ರಾಜ್ಯಸುದ್ದಿ

ಎಂಟು ವರ್ಷದಲ್ಲಿ ಒಮ್ಮೆಯೂ ಪ್ರಪೋಸ್ ಮಾಡದ ಗಂಡ: ಕೋಪಗೊಂಡ ಪತ್ನಿ ತೆಗೆದುಕೊಂಡ ನಿರ್ಧಾರ ಕೇಳಿದ್ರೆ ನೀವು ಶಾಕ್ ಆಗ್ತೀರಿ..!

ಗಂಡ-ಹೆಂಡತಿ (Husband And Wife)ಅಂದ್ರೆ ಒಬ್ಬರಿಗೆ ಮತ್ತೊಬ್ಬರು ಸೋಲುವುದು ಎಂದರ್ಥ. ಎಷ್ಟೇ ದೊಡ್ಡ ಜಗಳಗಳಿದ್ರೂ ಒಂದು Sorry ಅನ್ನೋ ಪದ ಎಲ್ಲವನ್ನು ಸಮಸ್ಯೆಯನ್ನು ಶಮನ ಮಾಡುತ್ತೆ. ಆದ್ರೆ ಈ ಒಂದು Sorry  ಮೊದಲು ಯಾರು ಹೇಳಬೇಕು ಅನ್ನೋದು ಪ್ರಶ್ನೆ. ಬದುಕಿನ (Life) ಬಂಡಿ ಸಾಗಬೇಕಾದ್ರೆ, ಇಬ್ಬರಲ್ಲಿ  ಒಬ್ಬರು Sorry ಕೇಳಲೇಬೇಕು. ಆದ್ರೂ ಒಮ್ಮೊಮ್ಮೆ  ಸಣ್ಣ ಸಣ್ಣ ವಿಷಯಗಳಿಗೆ ಗಂಡ-ಹೆಂಡತಿ ನಡುವೆ ಮನಸ್ತಾಪ ಉಂಟಾಗಿ ವಿಚ್ಛೇದನ (Divorce) ಸಹ ಪಡೆದುಕೊಳ್ಳುತ್ತಾರೆ. ಇಲ್ಲೊಬ್ಬ ಮಹಿಳೆ ಕಳೆದ ಎಂಟು ವರ್ಷದಲ್ಲಿ ಪತಿ ಒಮ್ಮೆಯೂ ರೊಮ್ಯಾಂಟಿಕ್ ಆಗಿ ಪ್ರಪೋಸ್ (Propose) ಮಾಡಿಲ್ಲ ಎಂದು ನ್ಯಾಯಾಲಯದ (Court) ಮೊರೆ ಹೋಗಿದ್ದಾಳೆ. ಇದರ ಜೊತೆಗೆ ಪತಿಯ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾಳೆ.

ದಶಕದಿಂದ ಸಂಬಂಧದಲ್ಲಿರುವ ಜೋಡಿ

26 ವರ್ಷದ ಗೆರ್ಟ್ರೂಡ್ ಎನ್ಗೊಮಾ ಮತ್ತು 28 ವರ್ಷದ ಹರ್ಬರ್ಟ್ ಸಲಾಲಿಕಿ ಕಳೆದ 10 ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ದಾರೆ. ದಂಪತಿಗೆ ಒಂದು ಮಗು ಸಹ ಇದೆ. ರಿಲೇಶನ್ ಶಿಪ್ ಆರಂಭದಲ್ಲಿ ಹರ್ಬರ್ಟ್ ನೀಡಿದ ಎಲ್ಲ  ಮಾತುಗಳನ್ನು ಮರೆಯುತ್ತಿದ್ದಾನೆ. ಮಗುವಿನ ಜವಾಬ್ದಾರಿ ಸಹ ತೆಗೆದುಕೊಳ್ಳುತ್ತಿಲ್ಲ. ಮಗುವಿನ ಲಾಲನೆ-ಪಾಲನೆಯ ವಿಷಯವಾಗಿ ಇಬ್ಬರ ಮಧ್ಯೆ ಬಿರುಕು ಮೂಡಿದೆ.

ನ್ಯಾಯಾಲಯದ ಮೊರೆ

ಜವಾಬ್ದಾರಿಗಳು ಹೆಚ್ಚಾದ ನಂತರ ಹರ್ಬರ್ಟ್ ತನ್ನ ಕರ್ತವ್ಯಗಳಿಂದ ಹಿಂದೆ ಸರಿಯುತ್ತಿದ್ದಾನೆ. ಸಂಬಂಧದ ಬಗ್ಗೆ ಮೊದಲಿಗೆ ತೋರಿಸುತ್ತಿದ್ದ ಬದ್ಧತೆ ಸಹ ಇಲ್ಲ. ಮಾತು ತಪ್ಪಿದ ಹಿನ್ನೆಲೆ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ದಶಕಗಳಾದರೂ ಒಮ್ಮೆಯೂ ಹರ್ಬರ್ಟ್ ಪ್ರಪೋಸ್ ಮಾಡಿಲ್ಲ. ಆತ ನನ್ನನ್ನು ಮೆಚ್ಚಿಸುವಲ್ಲಿ ಸಹ ವಿಫಲವಾಗಿದ್ದಾನೆ ಎಂದು ಎನ್ಗೊಮಾ ಆರೋಪಿಸಿದ್ದಾಳೆ.

Related Articles

Leave a Reply

Your email address will not be published. Required fields are marked *

Back to top button