ರಾಜ್ಯಸುದ್ದಿ

ತಮಿಳುನಾಡಿನಲ್ಲಿ 85 ವರ್ಷದ ಅಜ್ಜಿಗೆ ಪಂಚಾಯತ್ ಅಧ್ಯಕ್ಷೆ ಪಟ್ಟ..!

ಚೆನ್ನೈ; ರಾಜಕೀಯದಲ್ಲಿ 75 ವರ್ಷ ದಾಟಿದರೆ ಭವಿಷ್ಯ ಮುಗಿಯಿತು ಎಂಬ ಮಾತಿದೆ. ಕೇವಲ ವಯಸ್ಸಾಗಿದ್ದ ಕಾರಣಕ್ಕೆ ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್​.ಕೆ. ಅಡ್ವಾನಿ (Lal Krishna Advani) ಪ್ರಧಾನಿ ಪಟ್ಟವನ್ನು ಮಿಸ್​ ಮಾಡಿಕೊಂಡಿದ್ದರು. ಇನ್ನೂ ಮುಖ್ಯಮಂತ್ರಿ ಗಾದಿಯಲ್ಲಿದ್ದರೂ ಸಹ ವಯಸ್ಸಿನ ಕಾರಣಕ್ಕೆ ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ (BS Yeddyurappa )ಅವರನ್ನು ಆ ಸ್ಥಾನದಿಂದ ಇಳಿಸಲಾಗಿತ್ತು.

ಅಲ್ಲದೆ, 75 ವರ್ಷ ದಾಟಿದ ಅನೇಕ ಹಿರಿಯ ನಾಯಕರನ್ನು ಇದೀಗ ಸೈಡ್​ ಲೈನ್ ಮಾಡಲಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ತಮಿಳುನಾಡಿನ 85 ವರ್ಷದ ಎಸ್. ಪೆರುಮಾತಾಳ್ (Perumathaal) ಎಂಬ ಹಿರಿಯ ಮಹಿಳೆ ತಮಿಳುನಾಡಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯಲ್ಲಿ ಗೆದ್ದು (Tamilnadu Local Body Election), ಶಿವಂತಿಪಟ್ಟಿ (Sivanthipatti Panchayat) ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಪೆರುಮಾತಾಳ್ ಹೆಸರಲ್ಲಿದೆ ದಾಖಲೆ:

85 ವರ್ಷದ ಪೆರುಮಾತಾಳ್  ತಮಿಳುನಾಡಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಅತ್ಯಂತ ಹಿರಿಯ ಪಂಚಾಯತ್ ಸದಸ್ಯೆ ಮತ್ತು ಅಧ್ಯಕ್ಷೆ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ದೀರ್ಘಕಾಲದಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಅವರು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇದುವೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅವರು ಮೊದಲ ಪ್ರಯತ್ನದಲ್ಲೇ ಸಫಲರಾಗಿದ್ದಾರೆ ಎಂದು ವರದಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button