ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ ‘ಓ ಬೇಬಿ, ಐ ಲವ್ ಯೂ’
ಕಳೆದ ಮೂರು ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ‘ಓ ಬೇಬಿ ಐ ಲವ್ ಯೂ’ ಹಾಡಿನ ಹವಾ ಸ್ವಲ್ಪ ಜೋರಾಗಿದೆ. ಪಡ್ಡೆ ಹೈಕ್ಳು, ಯುವ ಸಂಗೀತ ಪ್ರಿಯರು ಓ ಬೇಬಿ ಹಾಡಿಗೆ ಫಿದಾ ಆಗಿದ್ದಾರೆ. ಹೋದಲ್ಲಿ ಬಂದಲ್ಲಿ ಓ ಬೇಬಿ ಎಂದು ಗುನುಗುತ್ತಿದ್ದಾರೆ.
ಅಂದ್ಹಾಗೆ ಈ ಹಾಡನ್ನು ಕನ್ನಡದ ಯುವ ಗಾಯಕ ಚೇತನ್ ನಾಯಕ್ ಕಂಪೋಸ್ ಮಾಡಿ, ಸ್ವತಃ ಹಾಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಕಿಶನ್ ಹಾಗೂ ಸೋನಿಕಾ ಗೌಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಯುವ ನೃತ್ಯ ಸಂಯೋಜಕ ಭೂಷಣ್ ಕೊರಿಯೋಗ್ರಫಿ ಮಾಡಿದ್ದಾರೆ. ಅಶ್ವಿನ್ ಆರ್ ಕೊಡಂಗೆ ಈ ಹಾಡಿಗೆ ಗೀತೆ ರಚನೆ ಮಾಡಿದ್ದಾರೆ.
ಸೆಪ್ಟೆಂಬರ್ 17 ರಂದು ನಾಯಕ್ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್ನಲ್ಲಿ ಈ ಹಾಡು ಅಪ್ಲೋಡ್ ಆಗಿದ್ದು, ಮೂರು ದಿನದಲ್ಲಿ 50 ಸಾವಿರ ವೀಕ್ಷಣೆ ಕಂಡಿದೆ.ಸ್ವತಃ ಚೇತನ್ ನಾಯಕ್ ಅವರೇ ಈ ಹಾಡು ನಿರ್ಮಾಣ ಮಾಡಿದ್ದು, ಇದು ಇವರ ಮೊದಲ ಸ್ವತಂತ್ರ ಆಲ್ಬಮ್. ಚೇತನ್ ಜೊತೆ ಆದರ್ಶ್ ಅಯ್ಯಂಗರ್, ವಿದ್ಯಾ ವೆಂಕಟೇಶ್, ಶ್ರೇಯಾ ನಾಗೇಶ್, ಸೂರಜ್ ಹಳೆಬೀಡೆ ನಟರಾಜ್, ಸುಜಯ್ ಅಣ್ಣಾರೆಡ್ಡಿ ಸಹ ನಿರ್ಮಾಪಕರಾಗಿದ್ದಾರೆ.
ಚೇತನ್ ನಾಯಕ್ ಕನ್ನಡದ ಯುವ ಗಾಯಕ. ಕನ್ನಡದ ಹಲವು ಚಲನಚಿತ್ರಗಳಲ್ಲಿ ಹಿಟ್ ಗೀತೆಗಳನ್ನು ಹಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚಮಕ್, ಸ್ಟೈಲ್ ಕಿಂಗ್, ಯಶ್ ಅಭಿನಯದ ಕೆಜಿಎಫ್, ದುನಿಯಾ ಅಭಿನಯದ ಕನಕ, ಶಿವಣ್ಣನ ದ್ರೋಣ, ಸ್ವಾರ್ಥರತ್ನ, ಉಪೇಂದ್ರ ಅವರ ಐ ಲವ್ ಯೂ ಸಿನಿಮಾ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ಚೇತನ್ ನಾಯಕ್ ಹಾಡಿದ್ದಾರೆ.
2017ರಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಕೀಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೆಜಿಎಫ್ ಹಿಂದಿ ವರ್ಷನ್ನಲ್ಲಿ ಚೇತನ್ ನಾಯಕ್ ಪ್ರಮುಖ ಹಾಡುಗಾರನಾಗಿ ಕೆಲಸ ಮಾಡಿದ್ದಾರೆ.
ಇದೊಂದು ರೊಮ್ಯಾಂಟಿಕ್ ಹಾಡು. ಒಂದು ಹುಡುಗ ಒಂದು ಹುಡುಗಿನ ಇಂಪ್ರೆಸ್ ಮಾಡಲು ಎಷ್ಟೆಲ್ಲಾ ಪ್ರಯತ್ನ ಮಾಡ್ತಾನೆ, ತನ್ನ ಪ್ರೀತಿ ಹೇಗೆಲ್ಲಾ ವ್ಯಕ್ತಪಡಿಸುತ್ತಾನೆ ಎನ್ನುವುದು ಹಾಡು. ಕಾಲೇಜ್ವೊಂದರಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸುಮಾರು ಮೂರು ದಿನ ಶೂಟಿಂಗ್ ಮಾಡಲಾಗಿದೆ.