ರಾಜ್ಯಸುದ್ದಿ

ಅವ್ಯವಸ್ಥೆಯ ಆಗರವಾಗಿರುವ ಸರಕಾರಿ ಶಾಲೆಗಳು

ರಾಯಚೂರು: ಜಿಲ್ಲೆಯ ಅರಕೇರ ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಸರ್ಕಾರಿ ಆದರ್ಶ ವಿದ್ಯಾಲಯವು ವಿದ್ಯಾರ್ಥಿಗಳ ಪಾಲಿಗೆ ಆದರ್ಶವಾಗಿದ್ದು ಉತ್ತಮ ಶಿಕ್ಷಣವನ್ನು ಒದಗಿಸಿ ಕೊಡಬೇಕಾಗಿದ್ದು ಆದರೆ ಪ್ರಸ್ತುತ ಆದರ್ಶ ವಿದ್ಯಾಲಯವು ಅವ್ಯವಸ್ಥೆಗಳ ತಾಣವಾಗಿ ಮಾರ್ಪಟ್ಟಿದೆ.

ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ತೊಂದರೆಯಾಗಿದ್ದು ಪ್ರಸ್ತುತ ಶಾಲೆಯ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿರುವ ಮುಖ್ಯ ಗುರುಗಳಾದ ಮುರಳಿದರರಾವ್ ರವರ ಬೇಜವಾಬ್ದಾರಿತನದಿಂದಾಗಿ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಸಂಕಷ್ಟವನ್ನು ಎದುರಿಸುವಂತಾಗಿದೆ.

ಇನ್ನು ಶಾಲೆ,ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕಾರ್ಯನಿರ್ವಣೆ ಮೇಲ್ವಿಚಾರಣೆ ಸರಿಯಾಗಿ ಮಾಡುತ್ತಿಲ್ಲ.

ಪಠ್ಯಕ್ರಮ, ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಗುಣಮಟ್ಟವನ್ನು ಸರಿಯಾಗಿ ಒದಗಿಸುತ್ತಿಲ್ಲ

ಸರ್ಕಾರಗಳ ನೀತಿಗಳು ಮತ್ತು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ.

ತಮ್ಮ ಸರ್ಕಾರದ ಕರ್ತವ್ಯವನ್ನು ದಿನದ ಅವಧಿಯನ್ನು ಶಾಲೆಗಳ ಸಕಾರತ್ಮಕ ಅಭಿವೃದ್ಧಿಗೆ ಮೀಸಲಿಡದೆ ಹಾಗೂ ಕೇಂದ್ರ ಸ್ಥಾನದಲ್ಲಿ ವಾಸವಿರದೇ ಸರಕಾರದ ನಿಯಮ ಉಲ್ಲಂಘಿಸಿದ್ದಾರೆ ವಾಸವಿರದ ಕಾರಣ ಜವಾಬ್ದಾರಿ ಹಾಗೂ ಪಾರದರ್ಶಕವಾಗಿ ನಿರ್ವಹಿಸುತಿಲ್ಲ.

ಕಳೆದ ಒಂದುವರೆ ತಿಂಗಳಿನಿಂದ ಶಾಲೆಯ ಕುಡಿಯುವ ನೀರಿನ ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಬೋರ್ವೆಲ್ ರಿಪೇರಿಯನ್ನ ಮಾಡಿಸದೆ ಹಾಗೂ ಶಾಲೆಯಲ್ಲಿ ಶೌಚಾಲಯಕ್ಕೂ ಸಹ ನೀರಿರದ ಪರಿಸ್ಥಿತಿ ನಿರ್ಮಾಣವಾಗಿದ್ದು ಹೆಚ್ಚುವರಿ ಪ್ರಭಾವವಹಿಸಿಕೊಂಡಿರುವ ಮುಖ್ಯ ಗುರುಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಉಡಾಫೆ ಹಾಗೂ ಬೇಜವಾಬ್ದಾರಿತನದಿಂದ ಮಾತುಗಳನ್ನು ಆಡುತ್ತಾರೆ.

ಶಾಲೆಗೆ ಶೌಚಾಲಯದಲ್ಲಿ ನೀರಿನ ಕೊರತೆ ಉಂಟಾಗಿ ಒಂದೂವರೆ ತಿಂಗಳು ಕಳೆದರೂ ಸಹ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಶೌಚಾಲಯಕ್ಕೆ ಮತ್ತು ಮೂತ್ರ ವಿಸರ್ಜನೆಗೆ ಪಕ್ಕದ ಗುಡ್ಡದಲ್ಲಿಯೇ ಹೋಗುತ್ತಾರೆ ಇದನ್ನು ಕಂಡು ಕಾಣದಂತೆ ಹೆಣ್ಣು ಮಕ್ಕಳ ರಕ್ಷಣೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು ವಿಷಾದನೀಯ ಸಂಗತಿ.

ಹಾಗೆಯೇ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಶುದ್ಧವಾದ ನೀರನ್ನು ಬಳಸದೆ ಕಲುಷಿತ ನೀರಿನಿಂದಲೇ ಆಹಾರ ತಯಾರಿಸಲಾಗುತ್ತದೆ ಇದರ ಬಗ್ಗೆ ಬಿಸಿಯೂಟದ ಸಿಬ್ಬಂದಿಯವರು ಕೇಳಿದರೆ ಯಾವುದೇ ಪ್ರತ್ಯುತ್ತರವನ್ನು ನೀಡದೆ ಕೇವಲ ಒಂದು ಟ್ಯಾಂಕರ್ ನೀರನ್ನು ತರಿಸಿ ನಾಲ್ಕು ದಿನಗಳ ಮಟ್ಟಿಗೆ ಅಡುಗೆ ಮಾಡಲು ತಿಳಿಸುತ್ತಾರೆ. ಶಾಲೆಯಲ್ಲಿ ಸುಮಾರು 1500 ಕ್ಕೂ ಅಧಿಕ ಗಿಡಗಳಿದ್ದು ಅವುಗಳನ್ನು ಸರಿಯಾಗಿ ನಿಭಾಯಿಸದೆ ಸುಂದರವಾಗಿದ್ದ ಶಾಲೆಯನ್ನು ಅತ್ಯಂತ ಕೆಟ್ಟ ಶಾಲೆಯನ್ನಾಗಿ ಪರಿವರ್ತಿಸುವಲ್ಲಿ ಈ ಭ್ರಷ್ಟ ಮುಖ್ಯ ಗುರುಗಳ ಪಾತ್ರ ಗಮನಿಸಬಹುದಾಗಿದೆ.

ಎಲ್ಲರಿಗೂ ಆದರ್ಶವಾಗಿರಬೇಕಾದ ಶಾಲೆ ಇಂದು ಇಂತಹ ಬೇಜವಾಬ್ದಾರಿ ಮುಖ್ಯ ಗುರುಗಳಿಂದಾಗಿ ಮೂಲಭೂತ ಸೌಕರ್ಯಗಳನ್ನು ಕಳೆದುಕೊಂಡು ಅನಾದರ್ಶ ಶಾಲೆಯಾಗಿರುವುದು ನಮ್ಮೂರಿನ ದುರ್ದೈವದ ಸಂಗತಿ .

ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021 ರ ನಿಯಮ 8(1) ರ ಪ್ರಕಾರ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಆದರೆ ಇವರು ಕೇಂದ್ರ ಸ್ಥಾನದಿಂದ 58ಕಿ.ಮೀ ದೂರದ ಲಿಂಗಸೂಗೂರು ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ ಕೇಂದ್ರ ಸ್ಥಾನದಲ್ಲಿ ಇರದೆ ಪ್ರತಿ ನಿತ್ಯ ದೂರದ ಊರಿನಿಂದ ಬಂದು ಕಾರ್ಯನಿರ್ವಹಿಸುತ್ತಾರೆ, ಈ ಕಾರಣಕ್ಕಾಗಿ ಸದರಿಯವರು ಬೆಳಿಗೆ ಪ್ರತಿದಿನ ತಡವಾಗಿ ಮತ್ತು ಸಂಜೆ ಅವಧಿಗಿಂತ ಮುಂಚೆ ನಿರ್ಗಮಿಸುತ್ತಿದ್ದಾರೆ. ಇವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ ಹಾಗೂ ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕಿ ಅವುಗಳನ್ನು ಸರಿಯಾಗಿ ನಿಭಾಯಿಸದೆ ಅಲ್ಲಿಯೂ ನಿರ್ಲಕ್ಷ, ಬೇಜವಾಬ್ದಾರಿತನ ತೋರಿಸುವ ಮುಖ್ಯ ಗುರುಗಳನ್ನು ಕೂಡಲೇ ಅಮಾನತು ಮಾಡಬೇಕು ಹಾಗೂ ಪ್ರಸ್ತುತ ಶಾಲೆಗೆ ಹೆಚ್ಚುವರಿ ಪ್ರಭಾರ ನೀಡಿರುವುದು ಯಾವ ಆಧಾರದ ಮೇಲೆ ಶಿಕ್ಷಣ ಇಲಾಖೆ ನೀಡಿದೆ ಎಂದು ಉತ್ತರಿಸಬೇಕು ಎಂದು ಸಾರ್ವಜನಿಕರು ಆದೇಶಿಸಿದ್ದಾರೆ.

ವರದಿ : ಮಹಮ್ಮದ್ ಶಫಿ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button