ಇಂದು ಇಂಡೋ-ಪಾಕ್ ಹೈವೋಲ್ಟೇಜ್ ಕದನ ; ದುಬೈನಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ರೆಕಾರ್ಡ್ಸ್ ಹೇಗಿದೆ ಬನ್ನಿ ನೋಡೋಣ?

ದುಬೈ: ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿರುವ ಇಂಡಿಯಾ-ಪಾಕಿಸ್ತಾನ ಮ್ಯಾಚ್ಗೆ ಎಲ್ಲವೂ ರೆಡಿಯಾಗಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಮ್ಯಾಚ್ ಇದಾಗಿದ್ದು, ಈ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ದುಬೈ ಪಿಚ್ ರಿಪೋರ್ಟ್, ರೆಕಾರ್ಡ್ಸ್ ಡೀಟೈಲ್ಸ್ ತಿಳಿಯೋಣ ಬನ್ನಿ
ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ನಡೆಯುವ ಐದನೇ ಮ್ಯಾಚ್ನಲ್ಲಿ ಇಂಡಿಯಾ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಮ್ಯಾಚ್ ಯುಎಇಯ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಫೆಬ್ರವರಿ 23, ಭಾನುವಾರ ನಡೆಯುವ ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಆರಂಭ ಆಗುತ್ತದೆ. ಟಾಸ್ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಈ ಮ್ಯಾಚ್ ಪಾಕಿಸ್ತಾನಕ್ಕೆ ಡು ಆರ್ ಡೈ ಇದ್ದ ಹಾಗೆ. ಸೋತರೆ ಪಾಕ್ ಟೂರ್ನಿಯಿಂದ ಬಹುತೇಕ ಔಟ್ ಆಗುತ್ತದೆ. ಇನ್ನು ಇಂಡಿಯಾ ಗೆದ್ದರೆ ಸೆಮೀಸ್ಗೆ ಬಹುತೇಕ ಎಂಟ್ರಿ ಕೊಡಲಿದೆ. ಮ್ಯಾಚ್ ನಡೆಯುವ ದುಬೈ ಕ್ರಿಕೆಟ್ ಸ್ಟೇಡಿಯಂ ಪಿಚ್ ರಿಪೋರ್ಟ್, ಇಲ್ಲಿ ಇಂಡಿಯಾ, ಪಾಕಿಸ್ತಾನ ರೆಕಾರ್ಡ್ಸ್ ಡೀಟೇಲ್ಸ್ ನೋಡೋದಾದರೇ.

ಇಂಡಿಯಾ-ಪಾಕಿಸ್ತಾನ ಮ್ಯಾಚ್ ಪಿಚ್ ರಿಪೋರ್ಟ್
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿನ ಪಿಚ್ ಸಾಮಾನ್ಯವಾಗಿ ಸ್ಲೋ ಟ್ರ್ಯಾಕ್ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಈ ಪಿಚ್ನಲ್ಲಿ ಹೊಸ ಚೆಂಡು ವೇಗದ ಬೌಲರ್ಗಳಿಗೆ ಸಹಾಯ ಮಾಡುತ್ತದೆ. ಮ್ಯಾಚ್ ಸಾಗುತ್ತಿದ್ದಂತೆ ಸ್ಪಿನ್ನರ್ಗಳಿಗೂ ನೆರವಾಗುತ್ತದೆ. ಅಂದರೆ ಒಟ್ಟಾರೆಯಾಗಿ ದುಬೈ ಪಿಚ್ ಬೌಲರ್ಗಳಿಗೆ ಅನುಕೂಲಕರವಾಗಿರುತ್ತದೆ.
ಭಾರತ-ಪಾಕಿಸ್ತಾನ ಮ್ಯಾಚ್ ದಿನ ವಾತಾವರಣ ಹೇಗಿರುತ್ತದೆ?
ಫೆಬ್ರವರಿ 23ರಂದು ದುಬೈನಲ್ಲಿ ವಾತಾವರಣ ಸಾಮಾನ್ಯವಾಗಿ ಇರುತ್ತದೆ. ಮ್ಯಾಚ್ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ಹಾಗಾಗಿ ಮ್ಯಾಚ್ಗೆ ಎಲ್ಲಿಯೂ ತೊಂದರೆಯಾಗುವ ಸಾಧ್ಯತೆ ಇರುವುದಿಲ್ಲ. ಅಭಿಮಾನಿಗಳು ಪೂರ್ತಿ ಮ್ಯಾಚ್ ನೋಡಬಹುದು. ಭಾನುವಾರ ದುಬೈನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಕೊಂಚ ಮೋಡಗಳು ಕೂಡ ಇರಬಹುದು. ಗಂಟೆಗೆ 30 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತದೆ. ಸಂಜೆ ವೇಳೆಯಲ್ಲಿ ಕೊಂಚ ಮಂಜು ಬೀಳಬಹುದು. ಹಾಗಾಗಿ ಇದು ಕೂಡ ಮ್ಯಾಚ್ ಮೇಲೆ ಪರಿಣಾಮ ಬೀರುವ ಚಾನ್ಸ್ ಇರುತ್ತದೆ.

ಭಾರತ-ಪಾಕಿಸ್ತಾನ ಮ್ಯಾಚ್ನಲ್ಲಿ ಯಾವ ಬೌಲರ್ಗಳು ಇಂಪ್ಯಾಕ್ಟ್ ಮಾಡ್ತಾರೆ?
ದುಬೈ ಪಿಚ್ ಬೌಲರ್ಗಳಿಗೆ ಅನುಕೂಲಕರವಾಗಿರುತ್ತದೆ. ಭಾರತದ ವೇಗದ ಬೌಲರ್ಗಳಾದ ಮೊಹಮ್ಮದ್ ಶಮಿ, ಹರ್ಷಿತ್ ರಾಣಾ ಪಂದ್ಯದ ಆರಂಭದಲ್ಲಿ ಪಿಚ್ ಅನ್ನು ಉಪಯೋಗಿಸಿಕೊಂಡರೆ ಬೇಗನೆ ವಿಕೆಟ್ಗಳು ಸಿಗುತ್ತವೆ. ಮೊದಲ ಮ್ಯಾಚ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಶಮಿ 5 ವಿಕೆಟ್ಗಳು, ರಾಣಾ 3 ವಿಕೆಟ್ಗಳನ್ನು ಪಡೆದು ಉತ್ತಮ ಫಾರ್ಮ್ನಲ್ಲಿದ್ದಾರೆ. ಇವರ ಜತೆಗೆ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಅವರೊಂದಿಗೆ ಭಾರತದ ಸ್ಪಿನ್ ವಿಭಾಗ ಬಲವಾಗಿಯೇ ಇದೆ.
ಇನ್ನು ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಿದರೆ ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್ ಪಿಚ್ನಿಂದ ಸಿಗುವ ಪೂರ್ತಿ ಪ್ರಯೋಜನವನ್ನು ಪಡೆಯುವ ಚಾನ್ಸ್ ಇರುತ್ತದೆ. ಹಾಗಾಗಿ ಎರಡು ತಂಡಗಳ ನಡುವೆ ಟಾಸ್ ಮುಖ್ಯವಾಗಲಿದೆ. ಮ್ಯಾಚ್ ಸಾಗುತ್ತಿದ್ದಂತೆ ಸ್ಪಿನ್ನರ್ಗಳು ಎಂಟ್ರಿ ಕೊಡುತ್ತಾರೆ. ಪಾಕಿಸ್ತಾನ ತಂಡವು ಅಬ್ರಾರ್ ಅಹ್ಮದ್ ಬದಲಿಗೆ ಖುಷ್ದಿಲ್ ಶಾ ಮೇಲೆ ಡಿಪೆಂಡ್ ಆಗುತ್ತದೆ.
ದುಬೈನಲ್ಲಿ ಭಾರತ-ಪಾಕಿಸ್ತಾನ ಒನ್ಡೇ ರೆಕಾರ್ಡ್ಸ್ ಹೇಗಿದೆ?
ಯುಎಇಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 28 ಬಾರಿ ಒನ್ಡೇಗಳಲ್ಲಿ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ ತಂಡ 9 ಬಾರಿ ಗೆದ್ದಿದೆ. ಪಾಕಿಸ್ತಾನ 19 ಮ್ಯಾಚ್ಗಳಲ್ಲಿ ಗೆದ್ದಿದೆ. ಅಂದರೆ ಒನ್ಡೇ ಕ್ರಿಕೆಟ್ನಲ್ಲಿ ದುಬೈನಲ್ಲಿ ಪಾಕಿಸ್ತಾನಕ್ಕೆ ಇಂಡಿಯಾ ಮೇಲೆ ಒಳ್ಳೆ ರೆಕಾರ್ಡ್ಸ್ ಇದೆ.
ಇಂಡಿಯಾ – ಪಾಕಿಸ್ತಾನ ನಡುವೆ ಮೊದಲ ಒನ್ಡೇ 1978ರಲ್ಲಿ ನಡೆಯಿತು. ಒಟ್ಟಾರೆಯಾಗಿ ಎರಡು ತಂಡಗಳ ನಡುವೆ ಇಲ್ಲಿಯವರೆಗೆ ಒನ್ಡೇಗಳಲ್ಲಿ 135 ಬಾರಿ ಮುಖಾಮುಖಿಯಾಗಿದ್ದಾರೆ. ಸದ್ಯಕ್ಕೆ ಒಟ್ಟು ಒನ್ಡೇಗಳಲ್ಲಿ ಹೆಡ್-ಟು-ಹೆಡ್ ರೆಕಾರ್ಡ್ನಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಇದರಲ್ಲಿ 73 ಮ್ಯಾಚ್ಗಳಲ್ಲಿ ಪಾಕಿಸ್ತಾನ ಗೆದ್ದಿದೆ, ಭಾರತ 57 ಮ್ಯಾಚ್ಗಳಲ್ಲಿ ಗೆದ್ದಿದೆ. ಎರಡು ತಂಡಗಳ ನಡುವೆ ನಡೆದ ಐದು ಮ್ಯಾಚ್ಗಳಲ್ಲಿ ರಿಸಲ್ಟ್ ಬಂದಿಲ್ಲ. ಆದರೆ ಇಂಡಿಯಾ ಪಾಕಿಸ್ತಾನ ನಡುವೆ ನಡೆದ ಕೊನೆಯ 10 ಮ್ಯಾಚ್ಗಳಲ್ಲಿ ಟೀಂ ಇಂಡಿಯಾದೇ ಮೇಲುಗೈ ಆಗಿದೆ. ಕೊನೆಯ 10 ಮ್ಯಾಚ್ಗಳಲ್ಲಿ 7 ಮ್ಯಾಚ್ಗಳನ್ನು ಭಾರತ ಗೆದ್ದುಕೊಂಡಿದೆ. ಎರಡು ಪಾಕಿಸ್ತಾನ ಗೆದ್ದುಕೊಂಡಿದೆ, ಒಂದು ರಿಸಲ್ಟ್ ಬಂದಿಲ್ಲ.
ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ-ಪಾಕಿಸ್ತಾನ ತಂಡಗಳು
ಟೀಂ ಇಂಡಿಯಾ: ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯಾ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್, ರಿಷಭ ಪಂತ್, ವಾಷಿಂಗ್ಟನ್ ಸುಂದರ್.
ಪಾಕಿಸ್ತಾನ: ಇಮಾಮ್ ಉಲ್ ಹಕ್, ಬಾಬರ್ ಅಜಮ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ಕ್ಯಾಪ್ಟನ್, ವಿಕೆಟ್ ಕೀಪರ್), ಸಲ್ಮಾನ್ ಅಘಾ, ತಯ್ಯಬ್ ತಾಹಿರ್, ಖುಷ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್, ಮೊಹಮ್ಮದ್ ಹಸ್ನೈನ್, ಉಸ್ಮಾನ್ ಖಾನ್, ಕಮ್ರಾನ್ ಗುಲಾಂ, ಫಹೀಮ್ ಅಶ್ರಫ್.
ವರದಿ ಮತ್ತು ಮಾಹಿತಿ : ಮೊಹಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು