ಡಾ. ರಾಜಕುಮಾರ್ ಅವರ ಸಾಧನೆ ಅಪಾರವಾದದ್ದು: ಡಾ.ಸಿ.ಎನ್. ರೇಣುಕಾದೇವಿ

ಚಾಮರಾಜನಗರದ:ಏ.25:ಹೌಸಿಂಗ್ ಬೋರ್ಡ್ ನ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಇಂಚರ ಕಲಾವಿದರ ಬಳಗದಿಂದ ಆಯೋಜಿಸಲಾಗಿದ್ದ ಡಾ. ರಾಜಕುಮಾರ್ ಜನ್ಮದಿನದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ವೈದ್ಯರಾದ ಸಿ.ಎನ್.ರೇಣುಕಾದೇವಿ ಅವರು ಮಾತನಾಡಿ, ಮಕ್ಕಳಲ್ಲಿರುವ ಕಲೆಯನ್ನು ಹೊರ ತರಲು ಇಂತಹ ಗೀತ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಲ್ಲಿರುವ ಕಲೆ ಸಂಗೀತ ಸಾಹಿತ್ಯಾಸಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂಚರ ಕಲಾವಿದರ ಬಳಗವು ಏರ್ಪಡಿಸಿರುವ ಸ್ಪರ್ಧೆಗಳು ಶ್ಲಾಘನೀಯ, ಇದೇ ರೀತಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಂಘಕ್ಕೆ ಉತ್ತಮ ಹೆಸರು ಬರುತ್ತದೆ.

ಡಾ. ರಾಜಕುಮಾರ್ ಅವರು ಸಿನಿಮಾ ರಂಗದಲ್ಲಿ ಉತ್ತಮ ಸಾಧನೆ ಮಾಡಿ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಎಲ್ಲಾ ಚಲನಚಿತ್ರಗಳು ಅದ್ಭುತವಾಗಿವೆ. ಅವರು ನಮ್ಮ ಜಿಲ್ಲೆಯಲ್ಲಿ ಹುಟ್ಟಿ ರಾಜ್ಯದಾದ್ಯಂತ ಉತ್ತಮ ಹೆಸರು ಗಳಿಸಿರುವುದು ನಮ್ಮ ಜಿಲ್ಲೆಗೆ ಕೀರ್ತಿ ತಂದಂತಾಗಿದೆ, ಈ ಜಿಲ್ಲೆಯು ಕಲೆ, ಸಾಹಿತ್ಯಕ್ಕೆ ಹೆಚ್ಚು ಪ್ರಸಿದ್ಧಿಯಾಗಿದೆ ಆದ್ದರಿಂದ ನಮ್ಮ ಜಿಲ್ಲೆಯ ಸಾಹಿತ್ಯದ ಕಲೆಯನ್ನು ರಾಜ್ಯದಾದ್ಯಂತ ಪಸರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಸಂಘದ ಕಾರ್ಯದರ್ಶಿ ಲಿಂಗರಾಜು ಮಾತನಾಡಿದರು.
ಇದೇ ವೇಳೆ ಗೀತ ಗಾಯನ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ವಿಜೇತರಾದ ಮಕ್ಕಳಿಗೆ ಇಂಚರ ಕಲಾವಿದರ ಬಳಗದಿಂದ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಇದೇ ವೇಳೆ ಇಂಚರ ಕಲಾವಿದರ ಬಳಗದಿಂದ ಡಾ.ರಾಜಕುಮಾರ್ ಗೀತೆಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಹದೇವಸ್ವಾಮಿ, ಪ್ರಾಂಶುಪಾಲ ಪಿ.ದೇವರಾಜು,
ನಾಗರಿಕ ಹಿತರಕ್ಷಣ ಸಮಿತಿಯ ಅಧ್ಯಕ್ಷ ಎಸ್.ಮಹದೇವಯ್ಯ, ಭಾರತ ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಮಹದೇವಯ್ಯ, ಮುಖಂಡ ಬಸವಣ್ಣ, ಇಂಚರ ಕಲಾವಿದರ ಬಳಗದ ತಾಲೂಕು ಅಧ್ಯಕ್ಷ ಗಾಯಕರಾದ ಆರ್.ಶಿವಮೂರ್ತಿ, ಗೌರವಾಧ್ಯಕ್ಷ ಲಿಂಗರಾಜು,ಕಾರ್ಯದರ್ಶಿ ಶಿವರಾಮ.ಸಿ, ಉಪಾಧ್ಯಕ್ಷ ಪ್ರಕಾಶ್, ಸಾಹಿತಿ ಬಳಪೇಟೆ ಪ್ರಕಾಶ್, ಲತಾ ಪುಟ್ಟಸ್ವಾಮಿ, ಸೇರಿದಂತೆ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ. ಬಿ.ಆರ್.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಿರ್ದೇಶಕರು, ನಿವಾಸಿಗಳು ಇದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ