ದಾವಣಗೆರೆ: ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (m p renukacharya) ಇತ್ತೀಚೆಗೆ ಸಮಾಜಮುಖಿ ಕಾರ್ಯಗಳ ಮೂಲಕ ಸುದ್ದಿಯಲ್ಲಿದ್ದಾರೆ. ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಸಚಿವ ಆರ್.ಅಶೋಕ್ (R.Ashok) ಕ್ಷೇತ್ರಕ್ಕೆ ಭೇಟಿ ನೀಡಿದಾಗ ಖುದ್ದು ರೇಣುಕಾಚಾರ್ಯ ಎತ್ತಿನ ಬಂಡಿಯ ಸಾರಥ್ಯವಹಿಸಿದ್ದರು. ಈಗ ಮತ್ತೆ ತಮ್ಮ ವಿಭಿನ್ನ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ.
ಗ್ರಾಮ ವಾಸ್ತವ್ಯದ ವೇಳೆ ಸಚಿವ ಆರ್.ಅಶೋಕ್ ಹಾಗೂ ರೇಣುಕಾಚಾರ್ಯ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ್ದಾರೆ. ಈ ವೇಳೆ ರೇಣುಕಾಚಾರ್ಯ ತಟ್ಟೆಯನ್ನೂ ತೊಳೆದಿಡುವ ಮೂಲಕ ಗಮನ ಸೆಳೆದಿದ್ದಾರೆ.
ಕುಂದೂರು ಗ್ರಾಮದ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಬಳಿಕ ಶಾಸಕರು ತಟ್ಟೆ ತೊಳೆದಿಟ್ಟಿದ್ದಾರೆ. ಯಾವುದೇ ಹಮ್ಮಬಿಮ್ಮ ಇಲ್ಲದೇ ಅಡುಗೆ ಮನೆಗೆ ಹೋಗಿ ತಟ್ಟೆಯನ್ನು ತೊಳೆದಿದ್ದಾರೆ. ಶಾಸಕರ ವರ್ತನೆಗೆ ಮನೆಯವರೇ ಅಚ್ಚರಿಗೊಳಗಾದರು. ಶಾಸಕರ ಸರಳತೆ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಖುದ್ದು ಸಚಿವರು ಟ್ವೀಟ್ ಮಾಡಿದ್ದು, ದಲಿತ ಮನೆಯಲ್ಲಿ ಉಪಹಾರ ಮಾತ್ರವಲ್ಲ ಮಧ್ಯಾಹ್ನಕ್ಕೆ ಊಟವನ್ನು ಬುತ್ತಿ ಕಟ್ಟಿಸಿಕೊಂಡಿರುವ ಬಗ್ಗೆ ಬರೆದುಕೊಂಡಿದ್ದಾರೆ.