ತಿರುಪತಿ: ಅ.7ರಿಂದ ಬ್ರಹ್ಮ ರಥೋತ್ಸವ, 1000 ಜನರಿಗೆ ಮಾತ್ರ ಅವಕಾಶ
ತಿರುಮಲ: ವಿಶ್ವವಿಖ್ಯಾತ ತಿರುಪತಿಯಲ್ಲಿ ಅ.೭ರಿಂದ ಶ್ರೀವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವಗಳು ಆರಂಭವಾಗಲಿವೆ. ಈ ಮಹಾ ಉತ್ಸವಕ್ಕೆ ಅಧಿಕ ಜನ ಸೇರುವುದನ್ನು ತಪ್ಪಿಸಿಲು ತಿರುಮಲ ತಿರುಪತಿ ದೇವಸ್ಥಾನಗಳ ಟ್ರಸ್ಟ್ (ಟಿಟಿಡಿ) ಕ್ರಮ ಕೈಗೊಂಡಿದ್ದು, ೧,೦೦೦ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಅ. ೭ರಂದು ಧ್ಜಜಾರೋಹಣದ ಮೂಲಕ ನವ ದಿನಗಳ ಬ್ರಹ್ಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಅ.೧೧ ಗರುಡ ಸೇವೆ, ಅ.೧೨ ಚಿನ್ನದ ರಥ ಸೇವೆ, ಅ.೧೪ ರಥೋತ್ಸವ ಹಾಗೂ ಅ.೧೫ರಂದು ಅಂತಿಮವಾಗಿ ಚಕ್ರಸ್ನಾನ ಹಾಗೂ ಸಮಾರೋಪ ಧ್ವಜಾರೋಹಣ ನೆರವೇರಲಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
ಆಂಧ್ರಪ್ರದೇಶದ ವಿವಿಧ ಸ್ಥಳಗಳಿಂದ ದುರ್ಬಲ ವರ್ಗಗಳಿಗೆ ಸೇರಿದ ಭಕ್ತರಿಗೆ ವಾರ್ಷಿಕ ಬ್ರಹ್ಮೋತ್ಸವದ ಸಮಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುವುದು. ದಿನಕ್ಕೆ ೧೦೦೦ ಜನರ ಮಿತಿ ನಿಗದಿಪಡಿಸಲಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜವಹರ್ ರೆಡ್ಡಿ ತಿಳಿಸಿದ್ದಾರೆ. ು.
ಕೋವಿಡ್ ಹಿನ್ನೆಲೆ ಈ ವರ್ಷವೂ ಸ್ವರ್ಗೀಯ ಕಾರ್ಯಕ್ರಮವನ್ನು ಏಕಾಂತದಲ್ಲಿ ನಡೆಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಗಳ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.