PM MODI: ಭಾರತದ ಬಾವುಟ, ಪ್ರಧಾನಿ ಮೋದಿ ಪೋಸ್ಟರ್ ನ್ನು ಕಾಲಿನಿಂದ ಒದ್ದ ಸಿಖ್ ಬಾಲಕರು!- VIDEO

ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್ಗಳನ್ನು ಸಿಖ್ ಮಕ್ಕಳು ಒದೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ಘಟನೆಯನ್ನು ವಿಶ್ವ ಪಂಜಾಬಿ ಸಂಘಟನೆಯ ಅಂತರರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ವಿಕ್ರಮ್ಜಿತ್ ಸಿಂಗ್ ಸಾಹ್ನಿ ಸೋಮವಾರ ಖಂಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ನಲ್ಲಿ ವಿಡಿಯೋ ಹಂಚಿಕೊಂಡು ಅವರು ಬರೆದಿದ್ದಾರೆ. ವಿಡಿಯೋದಲ್ಲಿ ಟ್ರಕ್ ಒಂದರಲ್ಲಿ ಪ್ರಧಾನಿ ಮೋದಿಯವರ ಚಿತ್ರ ಹಾಗೂ ತ್ರಿವರ್ಣ ಧ್ವಜ ಇರುವುದು ಕಾಣಿಸಿಕೊಂಡಿದೆ. ಮಕ್ಕಳು ಪದೇ ಪದೇ ತಮ್ಮ ಕಾಲಿನಿಂದ ಮೋದಿ ಅವರ ಫೋಟೋಗೆ ಒದೆಯುತ್ತಿರುವುದು ಕಾಣಿಸಿಕೊಂಡಿದೆ.
ಈ ಬಗ್ಗೆ ಬರೆದುಕೊಂಡಿರುವ ಅವರು, ಪುಟ್ಟ ಹಾಗೂ ಮುಗ್ದ ಮನಸುಗಳನ್ನು ಭರವಸೆಯಿಂದ ಪೋಷಿಸುವ ಬದಲು ದ್ವೇಷದಿಂದ ಪೋಷಿಸಲಾಗುತ್ತಿದೆ. ಇದು ದುರದೃಷ್ಟಕರ. ನೈತಿಕ ಮೌಲ್ಯಗಳನ್ನು ನಮ್ಮ ಮಕ್ಕಳಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಕರ್ತಾರ್ಪುರ ಕಾರಿಡಾರ್ ಮತ್ತು ಹೇಮಕುಂಟ್ ಸಾಹಿಬ್ ರೋಪ್ವೇ ಉದ್ಘಾಟನೆ ಸೇರಿದಂತೆ ವಿವಿಧ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂಬುದನ್ನು ಯಾರೂ ಮರೆಯಬಾರದು ಎಂದು ಅವರು ಹೇಳಿದ್ದಾರೆ.