
ಎಚ್.ಡಿ. ಕೋಟೆ : ಮಾದಾಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನೂತನವಾಗಿ ನಿರ್ಮಿಸಲಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು.
ಸರಗೂರಿನಲ್ಲಿ ಸ್ಲಂ ಆಸ್ಪತ್ರೆಯನ್ನು, ತಾಯಿ ಮಕ್ಕಳ ಆಸ್ಪತ್ರೆ ಮತ್ತು ಎಚ್.ಡಿ. ಕೋಟೆ ಪಟ್ಟಣಕ್ಕೆ ಮಾತ್ರ ಸೀಮಿತವಾದ ಆಸ್ಪತ್ರೆಯನ್ನು ನಿರ್ಮಿಸಲು ರೂಪುರೇಷೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಅದೇ ರೀತಿ ಮಾದಾಪುರದಿಂದ ಕೆ.ಬೆಳತ್ತೂರು ಮಾರ್ಗದ ರಸ್ತೆಗೆ ಮುಂದಿನ 15 ದಿನದಲ್ಲಿ ಭೂಮಿ ಪೂಜೆ ನೆರವೇರಲಿದೆ.
ಜೆಎಲ್‌ಆರ್ ವತಿಯಿಂದ ಮಾದಾಪುರ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬುಲೆನ್ಸ್ ನೀಡಲಾಗುವುದು ಎಂದರು.
ಮೈಸೂರು ಮಾನಂದವಾಡಿ ಸಂಪರ್ಕ ಕಲ್ಪಿಸಲು ರಸ್ತೆಗೆ ನಾಲ್ಕು ಪಥಗಳ ರಸ್ತೆಯನ್ನು ನಿರ್ಮಿಸಲು ಯೋಜನಾ ವರದಿ ತಯಾರಾಗುತ್ತಿದ್ದು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ ಮಾತನಾಡಿ ‘ಕಳೆದ ಒಂದು ವರ್ಷದ ಅವಧಿಯಲ್ಲಿ ತಾಲ್ಲೂಕಿಗೆ ರೆಡಿಯೋಲಾಜಿಯ ಬೇಡಿಕೆ ಇತ್ತು, ಅದನ್ನು ಒದಗಿಸಲಾಗಿದೆ, ಕಳೆದ 10 ತಿಂಗಳ ಅವಧಿಯಲ್ಲಿ 1200 ಕ್ಕೂ ಹೆಚ್ಚಿನ ಹೆರಿಯನ್ನು ಯಾವುದೇ ತೊಂದರೆಯಾಗದಂತೆ ಮಾಡಿಸಲಾಗಿದೆ. ಮನೆ ಮನೆಗೆ ತೆರಳಿ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಯನ್ನು ಮನೆ ಮನೆಗೆ ಆರೋಗ್ಯ ಯೋಜನೆಯಡಿ ಮಾಡಲು ನಿರ್ಧರಿಸಲಾಗಿದ್ದು ಮುಂದಿನ ದಿನಗಳಲ್ಲಿ ಯೋಜನೆ ಪ್ರಾರಂಭವಾಗಲಿದೆ’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್ ಮಾತನಾಡಿ ಮೈಸೂರು ಮಾನಂದವಾಡಿ ರಸ್ತೆಯಲ್ಲಿರುವ ಮಾದಾಪುರ ಗ್ರಾಮದ ವ್ಯಾಪ್ತಿಯಲ್ಲಿ 9 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದ ಹಿನ್ನಲೆ ಈ ಭಾಗಕ್ಕೆ ಒಂದು ಉತ್ತಮ ಆಸ್ಪತ್ರೆಯ ಅಗತ್ಯವಿದ್ದ ಕಾರಣ ₹1.80 ಲಕ್ಷಗಳ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿದ್ದು, ಶಸ್ತ್ರಚಿಕಿತ್ಸಾ ಕೊಠಡಿ, ಪುರುಷರ ವಾರ್ಡ್, ಮಹಿಳೆಯರ ವಾರ್ಡ್, ಹೆರಿಗೆ ಕೊಠಡಿ, ಮೂರು ಹಾಸಿಗೆಯುಳ್ಳ ಪ್ರತ್ಯೇಕ ವಾರ್ಡ್‌ಗಳುಳ್ಳ ಕೊಠಡಿಗಳನ್ನು ನಿರ್ಮಿಸಲಾಗಿದೆ, ಕಚೇರಿ, ಲ್ಯಾಬ್, ಶೌಚಾಲಯ ಸೇರಿದಂತೆ ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡಿದ್ದು ಉತ್ತಮ ಸೇವೆ ನೀಡಲಿದೆ ಎಂದರು. ಈ ಆಸ್ಪತ್ರೆಗೆ ಸಿಬ್ಬಂದಿಗಳ ಕೊರತೆ ಇದ್ದು ಇದನ್ನು ಮುಂದಿನ ದಿನಗಳಲ್ಲಿ ಶಾಸಕ ಅನಿಲ್ ಚಿಕ್ಕಮಾದುರವರು ಸರ್ಕಾರದ ಗಮನ ಸೆಳೆದು ಭರ್ತಿ ಮಾಡಿಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಶ್ರೀನಿವಾಸ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಧರಣೇಶ್, ವೈದ್ಯೆ ಚಂದ್ರಕಲಾ, ಹೈರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯ ನಾಗರಾಜು, ಮಂಗಳಾ, ಚಂದ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್. ಮಹೇಶ್ ನಾಯಕ, ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್, ಮುಖಂಡರಾದ ಎಚ್.ಸಿ. ಮಂಜುನಾಥ್, ಮಲ್ಲೇಶ್, ನಾಗೇಶ್, ಚಿಕ್ಕನಾಯಕ, ಹೆಜ್ಜೂರಯ್ಯ, ಕಾಳಪ್ಪ, ಅನಿತಾ, ಜಯರಾಂ, ಸುಧಾ, ಚಿನ್ನಸ್ವಾಮಿ, ರಾಜನಾಯಕ, ಮನುಗನಹಳ್ಳಿ ಮಾದಪ್ಪ, ಎಸ್. ಮಲ್ಲು, ರವಿಕುಮಾರ್, ಶಿವಣ್ಣ, ದೇವಮ್ಮಣಿ, ದಿನೇಶ್, ಎಂ.ಡಿ. ಮಂಚಯ್ಯ, ಮಾದಯ್ಯ, ನಿಂಗನಾಯಕ, ಮಹೇಶ್, ರಂಗಯ್ಯ, ಸಣ್ಣಸ್ವಾಮಿನಾಯಕ, ರವಿರಾಜ್ ಇದ್ದರು.
ವರದಿ : ಮಲಾರ ಮಹದೇವಸ್ವಾಮಿ