ಇತ್ತೀಚಿನ ಸುದ್ದಿ

BIG NEWS : ಉತ್ತರಕರ್ನಾಟಕ ಭಾಗದ, ಸೋಷಿಯಲ್ ಮೀಡಿಯಾ ಸ್ಟಾರ್ ‘ಗೋಡಂಬಿ ಕಾಕಾ’ ನಿಧನ!

ವಿಜಯಪುರ : ಇತ್ತೀಚಿಗೆ ಈ ಒಂದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನರು ಸಕ್ರಿಯವಾಗುತ್ತಿದ್ದಾರೆ.ಅದರಲ್ಲೂ ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಪ್ರತಿಭೆಗಳು ಒಂದು ಸೋಶಿಯಲ್ ಮೀಡಿಯಾ ದಿಂದ ಬೆಳಕಿಗೆ ಬಂದಿವೆ. ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಗೋಡಂಬಿ ಕಾಕಾ ಎಂದೇ ಪ್ರಸಿದ್ಧಿ ಪಡೆದಿದ್ದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಾಗೂರು ಗ್ರಾಮದ ಬಸಲಿಂಗಯ್ಯ ಹಿರೇಮಠ ಅನಾರೋಗ್ಯದಿಂದ ಸಾವನ್ನಪ್ಪಿದ್ದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು ಬಸಲಿಂಗಯ್ಯ ಹಿರೇಮಠ ಅವರಿಗೆ ವಯಸ್ಸಾಗಿದ್ದರು ಕೂಡ ಇನ್ಸ್ಟಾಗ್ರಾಮ್, ಫೇಸ್ ಬುಕ್ ಹಾಗೂ ಯೂಟ್ಯೂಬ್ ಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅದರಲ್ಲೂ ಯೂಟ್ಯೂಬ್ ನಲ್ಲಿ ಅವರು ಹಾಸ್ಯ ಬರಿತ ಕೆಲವು ಶಾರ್ಟ್ ಫಿಲಂ ಗಳ ಮೂಲಕ ಖ್ಯಾತಿ ಪಡೆದಿದ್ದರು. ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಗೋಡಂಬಿ ಕಾಕಾ ಇಂದು ನಿಧನರಾಗಿದ್ದಾರೆ.

ಬಸಲಿಂಗಯ್ಯ ಚೆನ್ನಬಸಯ್ಯ ಹಿರೇಮಠ ಮೂಲತಃ ರಂಗಭೂಮಿ ಕಲಾವಿದರು. 19 ವಯಸ್ಸಿನಲ್ಲಿ ಬಣ್ಣ ಹಚ್ಚಿದ ಇವರು 40 ವರ್ಷಗಳ ಕಾಲ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಕೊರೊನ ಬಳಿಕ ಅವರು ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದರು. ಈ ವೇಳೆ ಅವರಿಗೆ ಈ ಸೋಷಿಯಲ್ ಮೀಡಿಯಾ ಕೈ ಹಿಡಿಯಿತು.ಬಳಿಕ ನಿಧಾನವಾಗಿ ಸಣ್ಣ ಪುಟ್ಟ ರೀಲ್ಸ್, ಶಾರ್ಟ್ ಫಿಲಂಗಳ ಮೂಲಕ ಉತ್ತರಕರ್ನಾಟಕ ಭಾಗದ ಮನೆ ಮಾತಾದರು.

ಸೋಶಿಯಲ್‌ ಮೀಡಿಯಾದಲ್ಲಿ ಕಾಮಿಡಿ ಕಂಟೆಂಟ್‌ ಉಳ್ಳ ಶಾರ್ಟ್‌ ವಿಡಿಯೋ ಮೂಲಕ ಜನರನ್ನ ರಂಜಿಸುತ್ತಿದ್ದರು. ಇನ್ಸ್ಟಾಗ್ರಾಂ, ರೀಲ್ಸ್‌ ಗಳಲ್ಲಿ ಇವ್ರ ಗೋಡಂಬಿ ಕಾಕಾ ಪಾತ್ರ ಬಹಳ ಜನಪ್ರೀಯತೆಗೆ ಕಾರಣವಾಗಿತ್ತು. ಗೋಡಂಬಿ ಕಾಕಾ ಎನ್ನುವ ಫೇಸ್ಬುಕ್‌ ಪೇಜ್‌, ಇನ್ಸ್ಟಾ ಐಡಿ ಮೂಲಕ ಜನರನ್ನ ರಂಜಿಸಿದ್ದರು. ಬಡತನ ನಡುವೆ ಯೂಟ್ಯೂಬ್‌ ಚಾನೆಲ್‌ ಮಾಡಿಕೊಂಡು ಅಲ್ಲಿ ಕಾಮಿಡಿ ದೃಶ್ಯಗಳನ್ನ ಅಪ್ಲೋಡ್‌ ಮಾಡ್ತಾ ಬಂದ ಹಣದಲ್ಲಿ ಜೀವನ ಸಾಗಿಸ್ತಿದ್ರು.ಇದೀಗ ಇಂದು ಅನಾರೋಗ್ಯದಿಂದ ಅವರು ಸಾವನ್ನಪ್ಪಿದ್ದು, ಅಭಿಮಾನಿಗಳಿಗೆ ತುಂಬಾ ನೋವು ಉಂಟು ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button