Karnataka Rains Today ಬೆಂಗಳೂರು(ಅ.14):ನೈಋತ್ಯ ಮಾನ್ಸೂನ್ ಗೆ(Southwest Monsoon.) ಹೋಲಿಸಿದರೆ ಕರ್ನಾಟಕದಲ್ಲಿ ಈಶಾನ್ಯ ಮಾನ್ಸೂನ್( Northeast Monsoon) ಅವಧಿಯಲ್ಲಿ ಹೆಚ್ಚು ಮಳೆಯಾಗುತ್ತದೆ. ವಾಸ್ತವವಾಗಿ, ಈಶಾನ್ಯ ಮಾನ್ಸೂನ್ ಆರಂಭವಾಗುವ ಮುನ್ನವೇ ಕರ್ನಾಟಕದ(Karnataka) ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ.
ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳ ಕರ್ನಾಟಕದ ಕೆಲವು ಕಡೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ(Rainfall). ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವ ಬೆಂಗಳೂರು(Bengaluru) ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ.ಉತ್ತರ ಒಳನಾಡಿನಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಮಳೆಯಾಗಲಿದೆ, ಆದರೂ ಕೆಲವೊಮ್ಮೆ ಅಧಿಕ ಮಳೆಯಾಗುವ ನಿರೀಕ್ಷೆಯನ್ನ ತಳ್ಳಿಹಾಕುವಂತಿಲ್ಲ.
ಕರ್ನಾಟಕ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿನ ಕಡಿಮೆ ಒತ್ತಡದ ಪ್ರದೇಶದ ಕಾರಣ, ರಾಜ್ಯದ ಕರಾವಳಿ ಭಾಗಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಸೈಕ್ಲೋನಿಕ್ ಸರ್ಕ್ಯುಲೇಷನ್ ಅರೇಬಿಯನ್ ಸಮುದ್ರದ ಮೇಲೆ ಕರ್ನಾಟಕ ಕರಾವಳಿಯಲ್ಲಿದೆ ಮತ್ತು ಇನ್ನೊಂದು ಪರಿಚಲನೆಯು ಬಂಗಾಳ ಕೊಲ್ಲಿಯಲ್ಲಿದೆ, ಇದರ ಪ್ರಭಾವದ ಕಾರಣ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ನಿರೀಕ್ಷೆಯಿದ್ದು, ಅದು ಅಧಿಕ ಮಳೆಗೆ ಕಾರಣವಾಗಲಿದೆ.