ಶ್ರೀ ಗುರುಬಸವೇಶ್ವರ ಪೋಟೋ ಮತ್ತು ವಿಡಿಯೋಗ್ರಾಫರ್ ಸ್ವಾಚ್ಚತೆ ಕಾರ್ಯಕ್ರಮ.

ಕೊಟ್ಟೂರು : ತಾಲೂಕು ಶ್ರೀ ಗುರು ಬಸವೇಶ್ವರ ಪೋಟೋ ಮತ್ತು ವಿಡಿಯೋಗ್ರಾಫರ್
ಟ್ರಸ್ಟ್(ರಿ) ಇವರ ವತಿಯಿಂದ
ಪಟ್ಟಣದಲ್ಲಿ ಭಾನುವಾರ ಸ್ವಾಚ್ಚತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.
ಕೊಟ್ಟೂರಿನ ಶ್ರೀಗುರು ಬಸವೇಶ್ವರ ಸ್ವಾಮಿ ದೇವಾಲಯ , ತೊಟ್ಟಿಲಮಠ, ಊರಮ್ಮನ ಬಯಲು , ದ್ವಾರಭಾಗಿಲದಿಂದ ಗಾಂಧಿ ವೃತ್ತ ಹಾಗೂ ಪ್ರಮುಖ ರಸ್ತೆಗಳ ಮೂಲಕ ವಿಠಲ್ ವೃತ್ತ, ಸ್ವಚ್ಚತೆಯನ್ನು ಮಾಡಿ ತಮ್ಮ ಸ್ವಂತ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿಕೊಂಡು ಕಸವನ್ನು ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಕೇಂದ್ರಕ್ಕೆ ತಲುಪಿಸಿ ಎಲ್ಲಾ ನಾಗರಿಕರು ಇವರ ಸ್ವಚ್ಚತಾ ಕಾರ್ಯಕ್ರಮವನ್ನು ನೋಡಿ ಒಳ್ಳೆಯ ಕಾರ್ಯ ಎಂದು ತಿಳಿಸಿದರು .ದಿನ ಪ್ರತಿ ಫೋಟೋ ವೃತ್ತಿ ಜೀವನದಲ್ಲಿ ತೋಡಗಿಸಿಕೊಂಡು ಆರಾಧ್ಯ ದೇವ ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವ ಜರುಗಿದ ಹಿನ್ನಲೆಯಲ್ಲಿ ತಮ್ಮ ಅಳಿಲು ಸೇವೆ ಮಾಡಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದೇವೆ ಎಂದು ಕೆ ಜಿ ಕೊಟ್ರೇಶ್ ತಾಲೂಕ ಅಧ್ಯಕ್ಷ ಪತ್ರೀಕೆಗೆ ತಿಳಿಸಿದರು.
ಗುಬ್ಬಿ ಜಿಲ್ಲಾ ಅದ್ಯಕ್ಷರು. ಪ್ರವೀಣ. ಎಸ್.ಹನುಮರೆಡ್ಡಿ.ವಿರೇಶ್. ನಾಗಭೂಷಣ. ರಾಜಪ್ಪ.ಕೊಟ್ರೇಶ್ ಅಯ್ಯನಹಳ್ಳಿ.ವಿನಯ್ ಹಳ್ಳಿ.ಶರತ್.ಕಿರಣಕುಮಾರ ಕಾರ್ತಿಕ್.ಅರುಣ್.ರಾಜಭಕ್ಷಿ.ಕಾಳೇಶ್.ವಜೀರ್.ಬಾಲರಾಜ್.ಗಣೇಶ್.ನಿಂಗರಾಜ್.ಕಿರಣ ಇತರರು ಇದ್ದರು.