ಕೋವಿಡ್ -19(COVID-19) ಸಾಂಕ್ರಾಮಿಕವು 2020ರಲ್ಲಿ ಹೊರಹೊಮ್ಮಿದಾಗಿನಿಂದ ಪ್ರಪಂಚವನ್ನು ಹಲವು ವಿಧಗಳಲ್ಲಿ ಬದಲಾಯಿಸಿದೆ ಮತ್ತು ಪ್ರಪಂಚ(World Wide)ದಾದ್ಯಂತದ ಕೆಲಸದ ಸಂಸ್ಕೃತಿ(Work culture)ಯು ಅದರ ಮೇಲೆ ಪ್ರಭಾವ ಬೀರಿರುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಕೋವಿಡ್(Coronavirus) ನಂತರ ಉದ್ಯೋಗದಾತರು ಕೆಲಸದ ಸ್ಥಳವನ್ನು ಮರು ರೂಪಿಸುತ್ತಿದ್ದು, ವರ್ಕ್ ಫ್ರಮ್ ಹೋಂ(Work From Home)ನಿಂದ ಈಗ ಕೆಲಸವು ಮತ್ತೆ ಹೊಸ ರೂಪಗಳಿಗೆ ಮಾರ್ಪಾಡಾಗುವ ಸಾಧ್ಯತೆಯಿದೆ, ಮತ್ತು ವಾರಕ್ಕೆ 4 ದಿನದ ಕೆಲಸವು ಇದರಲ್ಲಿ ಒಂದಾಗಬಹುದು ಎಂದು ಹೇಳಲಾಗುತ್ತಿದೆ.
ಯಾವ ಕಂಪನಿಗಳಲ್ಲಿ ಈ ಹೊಸ ನಿಯಮ ಜಾರಿ?
ಭಾರತದಲ್ಲಿನ ಕಂಪನಿಗಳು(Indian Companies) ಸೇರಿದಂತೆ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಆರೋಗ್ಯಕರ ಕೆಲಸ-ಜೀವನ ಸಮತೋಲನ ಖಚಿತಪಡಿಸಿಕೊಳ್ಳಲು 4 ದಿನಗಳ ಕೆಲಸದ ವಾರಕ್ಕೆ ಈಗಾಗಲೇ ಸ್ಥಳಾಂತರಗೊಂಡಿವೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿ TAC, ಭಾರತದಲ್ಲಿ ತನ್ನ ಕಚೇರಿಯನ್ನು ಹೊಂದಿದ್ದು, ಈ ಕಂಪನಿ 7 ತಿಂಗಳಿಂದ ವಾರಕ್ಕೆ 4 ದಿನ ಮಾತ್ರ ಕಚೇರಿ ನಡೆಸುತ್ತಿದೆ. ‘ಕಾರ್ಮಿಕರನ್ನು ಸಂತೋಷದಿಂದ ಮತ್ತು ಹೆಚ್ಚು ಉತ್ಪಾದಕರನ್ನಾಗಿ ಮಾಡಲು’ ಶುಕ್ರವಾರವೂ ಉದ್ಯೋಗಿಗಳಿಗೆ ರಜೆ ನೀಡಲಾಗುತ್ತಿದೆ ಎಂದು ಮುಂಬೈನಲ್ಲಿ ಕಚೇರಿ ಹೊಂದಿರುವ ಈ ಕಂಪನಿ ತಿಳಿಸಿದೆ.
ಇನ್ನು, ತಂತ್ರಜ್ಞಾನ ಕಂಪನಿ ಬೋಲ್ಟ್ ಜಾಗತಿಕವಾಗಿ ಈ ಹೊಸ ಮಾದರಿಗೆ ಬದಲಾದ ಹೊಸ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು CNBC ವರದಿ ಮಾಡಿದೆ. ವಾರಕ್ಕೆ 4 ದಿನ ಕೆಲಸ ಎಂಬ ಜಾಗತಿಕ ಅಭಿಯಾನದ ಬಳಿಕ ಕಂಪನಿಗಳು ಈ ಕ್ರಮ ಕೈಗೊಳ್ಳುತ್ತಿದೆ ಎಂದೂ ವರದಿ ಹೇಳಿದೆ.
ಎಷ್ಟು ಕೆಲಸ ಮಾಡುತ್ತೀರಿ ಎಂಬುದು ಮುಖ್ಯ
“ನೀವು ಕಚೇರಿಯಲ್ಲಿ ಎಷ್ಟು ಹೊತ್ತು ಇದ್ದೀರಿ ಎಂಬುದನ್ನು ಅಳೆಯುವ ಹಳೆಯ ಕೆಲಸದ ಮಾದರಿಯನ್ನು ಬದಲಾಯಿಸುತ್ತಿದ್ದೇವೆ ಮತ್ತು ಜನರು ವಾಸ್ತವವಾಗಿ ಏನು ಕೆಲಸ ಮಾಡುತ್ತಿದ್ದಾರೆ ಮತ್ತು ವಾರದ ಅವಧಿಯಲ್ಲಿ ನಾವು ಯಾವ ಫಲಿತಾಂಶಗಳನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಎಂಬ ಮಾದರಿ ಅಳವಡಿಸಿಕೊಳ್ಳುತ್ತಿದ್ದೇವೆ” ಎಂದು 4 Day Week Globalನ ಜಾಗತಿಕ ಪೈಲಟ್ ಪ್ರೋಗ್ರಾಂ ಮ್ಯಾನೇಜರ್ ಜೋ ಒ’ಕಾನರ್ ಹೇಳಿರುವ ಬಗ್ಗೆ CNBC ವರದಿ ಉಲ್ಲೇಖಿಸಿದೆ.