Good News ಕೊಟ್ಟ ನಟಿ ರಂಭಾ; ದಶಕಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ ,

ಬಹುಭಾಷಾ ನಟಿ ರಂಭಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ, ಇತ್ತೀಚಿನ ಕೆಲ ಎರಡು ದಶಕಗಳಿಂದ ನಟನೆಯಿಂದ ದೂರವೇ ಉಳಿದಿದ್ದಾರೆ. ಆದರೆ, ಬಣ್ಣದ ಲೋಕದ ನಂಟು ಮಾತ್ರ ಕಳಿದುಕೊಂಡಿರಲಿಲ್ಲ.

ನಟನೆಯಿಂದ ಹಿಂದೆ ಸರಿದ ಬಳಿಕ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದರು ರಂಭಾ.
ಇದೀಗ ಇದೇ ನಟ, ಮತ್ತೆ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಸವಾಲಿನ ಪಾತ್ರಗಳು ಸಿಕ್ಕರೆ, ನಟಿಸಲು ರೆಡಿ ಎಂದು ಘೋಷಿಸಿದ್ದಾರೆ. ನಟನೆಗೆ ಅವಕಾಶವಿರುವ ಹೊಸ ಪಾತ್ರಗಳನ್ನು ಆಯ್ಕೆ ಮಾಡುವ ಮೂಲಕ ಮತ್ತೆ ಪ್ರೇಕ್ಷಕರನ್ನು ತಲುಪಲು ಬಯಸುತ್ತೇನೆ ಎಂದು ಹೇಳಿದ್ದಾರೆ ರಂಭಾ.

ಕನ್ನಡದಲ್ಲಿ 1993ರಲ್ಲಿ ಸರ್ವರ್ ಸೋಮಣ್ಣ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ರಂಭಾ, ಅದಾದ ಮೇಲೆ ಅದೇ ವರ್ಷ ಕೆಂಪಯ್ಯ ಐಪಿಎಸ್ ಸಿನಿಮಾದಲ್ಲೂ ನಟಿಸಿದರು.
ಅದಾದ ಮೇಲೆ ಓ ಪ್ರೇಮವೇ, ಪಾಂಚಾಲಿ, ಭಾವ ಭಾಮೈದ, ಸಾಹುಕಾರ, ಪಾಂಡು ರಂಗ ವಿಠಲ, ಗಂಡುಗಲಿ ಕುಮಾರ ರಾಮ, ಅನಾಥರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೂ ಹತ್ತಿರವಾದರು.
ಕನ್ನಡ ಸೇರಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ರಂಭಾ ನಟಿಸಿದ್ದಾರೆ. ಕೆನಡಾ ಮೂಲದ ಶ್ರೀಲಂಕನ್ ತಮಿಳು ಉದ್ಯಮಿ ಇಂದ್ರಕುಮಾರ್ ಪದ್ಮನಾಭನ್ ಎಂಬುವವರ ಜೊತೆಗೆ 2010ರಲ್ಲಿ ರಂಭಾ ಅವರ ವಿವಾಹವಾಯಿತು. ಇವರಿಗೆ ಇಬ್ಬರು ಪುತ್ರಿಯರು, ಓರ್ವ ಮಗನಿದ್ದಾನೆ.