂದ ಬಹುಮಾನದ ಮೊತ್ತ ಸಿಕ್ಕಿದೆ. ತುಪ್ಪದ ಕಂಪನಿಯೊಂದರಿಂದ 1 ಲಕ್ಷ ರೂ ಕ್ಯಾಶ್ ಪ್ರೈಸ್ ಸಿಕ್ಕಿದೆ. ಮೊಬೈಲ್ ಸ್ಟೋರ್ ಒಂದರ ಕಡೆಯಿಂದ 50 ಸಾವಿರ ರೂ. ಗಿಫ್ಟ್ ವೋಚರ್ ದೊರೆತಿದೆ. ಅದೇ ರೀತಿ ಎಲಿವೇಟರ್ ಸಂಸ್ಥೆ ಕಡೆಯಿಂದ 50 ಸಾವಿ ರೂ. ದೊರೆತಿದೆ.
ಈ ಮೂಲಕ ಅನುಷಾ ಅವರಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಂತೆ ಆಗಿದೆ.ಇದರ ಜೊತೆಗೆ ಅವರಿಗೆ 50 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದಿದ್ದಕ್ಕೆ ಸಂಭಾವನೆ ದೊರೆತಿದೆ. ಅದನ್ನು ಅವರು ರಿವೀಲ್ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ.
ವರದಿ : ಪುಣ್ಯ ಗೌಡ ಫಿಲಂ ಬ್ಯೂರೋ tv8kannada ಬೆಂಗಳೂರು