ದೇಶ

ಅಂಬೇಡ್ಕರ್ ಪರಂಪರಗೆ ಧಕ್ಕೆಯಾದರೆ ದೇಶ ಸಹಿಸುವುದಿಲ್ಲ; ಕಮಲ್ ಹಾಸನ್

ಚೆನ್ನೈ: ಸಂವಿಧಾನದ ಶಿಲ್ಪಿ ರೂಪಿಸಿದ ವಿಚಾರಗಳು ಜನರ ಭಾವನೆಗಳನ್ನು ಕೆರಳಿಸಲು ದುರುಪಯೋಗಪಡಿಸಿಕೊ ಳ್ಳುವ ಬದಲು ಪ್ರಗತಿಗೆ ಪ್ರೇರೇಪಿಸಬೇ ಕು ಎಂದು ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕ‌ರ್ ಅವರನ್ನು ಕುರಿ ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವ್ಯಂಗ್ಯದ ಹೇಳಿಕೆ ಕು- ರಿತು ಉಂಟಾಗಿರುವ ವಿವಾದದ ನಡುವೆ ಕಮಲ್ ಹಾಸನ್ ಈ ರೀತಿ ಪ್ರತಿಕ್ರಿಯಿ ಸಿದ್ದಾರೆ. ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳನ್ನು ಬಣ್ಣಿಸಿದ್ದಾರೆ. ಮಹಾತ್ಮಾ ಗಾಂಧೀಜಿ ಪೂರೈಸುತ್ತಿರುವ ಸ್ಮರಣಾ ರ್ಥವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳ ಕುರಿ ತು ಚರ್ಚೆ ನಡೆ ಸುವಂತೆ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಂಬೇಡ್ಕರ್ ಅವರ ಕೊಡುಗೆಗಳನ್ನು ಆಧುನಿ ಕ ಭಾರತದ ಅಡಿಪಾಯ ಎಂದುಅವರು ಭಾರತವನ್ನು ವಿದೇಶಿದಬ್ಬಾಳಿಕೆ ಯಿಂದ ಮುಕ್ತಗೊಳಿಸಿದರೆ,ಡಾ. ಅಂಬೇಡ್ಕರ್ ಭಾರತವನ್ನು ತನ್ನದೇ ಆದ ಪ್ರಾಚೀನ ಸಾಮಾಜಿಕಅನ್ಯಾಯದ ಸಂಕೋಲೆಯಿಂದ ಬಿಡುಗಡೆ ಮಾಡಿದರು ಎಂದು ಹೇಳಿದ್ದಾರೆ.

ಅಂಬೇಡ್ಕರ್ ಅವರ ಪರಂಪರೆಯನ್ನು ರಕ್ಷಿಸುವ ಮಹತ್ವವನ್ನುಅವರು ಒತ್ತಿ ಹೇಳಿದ್ದು, ಅದರ ದುರುಪಯೋಗದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಎಲ್ಲರೂ ಸಮಾನವಾಗಿ ಹುಟ್ಟಿರುವ ಮುಕ್ತ ಮತ್ತು ನ್ಯಾಯಯುತ ಭಾರತಕ್ಕಾಗಿ ಬಾಬಾಸಾಹೇಬರ ದೃಷ್ಟಿಕೋನವನ್ನು ಹೆಮ್ಮೆಯಿಂದ ನಂಬುವ, ಹೋರಾಡುವ ಪ್ರತಿಯೊಬ್ಬ ಭಾರತೀಯನು ಎಂದಿಗೂ ಮಹಾನ್ ವ್ಯಕ್ತಿಯ ಪರಂಪರೆಗೆ ಕಳಂ ಕವಾಗುವುದನ್ನು ಸಹಿಸುವುದಿಲ್ಲ ಎಂ ದು ಅವರು ತಿಳಿಸಿದ್ದಾರೆ. ಅಂಬೇಡ್ಕರ್ ಅವರ ವಿಚಾರ ಧಾರೆಗ ಳನ್ನು ಕುರಿತು ಸಂಸತ್ತಿನಲ್ಲಿ ಅರ್ಥ ಪೂರ್ಣ ಚರ್ಚೆ ನಡೆಯಬೇಕು. ಇಂತಹ ಚರ್ಚೆಗಳು ಪ್ರಗತಿಗೆ ಪ್ರೇರಣೆ ಯಾಗಬೇಕು. ಆಧುನಿಕ ಮ ತ್ತು ನೈತಿಕ ಜಾಗತಿಕ ಶಕ್ತಿಯಾಗಿ, ನಾವು ಸಂಸತ್ತಿನ ಗೌರವಾ ನ್ವಿತ ಸಭಾಂಗಣಗಳಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಅರ್ಥಪೂರ್ಣ ಚರ್ಚೆಯೊಂದಿಗೆ ನಮ್ಮ ಸಂವಿಧಾನದ 75 ವರ್ಷಗಳ ಅಂಗೀ ಕಾರವನ್ನು ಸ್ಮರಿಸಬೇಕು ಎಂದು ಒತ್ತಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button