ಸಿನಿಮಾ

‘ಸಂಜು ವೆಡ್ಸ್ ಗೀತಾ-2’ ಚಿತ್ರ ಯಶಸ್ವಿ ಪ್ರದರ್ಶನ

ಶಿಡ್ಲಘಟ್ಟ ಭಾಗದ ರೇಷೆ ಬೆಳೆಗಾರರ ಸಮಸ್ಯೆಗಳು ನೂರಾರು. ಬೆಳೆ ಬೆಳೆಯುವುದರಿಂದ ಹಿಡಿದು, ನೂಲು ತೆಗೆದು ಅದನ್ನು ವೈಜ್ಞಾನಿಕವಾಗಿ ಹದ ಮಾಡಿ, ಸೀರೆ ನೇಯ್ದು, ಅದನ್ನು ಗ್ರಾಹಕರಿಗೆ ತಲುಪಿಸುವತನಕ ಪಡುವ ಕಷ್ಟ-ಕಾರ್ಪಣ್ಯಗಳು ದೇವರಿಗೇ ಪ್ರೀತಿ.ಇದರ ಕುರಿತಾಗಿ ಇಲ್ಲಿನ ರೈತರು ಎಷ್ಟೇ ಹೋರಾಟಗಳನ್ನು ನಡೆಸಿದರೂ ಇಲ್ಲಿಯತನಕ ಯಾವ ಸರ್ಕಾರಗಳೂ ಇವುಗಳಿಗೆ ಪರಿಹಾರ ಕೊಡಲಿಲ್ಲ.

ಈ ಸಮಸ್ಯೆಯನ್ನು ಸಿನಿಮಾದ ಮುಖ್ಯ ಭಾಗವಾಗಿಸಿಕೊಂಡು ಕಥೆ ಹೆಣೆದಿರುವ ಚಿತ್ರವೇ ಸಂಜು ವ್ಸೆ ಗೀತಾ-2.2011ರಲ್ಲಿ ಅಂದರೆ ಸುಮಾರು 14 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸಂಜು ವ್ಸೆ ಗೀತಾ ದೊಡ್ಡ ರೊಮ್ಯಾಂಟಿಕ್ ಸಿನಿಮಾ ಆಗಿ ಹೊರಬಂದು ಬಾಕ್ಸಾಫೀಸ್ನಲ್ಲೂ ಕೂಡ ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿತ್ತು. ಈಗ ಅದೇ ಶೀರ್ಷಿಕೆಯಡಿ ಬೇರೊಂದು ಕಥೆಯನ್ನು ಹೇಳುತ್ತಾ, ಬಿಡುಗಡೆಯಾದ ಸಂಜು ವ್ಸೆ ಗೀತಾ-2, ಮೊದಲ ದಿನವೇ ರಾಜ್ಯದ ಎಲ್ಲಾ ಥಿಯೇಟರ್ಗಳಲ್ಲಿ ಭರ್ತಿಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.

ಈ ವಾರ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುತ್ತಿರುವ ಈ ಚಿತ್ರ ನಮ ನಾಡಿನ ಮಣ್ಣಿನ ಕಥೆ. ಸಮಾಜಮುಖಿ ಚಿತ್ರಗಳು ಎಂದರೇನು ಎನ್ನುವುದಕ್ಕೆ ಬಲವಾದ ನಿದರ್ಶನವಾಗಿ ನಿಲ್ಲುತ್ತದೆ. ಕಷ್ಟಪಟ್ಟು ದುಡಿಯುವವರು ಯಾರೋ, ಆ ದುಡಿಮೆಯನ್ನು ಬಂಡವಾಳ ಮಾಡಿಕೊಂಡು ಬಲಿಯುತ್ತಿರುವ ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡಿ, ತನ್ನ ಭುಜ ತಟ್ಟಲು ಯಾರೂ ಇಲ್ಲದಿದ್ದರೂ ತೊಡೆತಟ್ಟಿ ನಿಲ್ಲುವ ಕಥಾನಾಯಕ ಶ್ರೀನಗರ ಕಿಟ್ಟಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ನಟ ಶ್ರೀನಗರ ಕಿಟ್ಟಿ ತನ್ನ ಸಹಜ ಅಭಿನಯದಿಂದ ಪ್ರತಿಯೊಬ್ಬರಿಗೂ ಪ್ರಿಯವಾಗುತ್ತಾರೆ. ಲವ್,ರೊಮ್ಯಾಂಟಿಕ್ ಎಮೋಷನಲ್, ಆಕ್ಷನ್ ಎಲ್ಲಾ ದೃಶ್ಯಗಳಲ್ಲಿ ಅವರ ಪರ್ಫಾಮ್ಸೆ ಅದ್ಭುತ ಎನಿಸಿದೆ. ಸಂಜು ವ್ಸೆ ಗೀತಾ-2 ಮೊದಲ ಭಾಗಕ್ಕಿಂತ ಭಿನ್ನವಾಗಿದ್ದು, ಒಂದು ಕಡೆ ಸಮಸ್ಯೆಯ ಪರಿಹಾರ ದಾರಿಗಳನ್ನು ತೋರಿಸುತ್ತಾ, ಮತ್ತೊಂದು ಕಡೆ ಪ್ರೇಕ್ಷಕನಿಗೆ ಬೇಕಾದ ಮನರಂಜನೆ ಅಂಶಗಳನ್ನು ಕೊಡುತ್ತಾ, ಎಲ್ಲಿಯೂ ಕಣ್ಣುರೆಪ್ಪೆ ಮುಚ್ಚಿಸದೆ ಕೊನೆತನಕ ಕಾಡಿಸಿ, ರಂಜಿಸಿ ಮನದಲ್ಲಿ ಕಥೆ ಉಳಿಯುವಂತೆ ಮಾಡುತ್ತದೆ.

ನಿರ್ಮಾಪಕ ಛಲವಾದಿ ಕುಮಾರ್ ಒಂದು ಹೊಸ ಪ್ರಯತ್ನಕ್ಕೆ ತನ್ನ ನಿರ್ಮಾಣದ ಮೂಲಕ ಸಾಥ್ ನೀಡಿರುವುದು ಸ್ಕ್ರೀನ್ ಪ್ಲೇಯಲ್ಲಿ ಕಾಣುತ್ತದೆ. ಪರಭಾಷೆ ಚಿತ್ರಗಳನ್ನು ನೋಡುತ್ತಾ ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿಲ್ಲ ಎಂದು ಹೇಳುವವರು ಮೊದಲು ಹೋಗಿ ಈ ಚಿತ್ರವನ್ನು ನೋಡಿ.

ವರದಿ ಮತ್ತು ಸಂಗ್ರಹ : ಪುಣ್ಯ ಗೌಡ ಫಿಲಂ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button