ಬೆಳಗಾವಿ (ಅಕ್ಟೋಬರ್. 11)- ಬೆಳಗಾವಿ ಜಿಲ್ಲೆಯ ರಾಜಕೀಯ ಪೈಪೋಟಿ, ಪರಸ್ಪರ ಹೋರಾಟಕ್ಕೆ ಹೆಸರಾಗಿದೆ. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಥಾಪನೆ ಮಾಡಿದ ಕೆಜೆಪಿ ಪಕ್ಷದಲ್ಲಿ ವಿಲೀನಗೊಂಡು ವರ್ಷಗಳೇ ಉರುಳಿದೆ. ಆದರೆ ಇನ್ನೂ ಕೆಜೆಪಿ, ಬಿಜೆಪಿ ನಡುವೆ ಮಾತ್ರ ಇನ್ನೂ ಮುಸುಕಿನ ಗುದ್ದಾಟ ಇದೆ. ಇದಕ್ಕೆ ಸಾಕ್ಷಿ ಎಂಬತೆ ಇದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಿರಿ ಹುದ್ದೆ. ಹಾಲಿ ಅಧ್ಯಕ್ಷ ಘೂಳಪ್ಪ ಹೊಸಮನಿ ವಿರುದ್ಧ ಬಿಜೆಪಿ ಶಾಸಕರು ಅಸಹಕಾರ ಆರಂಭಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಗುದ್ದಾಟ ನಡೆಯುತ್ತಿದ್ದು, ಇದರಿಂದ ನಗರ ಅಭಿವೃದ್ಧಿಗೆ ಪೆಟ್ಟು ಬಿದ್ದಿದೆ.
ಬಿಎಸ್ವೈ ಆಪ್ತನಿಗೆ ಬೂಡಾ ಅಧ್ಯಕ್ಷ ಸ್ಥಾನ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಇಂದು ನಡೆಯಿತು. ಸಭೆಗೆ ಬಿಜೆಪಿ ಇಬ್ಬರು ಶಾಸಕರು ಹಾಗೂ ನಾಲ್ವರು ನಾಮನಿರ್ದೇಶಿತ ಸದಸ್ಯರು ಗೈರಾದರು. ಈ ಮೂಲಕ ಬೂಡಾದಲ್ಲಿನ ರಾಜಕೀಯ ಬಹಿರಂಗವಾಗಿದೆ ಸದ್ಯ ಬಿಜೆಪಿಯ ಘೂಳಪ್ಪ ಹೊಸಮನಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಸಿಎಂ ಬಿ ಎಸ್ ಯಡಿಯೂರಪ್ಪ ಸ್ಥಳೀಯ ಮುಖಂಡರ ಅಭಿಪ್ರಾಯ ಕೇಳದೆ ಹೊಸಮನಿ ನೇಮಕ ಮಾಡಿದ್ದರು.
ಇನ್ನೂ ಹೊಸಮನಿ ಸಹ ಬಿ ಎಸ್ ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಜೊತೆಯಲ್ಲಿ ಕೆಜೆಪಿಯಿಂದ ಬಿಜೆಪಿ ಬಂದಿದ್ದರು. ಹೊಸಮನಿಗೆ ಬೂಡಾ ಅಧ್ಯಕ್ಷಗಿರಿ ಸಿಕ್ಕಿದ್ದ ಪಕ್ಷದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೂಡಾದಲ್ಲಿ ನಡೆದ ಯಾವುದೇ ಸಭೆಗೆ ಸ್ಥಳೀಯ ಬಿಜೆಪಿ ಇಬ್ಬರು ಶಾಸಕರು ಗೈರಾಗಿದ್ದಾರೆ.