ಸುಂದರ ಬದುಕು ರೂಪಿಸಲು ಶಿಕ್ಷಣ ಅಗತ್ಯ : ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ

ಮಸ್ಕಿ: ಸುಂದರ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅಗತ್ಯವಾಗಿದ್ದು, ಶಾಲಾ ಕಾಲೇಜು ಸಮಯದಲ್ಲಿ ಸಮಯ ವ್ಯರ್ಥ ಮಾಡದೇ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಎಂದು ತಿಂಥಿಣಿ ಬ್ರಿಜ್‌ನ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಅವರು ಹೇಳಿದರು.
ತಾಲೂಕಿನ ಹಾಲಾಪೂರು ಗ್ರಾಮದ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಏರ್ಪಡಿಸಿದ್ದ ಸಜ್ಜಲಶ್ರೀ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಾಲಯ ಉದ್ಘಾಟನಾ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಸರಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ಗುರುಕುಲದಲ್ಲಿ ಗುರುಗಳು ತಮ್ಮ ಜ್ನಾನವನ್ನು ಶಿಷ್ಯಂದಿರಿಗೆ ಧಾರೆ ಎರೆಯುತ್ತಿದ್ದರು. ಶಿಕ್ಷಕ ಮತ್ತು ವಿದ್ಯಾರ್ಥಿ ನಡುವೆ ಅವಿನಾಭಾವ ಸಂಬಂಧ ಇತ್ತು, ಆಧುನಿಕ ಭರಾಟೆಯಲ್ಲಿ ಶಿಕ್ಷಕರಿಗೆ ಗೌರವ ಸಿಗುತ್ತಿಲ್ಲ, ಶಾಲೆಯಲ್ಲಿ ಶಿಕ್ಷಕರು ನೀಡುವ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆದುಕೊಳ್ಳಬೇಕೆಂದು ಹೇಳಿದರು.
ಈ ವೇಳೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ದೊಡ್ಡದು ಗುರಿ ಇರಬೇಕು, ಅದಕ್ಕೆ ಮಾರ್ಗದರ್ಶನ ನೀಡಲು ಸರಿಯಾದ ಗುರು ಇರಬೇಕೆಂಬು ಮಾತಿದೆ ಆದರೆ ಈಗ ಅದು ಬದಲಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ, ಮೊಬೈಲ್‌ಗೆ ಮುಳಗಿ ಶಿಕ್ಷಣ ಕಡೆ ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದರು.
ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎಂದು ಹೇಳುತ್ತಾರೆ.
ಆದರೆ ಇಂದಿನ ಶಿಕ್ಷಣ ಪದ್ದತಿ ಸಾಕಷ್ಟು ಬದಲಾಗಿದೆ. ಈಚೆಗೆ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿದ್ದು, ಮಾತೃ ಭಾಷೆ ಕನ್ನಡ ಕಡೆ ಗಮನ ಕಡಿಮೆ ಆಗಿದೆ. ಪಾಲಕರು ಮಕ್ಕಳ ಬಗ್ಗೆ ಗಮನ ಇಟ್ಟು, ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳು ಪಡೆಯಲು ಕಾಳಜಿ ವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಇರಕಲ್ ಮಠದ ಬಸವಪ್ರಸಾದ ಶರಣ ಸ್ವಾಮೀಜಿ, ಜಂಗಮರಹಳ್ಳಿಯ ದಂಡಗುAಡಪ್ಪ ತಾತಾ, ಸಜ್ಜಲಶ್ರೀ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಬಿ.ಕರಿಯಪ್ಪ ಪೂಜಾರಿ, ಗ್ರಾ.ಪಂ ಅಧ್ಯಕ್ಷೆ ಸಾಬಮ್ಮ, ಮುಖ್ಯೋಪಾಧ್ಯಯ ಸುಭಾಷಸಿಂಗ್ ಹಜಾರೆ, ಎಸ್‌ಡಿಎಂಸಿ ಅಧ್ಯಕ್ಷ ಮಾಳಿಂಗರಾಯ, ಜಗದೀಶಚಂದ್ರಸ್ವಾಮಿ, ಮರಿಗೌಡ ಮಾಲಿ ಪಾಟೀಲ, ವೆಂಕಟರೆಡ್ಡಿಗೌಡ, ಮಹಾಂತೇಶ ಮಸ್ಕಿ, ಮುಖೋಪಾಧ್ಯಯ ರವಿರಾಜ, ಬಸಪ್ಪ ತನಿಖೇದಾರ, ಎ.ಮಲ್ಲಪ್ಪ, ಶಂಕ್ರಪ್ಪ ಸಕ್ರಿ, ರಾಜೇಶ್ವರಿ, ಸುಜಾತ ಕಟ್ಟಿ ಮತ್ತು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ: ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ