ಅಂಬಾಸಿಡರ್ ಕಾರು ಈತನ ಮನೆ, ಹಾವು-ಕಾಡುಕೋಣ-ಆನೆಗಳೇ ನೆರೆಹೊರೆ, 17 ವರ್ಷಗಳಿಂದ ಕಾಡಿನಲ್ಲಿ ಬದುಕುತ್ತಿರೋ ವಿಚಿತ್ರ ವ್ಯಕ್ತಿ..!
Man Alone: ಪೃಕೃತಿ ಒಂದು ಅಗೋಚರ ಶಕ್ತಿ..ಪೃಕೃತಿ ಗೆ ಮನುಷ್ಯನ ಸುಪ್ತ ಮನಸ್ಸಿನಲ್ಲಿರುವ ಭಾವನೆಗಳು ಅರ್ಥ ಆಗುತ್ತದೆ.. ಒಮ್ಮೆ ಪೃಕೃತಿ ಯಲ್ಲಿ ಲೀನವಾದರೆ ಮತ್ತೆ ಹೊರಬರುವುದು ಬಹಳ ಕಷ್ಟ..ಸರಿ ಸುಮಾರು 17 ವರ್ಷಗಳ ಹಿಂದೆ ತಾನು ಸಾಲ (Debt) ತೆಗೆದುಕೊಂಡ ಸಹಕಾರಿ ಬ್ಯಾಂಕ್ ನವರು ಮೋಸ ಮಾಡಿದರು ಎಂಬ ಕಾರಣಕ್ಕಾಗಿ ಬೇಸರದಿಂದ ನಾಡು ಬಿಟ್ಟು ಕಾಡು (Forest dweller) ಸೇರಿದ ವ್ಯಕ್ತಿ ಇಂದಿಗೂ ದಟ್ಟರಾಣ್ಯದಲ್ಲಿ ತನ್ನ ನೆಚ್ಚಿನ ಕಾರಿನೊಂದಿಗೆ (Inside the car) ವಾಸಿಸುತ್ತಿರುವ ವಿಲಕ್ಷಣ ಘಟನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಸಾಕ್ಷಿಯಾಗಿದೆ..
ಸುಳ್ಯ ತಾಲೂಕಿನಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಅರಂತೋಡು ಗ್ರಾಮದ ಅಡ್ತಲೆ-ನೆಕ್ಕರೆ ದುರ್ಗಮ ಅರಣ್ಯದ ನಡುವೆ ಸಾಗಿದರೆ ಸಾಕು, ಒಂದು ಸಣ್ಣ ಪ್ಲಾಸ್ಟಿಕ್ ಹೊದಿಕೆಯುಳ್ಳ ಗುಡಿಸಲು ಕಾಣಸಿಗುತ್ತದೆ.. ಗುಡಿಸಲಿನ ಒಳಗೆ ಹಳೆಯ ಅಂಬಾಸಿಡರ್ ಕಾರ್ (Ambassador Car), ಕಾರ್ ನ ಮೇಲೊಂದು ರೇಡಿಯೋ.
ರೆಡಿಯೋದಲ್ಲಿ ಕೇಳುತ್ತಿರುವ ಮಂಗಳೂರು ಆಕಾಶವಾಣಿ ಕೇಂದ್ರದ ಹಳೆಯ ಹಿಂದಿ ಹಾಡುಗಳು..ಕಾರ್ ನ ಎದುರಲ್ಲೊಂದು ಹಳೆಯ ಸೈಕಲ್,ಆಗತಾನೇ ಮಾಡಿಟ್ಟ ನಾಲ್ಕೈದು ಬುಟ್ಟಿಗಳು..ಗುಡಿಸಲಿನ ಮೂಲೆಯಲ್ಲಿರುವ ಒಲೆಯಿಂದ ಹೊರ ಬರುತ್ತಿರುವ ಹೊಗೆ..ಈ ಹೊಗೆಯ ನಡುವೆ ಕುರುಚಲು ಗಡ್ಡ, ಹರಿದ ಅಂಗಿ, ಹವಾಯಿ ಚಪ್ಪಲಿ ಧರಿಸಿರುವ ವ್ಯಕ್ತಿ..ಹೆಸರು ಚಂದ್ರಶೇಖರ್.