ಸುದ್ದಿ
ಮನೆ ನಿರ್ಮಾಣಕ್ಕೆ ಆಗ್ರಹಿಸಿ ಮಳೆಯನ್ನೂ ಲೆಕ್ಕಿಸದೇ ಡಿಸಿ ಕಛೇರಿ ಎದುರು ಮಹಿಳೆಯರ ಪ್ರತಿಭಟನೆ
ವಿಜಯಪುರ : ಮನೆ ನಿರ್ಮಾಣಕ್ಕೆ ಆಗ್ರಹಿಸಿ ಕೊಲ್ಹಾರ ಪಟ್ಟಣದ ಕೊಳಚೆ ಪ್ರದೇಶದ ಮಹಿಳೆಯರು ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ಆರಂಭಿಸಿದ್ದಾರೆ.
ಬುಧವಾರ ನಗರದಲ್ಲಿನ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿದ 50-60 ಜನರಿದ್ದ ಕೊಲ್ಹಾರ ಸ್ಲಂ ನಿವಾಸಿ ಮಹಿಳೆಯರು ಭಾರೀ ಮಳೆಯಲ್ಲೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೋಲ್ಹಾರ ಪಟ್ಟಣದಲ್ಲಿ ಕಳೆದ 25 ವರ್ಷಗಳಿಂದ ಸುಮಾರು 300 ಕುಟುಂಬಗಳು ವಾಸವಾಗಿರುವ ತಮನ್ನು ಸ್ಥಳ ಖಾಲಿ ಮಾಡುವಂತೆ ಪಟ್ಟಣ ಪಂಚಾಯತ ಅಧಿಕಾರಿಗಳು ಸೂಚಿಸಿದ್ದನ್ನು ವಿರೋಧಿಸಿ ಮಳೆಯಲ್ಲೂ ಪ್ರತಿಭಟನೆ ನಡೆಸಿದ್ದಾರೆ.
ತಮಗೆ ಪರ್ಯಾಯ ಸ್ಥಳ ತೋರಿಸದೇ ಇರುವ ಸ್ಥಳದಿಂದ ತೆರವು ಮಾಡಲು ಮುಂದಾಗಿರುವ ಕೊಲ್ಹಾರ ಪಟ್ಟಣ ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾವು ಶಡ್ ಹಾಕಿಕೊಂಡು ವಾಸವಾಗಿದ್ದು, ಏಕಾಏಕಿ ಮನೆ ತೆರವು ಮಾಡಬೇಕು ಎಂದರೆ ಎಲ್ಲಿಗೆ ಹೋಗಬೇಕು ಎಂದು ಪ್ರತಿಭಟನಾ ನಿರತ ಮಹಿಳೆಯರು ಪ್ರಶ್ನಿಸಿದರು.