ರಾಜ್ಯಸುದ್ದಿ

ಸಿಎಂ ತವರು ಜಿಲ್ಲೆಯಲ್ಲೇ ಸೋಲು: ಬಿಜೆಪಿ ನಾಯಕರ ಮಹತ್ವದ ನಿರ್ಧಾರ..!

ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯ ಫಲಿತಾಂಶ (Karnataka By Election Results 2021) ಹೊರ ಬಂದಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai)ತವರು ಜಿಲ್ಲೆಯಲ್ಲಿಯೇ ಬಿಜೆಪಿ ಸೋತಿದೆ. ಹಾಗಾಗಿ ವಿಪಕ್ಷಗಳು ಇದನ್ನೇ ಗಾಳವಾಗಿ ತೆಗೆದುಕೊಂಡು ಸಿಎಂ  ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(KPCC President DK Shivakumar), ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.  ಹಾನಗಲ್ ಕ್ಷೇತ್ರದ ಸೋಲಿನಿಂದ ಕೆಂಗಟ್ಟಿರುವ ಕಮಲ ನಾಯಕರು ಸೋಲಿನ ಪರಮಾರ್ಶೆ ನಡೆಸಲು ಬೆಂಗಳೂರಿನಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ.

ಹಾನಗಲ್ ಸೋಲಿನ ಪರಮಾರ್ಶೆ ಸಭೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ನೇತೃತ್ವದಲ್ಲಿ ನಡೆಯಲಿದೆ. ನವೆಂಬರ್ 9ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಗೆ ಅರುಣ್ ಸಿಂಗ್, ರಾಜ್ಯ ಬಿಜೆಪಿ ಪದಾಧಿಕಾರಿಗಳನ್ನು ಅಹ್ವಾನಿಸಲಾಗಿದೆ. ನವಂಬರ್ ೯ ರ ಸಭೆಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ (BL Santhosh) ಭಾಗಿಯಾಗುವ ಸಾಧ್ಯತೆಗಳಿವೆ. ಆದ್ರೆ ಈ ಬಗ್ಗೆ ಅಧಿಕೃತಗೊಂಡಿಲ್ಲ.

ಸೋಲಿನ ಬಗ್ಗೆ ಗಂಭೀರ ಚರ್ಚೆ

ಮುಂದೆ ವಿಧಾನ ಪರಿಷತ್, ಜಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ನಡೆಯಲಿವೆ. ಹಾಗಾಗಿ ಹಾನಗಲ್ ಸೋಲಿನ ಬಗ್ಗೆ ಗಂಭೀರ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಇದೇ ವೇಳೆ ಬಿಬಿಎಂಪಿ (BBMP) ಚುನಾವಣೆ ತಯಾರಿಯ ರೂಪರೇಷ ಸಿದ್ಧಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button