ದೇಶ
ಫೇಸ್ಬುಕ್ ಸೇವೆ ಸ್ಥಗಿತಗೊಂಡಿದ್ದಕ್ಕೆ ಮಾರ್ಕ್ ಜುಕರ್ಬರ್ಗ್ ಕಳೆದುಕೊಂಡ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ..?
ಅಕ್ಟೋಬರ್ 4 ಅಂದರೆ ನಿನ್ನೆ ರಾತ್ರಿ (ಭಾರತೀಯ ಕಾಲಮಾನದಲ್ಲಿ) ಜಗತ್ತಿನಾದ್ಯಂತ ಫೇಸ್ಬುಕ್ ಸೇವೆ ಹಾಗೂ ಫೇಸ್ಬುಕ್ ಇಂಕ್ನ ಇನ್ಸ್ಟಾಗ್ರಾಮ್ ಹಾಗೂ ವಾಟ್ಸ್ಆ್ಯಪ್ ಸೇವೆಯಲ್ಲೂ ಕೆಲ ಕಾಲ ವ್ಯತ್ಯಯವಾಗಿತ್ತು. ಹಲವರು ಈ ಸಮಸ್ಯೆಯನ್ನು ಎದುರಿಸಿದರು.
ಇದರಿಂದ ಫೇಸ್ಬುಕ್ ಕಂಪನಿಯ ವಿರುದ್ಧ ಹಲವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸೇರಿ ಹಲವೆಡೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಸೇವೆಯ ವ್ಯತ್ಯಯ, ಆಕ್ರೋಶದ ಪರಿಣಾಮ ಎಷ್ಟು ಅಂತೀರಾ..? ಬರೋಬ್ಬರಿ ಸುಮಾರು 7 ಬಿಲಿಯನ್ ಡಾಲರ್..!
ಹೌದು, ವಿಷಲ್ ಬ್ಲೋವರ್ ಪರಿಣಾಮದಿಂದ ಹಾಗೂ ಫೇಸ್ಬುಕ್ ಹಾಗೂ ಫೇಸ್ಬುಕ್ ಇಂಕ್ನ ಇತರ ಸೋಶಿಯಲ್ ಮೀಡಿಯಾ ಸೇವೆ ವ್ಯತ್ಯಯವಾದ ಕೆಲವೇ ಗಂಟೆಗಳಲ್ಲಿ ಫೇಸ್ಬುಕ್ ಕಂಪನಿಯ ಸಹ ಸಂಸ್ಥಾಪಕ ಮಾಕ್ ಜುಕರ್ಬರ್ಗ್ ವೈಯಕ್ತಿಕ ಸಂಪತ್ತು ಕೆಲವೇ ಗಂಟೆಗಳಲ್ಲಿ ಸುಮಾರು 7 ಬಿಲಿಯನ್ ಡಾಲರ್ಗಳಷ್ಟು ಕುಸಿದಿದೆ.