ರಾಜ್ಯ
ಅ.1ರಂದು ಸಾರ್ವಜನಿಕರಿಗೆ ಅರಮನೆಗೆ ಪ್ರವೇಶ ನಿಷೇಧ
ಮೈಸೂರು, ಸೆ,23.- ಜಗದ್ವಿಖ್ಯಾತ ಮೈಸೂರು ದಸರಾಗೆ ಕೇವಲ ಎರಡು ವಾರಗಳು ಮಾತ್ರ ಬಾಕಿ ಇದ್ದು ರಾಜಮನೆತನದವರು ಅರಮನೆಯಲ್ಲಿ ದಸರಾ ಸಿದ್ಧತೆಯನ್ನು ಪ್ರಾರಂಭಿಸಿದ್ದಾರೆ.ಈ ಹಿನೆಲೆಯಲ್ಲಿ ಅಕ್ಟೋಬರ್ ಒಂದರಂದು ಮೈಸೂರು ಅರಮನೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಅಕ್ಟೋಬರ್ 1ರಂದು ಅಭಿಜಿತ್ ಲಗ್ನದಲ್ಲಿ ಸಿಂಹಾಸನ ಜೋಡಣಾ ಕಾರ್ಯ ಪ್ರಾರಂಭವಾಗಲಿದ್ದು ಇದಕ್ಕೂ ಮುನ್ನ ಹೋಮ-ಹವನ ನಡೆಸಲಾಗುತ್ತದೆ. ಕಲವೇ ಪ್ರಮುಖರ ಸಮ್ಮುಖದಲ್ಲಿ ಸಿಂಹಾಸನಾ ಜೋಡಣಾ ಕಾರ್ಯ ನಡೆಯಲಿದೆ. ಹಾಗಾಗಿ ಅಂದು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.