ಟಾಲಿವುಡ್ (Tollywood)ಚಿತ್ರರಂಗದಲ್ಲಿ ಸಮಂತಾ(Samatha) ಹಾಗೂ ನಾಗಚೈತನ್ಯ (Nagachitanya)ಅವರ ವಿಚ್ಛೇದನ ವಿಚಾರ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಮಾಡಿದೆ. ಇಷ್ಟು ದಿನ ಚೆನ್ನಾಗಿದ್ದ ದಂಪತಿ, ಇದ್ದಕ್ಕಿದ್ದ ಹಾಗೆ ಬೇರೆ ವಿಚಾರ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಪ್ರತಿಯೊಬ್ಬರೂ ಅವರಿಗೆ ಬೇಕಿರುವ ಹಾಗೆಯೇ ಕಾರಣಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಹಾಗಾಯಿತಂತೆ, ಹೀಗಾಯಿತಂತೆ ಎಂಬ ಅಂತೆಕಂತೆಗಳ ಸದ್ದು ಜೋರಾಗಿದೆ. ಅಧಿಕೃತವಾಗಿ ಸಮಂತಾ ಹಾಗೂ ನಾಗಚೈತನ್ಯ ಬೇರೆಯಾಗಿದ್ದನ್ನ ಸ್ವತಃ ತಾವೇ ಹೇಳಿಕೊಂಡಿದ್ದರು.
ಇದಾದ ಕೆಲ ಗಂಟೆಗಳ ಬಳಿಕ ಸ್ಟಾರ್ ನಟನೊಬ್ಬನ ಟ್ವೀಟ್ ಸಖತ್ ವೈರಲ್ ಆಗ್ತಿತ್ತು. ಚೀಟರ್ಸ್ ಎಂಬ ಕಂಟೆಂಟ್ ನಲ್ಲಿ ಆ ಸ್ಟಾರ್ ನಟ ಟ್ವೀಟ್ ಮಾಡಿದ್ದರು. ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ನಟನ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿತ್ತು. ಇಷ್ಟು ದಿನ ಸಮಂತಾ ಹಾಗೂ ನಾಗಚೈತನ್ಯ ವಿಚಾರಕ್ಕೆ ತಲೆ ಹಾಕದ ಈ ನಟ, ವಿಚ್ಛೇದನ ಬಳಿಕ ಯಾಕೆ ಬಂದರು ಎಂಬ ಪ್ರಶ್ನೆ ಎಲ್ಲರನ್ನ ಕಾಡಿತ್ತು.
ಈ ಟ್ವೀಟ್ ಮಾಡಿದ್ದು ಬೇರೆ ಯಾರು ಅಲ್ಲ, ಸಮಂತಾ ಅವರ ಮಾಜಿ ಪ್ರೇಮಿ ನಟ ಸಿದ್ಧಾರ್ಥ್. ಸಮಂತಾ ಹಾಗೂ ನಾಗಚೈತನ್ಯ ಬೇರೆ ಆಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದಾದ ಕೆಲವೇ ಹೊತ್ತಲ್ಲಿ ನಟ ಸಿದ್ಧಾರ್ಥ್ “ಶಾಲೆಯಲ್ಲಿ ಶಿಕ್ಷಕರು ನನಗೆ ಮೊದಲು ಕಲಿಸಿದ ಪಾಠ ಮೋಸಗಾರರು ಎಂದಿಗೂ ಏಳಿಗೆ ಕಾಣಲ್ಲ” ಎಂದು ಟ್ವೀಟ್ ಮಾಡಿದ್ದರು.