`I Want to GO to Prison’: ಹೆಂಡತಿ(Wife)ಯೊಬ್ಬಳು ಮನೆ(Home)ಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎಂಬ ಮಾತನ್ನು ಕೇಳಿದ್ದೇವೆ. ಮದುವೆಯಾಗುವವರೆಗೂ ಒಂದು ಗೋಳು, ಮದುವೆ(Marriage) ಆದ ಮೇಲೆ ಒಂದು ಗೋಳು ಅಂತಾರೆ ಗಂಡಸರು. ಮದುವೆ ಆಗುವ ಮುನ್ನ ಹುಡುಗಿ ಸಿಕ್ಕರೆ ಸಾಕು ಅಂತಾರೆ. ಮದುವೆಯಾದ ಮೇಲೆ ಯಾಕಾದರೂ ಇವಳನ್ನು ಮದುವೆಯಾದೆ ಎಂದು ಕೊರಗುತ್ತಾರೆ. ಈ ರೀತಿ ಎಲ್ಲ ಗಂಡಸರು ಯೋಚಿಸುವುದಿಲ್ಲ. ಕೆಲವರಿಗೆ ಮಾತ್ರ ಇದು ಅನ್ವಯವಾಗುತ್ತೆ. ಕೆಲ ಘಟನೆಗಳನ್ನ ನೋಡಿದರೆ ಯಾರದ್ದು ತಪ್ಪು? ಯಾರದ್ದು ಸರಿ? ನಗಬೇಕೋ? ಅಳಬೇಕೋ? ಅನ್ನುವುದೆ ತಿಳಿಯುವುದಿಲ್ಲ. ಗಂಡ – ಹೆಂಡತಿ(Husband and Wife) ಜಗಳ ಊಟ(Dinner) ಮಾಡಿ ಮಲಗುವವರೆಗೂ ಅನ್ನುವುದು ತಿಳಿದಿದೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಜಗಳ(Fights) ಆಗುವುದು ಕಾಮನ್(Common).

ಒಬ್ಬೊರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ(Life) ಸಾಗಿಸಬೇಕು. ಬಹುತೇಕ ಪ್ರಕರಣಗಳಲ್ಲಿ ಗಂಡ(Husband)ನ ಕಾಟ(Torcher) ತಾಳಲಾರದೇ ಹೆಂಡತಿ(Wife) ಪೊಲೀಸ್ ಠಾಣೆಗೆ ಹೋಗಿ ದೂರು(Complaint) ನೀಡುವುದನ್ನ ನಾವು ನೋಡಿದ್ದೇವೆ. ಆದರೆ ಇಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತು ಪೊಲೀಸರ ಬಳಿ ಹೋಗಿ ಏನು ಕೇಳಿದ್ದಾನೆ ಗೊತ್ತಾ? ಮುಂದೆ ಓದಿ..
`ನನ್ನನ್ನು ಜೈಲಿಗೆ ಹಾಕಿ’ ಎಂದು ಗಂಡನ ಮನವಿ
ಇಲ್ಲಿ ಗಂಡ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾನೆ ಅಂದರೆ ಹೆಂಡತಿ ವಿರುದ್ದ ದೂರು ನೀಡಲು ಹೋಗಿರುತ್ತಾನೆ ಎಂದುಕೊಂಡರೇ ನಿಮ್ಮ ಕಲ್ಪನೆ ತಪ್ಪು. ಅಥವಾ ವಿಚ್ಛೇದನ ಕೊಡುವಂತೆ ಕೇಳಿಕೊಂಡಿದ್ದಾನೆ ಅಂತ ಅಂದುಕೊಂಡರೇ ಅದೂ ತಪ್ಪು. ಆ ವ್ಯಕ್ತಿ ಪೊಲೀಸ್ ಠಾಣೆಗೆ ತೆರಳಿ ದಯವಿಟ್ಟು ನನ್ನನ್ನು ಬಂಧಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ. `ಮನೆಯಲ್ಲಿ ಹೆಂಡತಿ ಹೆಚ್ಚು ಕಾಟ ಕೊಡುತ್ತಿದ್ದಾಳೆ. ಹೀಗಾಗಿ ನನ್ನನ್ನು ಬಂಧಿಸಿ, ಜೈಲಿಗೆ ಹಾಕಿ ಅಲ್ಲಾದರೂ ನೆಮ್ಮದಿಯಿಂದ ಇರುತ್ತೇನೆ’ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ.