ರಾಜ್ಯಸುದ್ದಿ

ಗಂಡನಿಗೆ ತಿಳಿಯದಂತೆ ರಾಗಿ ಮೂಟೆಯಲ್ಲಿ ಚಿನ್ನ ಅವಿತಿಟ್ಟಿದ್ದ ಹೆಂಡತಿ, ಗೊತ್ತಿಲ್ಲದೆ ಮೂಟೆ ಮಾರಿಬಿಟ್ಟ ಪತಿ! ಮುಂದೇನಾಯ್ತು?

ಮಂಡ್ಯ: ಹಿಂದಿನ ಕಾಲದಲ್ಲಿ ದರೋಡೆಕೋರರಿಗೆ ಹೆದರಿ ಜನ್ರು ತಮ್ಮ ಆಭರಣಗಳನ್ನ (Gold Jewels) ಭೂಮಿಯಲ್ಲಿ ಅವಿತಿಡುತ್ತಿದ್ರಂತೆ. ಹಾಗೆ ಕಾಲ ಬದಲಾಗ್ತಿದ್ದಂತೆ ಈಗ ಜನ್ರು ತಮ್ಮ ಚಿನ್ನದ ಆಭರಣಗಳು ಸೇಫಾಗಿರಲಿ ಅಂತ ಲಾಕರ್ ಅಥವಾ ಬ್ಯಾಂಕುಗಳ (Bank Locker) ಮೊರೆ ಹೋಗ್ತಿದ್ದಾರೆ‌. ಆದ್ರೆ ಇಲ್ಲೊಬ್ಬ ವೃದ್ದೆ ಕಳ್ಳರಿಗೆ ಹೆದರಿ ನಾಲ್ಕು ಲಕ್ಷ (4 Lakh worth) ಮೌಲ್ಯದ ಚಿನ್ನಾಭರಣಗಳನ್ನ ರಾಗಿ ಮೂಟೆಯಲ್ಲಿ (Ragi Sack) ಅವಿತಿಟ್ಟಿದ್ದಾರೆ. ವಿಪರ್ಯಾಸ ಅಂದ್ರೆ ರಾಗಿ ಮೂಟೆಯಲ್ಲಿ ಬಚ್ಚಿಡಲಾಗಿದ್ದ ಚಿನ್ನಾಭರಣ ಊರೂರು ಸುತ್ತಿ ಹದಿನೈದು ದಿನಗಳ ಬಳಿಕ ಮತ್ತೆ ವೃದ್ದೆ ಕೈ ಸೇರಿದೆ.

ಇದೆಲ್ಲದರ ಮಧ್ಯೆ ಹೆಂಡತಿ ಚಿನ್ನ ಅವಿತಿಟ್ಟಿದ್ದು ಗಂಡನಿಗೆ ಗೊತ್ತಿರಲಿಲ್ಲ, ನಂತರ ತಾನು ಬಚ್ಚಿಟ್ಟಿದ್ದ ಚಿನ್ನ(Hidden Treasure) ಕಳೆದುಹೋಗಿದೆ ಅನ್ನೋದು ಹೆಂಡತಿಗೂ ಗೊತ್ತಿರಲಿಲ್ಲ. ಪತ್ತೇದಾರಿ ಸಿನಿಮಾ ಸ್ಟೈಲ್​ನಲ್ಲಿ ನಡೆದ ಈ ಪ್ರಕರಣ ಸಖತ್ ಇಂಟರೆಸ್ಟಿಂಗ್ ಆಗಿದೆ ನೋಡಿ…

ರಾಗಿ ಮೂಟೆಯೊಳಗೆ ಅವಿತಿಟ್ಟ ಚಿನ್ನ ಊರು ಸುತ್ತಿ ರೈಸ್ ಮಿಲ್ ಸೇರಿತ್ತು.

ಹೌದು…, ಇಂತಾದ್ದೊಂದು ಘಟನೆ ನಡೆದಿದ್ದು ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ. ಜಿಲ್ಲೆಯ ಕಲ್ಲಿನಾಥಪುರ ಗ್ರಾಮದ ವೃದ್ದೆ ಲಕ್ಷ್ಮಮ್ಮ ಕಳೆದ 15 ದಿನಗಳ ಹಿಂದೆ ಕಳ್ಳರಿಗೆ ಹೆದರಿ ತಮ್ಮ ಮನೆಯಲ್ಲಿದ್ದ ರಾಗಿ ಮೂಟಿಯಲ್ಲಿ ಸುಮಾರು ನಾಲ್ಕು ಲಕ್ಷ ರೂ ಮೌಲ್ಯದ ಒಂದು ಜೊತೆ ಓಲೆ, ಬ್ರೇಸ್‌ಲೈಟ್ ಮತ್ತು ಚೈನ್ ಗಳನ್ನ ಒಂದು ಪರ್ಸ್ ನಲ್ಲಿ ಇಟ್ಟು ಅವಿತಿಟ್ಟಿದ್ದಾರೆ‌. ಬಳಿಕ ವೃದ್ದೆ ಲಕ್ಷ್ಮಮ್ಮ ಬೆಂಗಳೂರಿನ ತಮ್ಮ ಮಗಳ ಮನೆಗೆ ಹೊರಟು ಹೋಗಿದ್ದಾರೆ. ಆದ್ರೆ ಇತ್ತ ಲಕ್ಷ್ಮಮ್ಮ ಪತಿ ಕಲ್ಲೇಗೌಡ ಮನೆ ಬಳಿ ಬಂದ ಮೂವರು ಯುವಕರಿಗೆ ರಾಗಿ ಮಾರಾಟ ಮಾಡಿದ್ದಾರೆ‌.

ಪತ್ನಿ ಬಚ್ಚಿಟ್ಟಿದ್ದ ಆಭರಣಗಳ ರಾಗಿ ಮೂಟೆ ಮಾರಿದ ಪತಿ

ಅತ್ತ ಲಕ್ಷ್ಮಮ್ಮ ಮಗಳ ಮನೆಗೆ ಅಂತ ಬೆಂಗಳೂರು ಸೇರ್ತಿದ್ದಂತೆ ಇತ್ತ ಪತಿ ಕಲ್ಲೆಗೌಡ ಮನೆಯಲ್ಲಿದ್ದ ರಾಗಿ ಮೂಟೆ ಮಾರಾಟ ಮಾಡಿ ಒಂದಷ್ಟು ಹಣ ಪಡೆದುಕೊಂಡಿದ್ದ. ನಂತರ ರಾಗಿ ಖರೀದಿಸಿದ ಮೂವರು ಯುವಕರು ಊರು ಊರು ಸುತ್ತಿ ಬಳಿಕ ಖರೀದಿಸಿದ್ದ ರಾಗಿಯನ್ನ ಬಸರಾಳಿನ ಶ್ರೀನಿವಾಸ ಸೂರಿ ಬಿನ್ನಿ ರೈಸ್ ಮಿಲ್ಲಿಗೆ ಮಾರಾಟ ಮಾಡಿದ್ದರು.. ಇದಾದ ಕೆಲ ದಿನಗಳ ಬಳಿಕ ಶೇಖರಣೆಯಾಗಿದ್ದ ರಾಗಿ ಮಾರಟ ಮಾಡಲು ರೈಸ್ ಮಿಲ್ ಮಾಲೀಕರು ಮೂಟೆಯಲ್ಲಿದ್ದ ರಾಗಿಯನ್ನ ರಾಶಿಗೆ ಸುರಿದಿದ್ದರು. ಈ ವೇಳೆ ರಾಗಿ ಮೂಟೆಯಿಂದ ಒಂದು ಪರ್ಸ್ ಮತ್ತು ಆಭರಣಗಳಿದ್ದ ಡಬ್ಬಿ ನೆಲಕ್ಕೆ ಬಿದ್ದಿತ್ತು. ಇದನ್ನ ಕಂಡ ರೈಸ್ ಮಿಲ್ ಮಾಲೀಕ ತಿಮ್ಮೇಗೌಡ ಆಭರಣಗಳನ್ನ ಪರಿಶೀಲಿಸಿದಾಗ ಜ್ಯುವೆಲರಿ ಅಂಗಡಿಯ ರಶೀದಿ ಪತ್ತೆಯಾಗಿತ್ತು.

Related Articles

Leave a Reply

Your email address will not be published. Required fields are marked *

Back to top button