ತಂತ್ರಜ್ಞಾನ

Jio ಧಮಾಕಾ ಆಫರ್: ಜಸ್ಟ್ 299 ರೂ.! ನಿತ್ಯ 1.5GB ಡೇಟಾ.. ವ್ಯಾಲಿಡಿಟಿ ತಿಳಿದ್ರೆ ವಾವ್ ಅಂತಿರಾ!

ಮುಕೇಶ್ ಅಂಬಾನಿ ಅಂಬಾನಿ (Mukesh Ambani) ಒಡೆತನದ ರಿಲಯನ್ಸ್ ಜಿಯೋ (Reliance Jio) ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಈ ಮೂಲಕ ಭಾರತೀಯ ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೌದು, ಅದರಂತೆ ರಿಲಯನ್ಸ್ ಜಿಯೋ ಅದ್ಭುತ ಆಫರ್‌ ತಂದಿದೆ.

ಕೇವಲ 299 ರೂ.ಗಳಿಗೆ 28 ​​ದಿನಗಳವರೆಗೆ ದಿನಕ್ಕೆ 1.5GB ಡೇಟಾ ಪ್ಲಾನ್‌ ಪ್ರಾರಂಭಿಸಿದೆ. ಇದು ಖಾಸಗಿ ಟೆಲಿಕಾಂ ಕಂಪನಿಗಳಲ್ಲಿ ಅತ್ಯಂತ ಅಗ್ಗದ ಯೋಜನೆಯಾಗಿದೆ. ಇದು ಅನ್‌ಲಿಮಿಟೆಡ್ ವಾಯ್ಸ್ ಕಾಲ್ (ಧ್ವನಿ ಕರೆಗಳು), ನಿತ್ಯ 100 ಎಸ್‌ಎಂಎಸ್‌ಗಳು (SMS) ಮತ್ತು JioTV, JioCinema ಮತ್ತು JioCloud ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ಕಲ್ಪಿಸುತ್ತದೆ.

ಜಿಯೋದ (Jio Rs. 299 Recharge Plan) ರೂ.ಗಳ ಈ ಯೋಜನೆಯು ಅನ್‌ಲಿಮಿಟೆಡ್ 5G ಡೇಟಾ ಸೌಲಭ್ಯವನ್ನು ಒಳಗೊಂಡಿಲ್ಲ. ಇತ್ತೀಚೆಗೆ ದರಗಳನ್ನು ಹೆಚ್ಚಿಸಿದ ನಂತರ ಜಿಯೋ ಮತ್ತು ಏರ್‌ಟೆಲ್ ಎರಡೂ ತಮ್ಮ 5G ನೀತಿಗಳನ್ನು ಬದಲಾಯಿಸಿವೆ. ಸದ್ಯ, ನೀವು ನಿತ್ಯ 2GB ಅಥವಾ ಅದಕ್ಕಿಂತ ಹೆಚ್ಚಿನ ಡೇಟಾ ಪ್ಲಾನ್ ರೀಚಾರ್ಜ್ ಮಾಡಿದರೆ ಮಾತ್ರ, ನೀವು ಅನ್‌ಲಿಮಿಟೆಡ್ 5G ಬಳಸಬಹುದು. ನೀವು 1.5GB ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ, 5G ಕವರೇಜ್ ಇದ್ದರೂ ಸಹ, ನಿಮಗೆ ಉಚಿತ 5G ಡೇಟಾ ಸಿಗಲ್ಲ.

28 ದಿನಕ್ಕೆ ಬರೋಬ್ಬರಿ 42GB ಡೇಟಾ ಸಿಗುತ್ತೆ

ಒಂದುವೇಳೆ ನಿಮ್ಮ ಬಳಿ 5G ಫೋನ್ ಇಲ್ಲದಿದ್ದರೂ ಮತ್ತು 5G ವೇಗ ಅಷ್ಟು ಮುಖ್ಯವಲ್ಲ ಎಂದು ಭಾವಿಸಿದರೂ ಸಹ, ಈ 299 ರೂ. ಪ್ಲಾನ್ ಉತ್ತಮ ಆಯ್ಕೆಯಾಗಿದೆ. ಜಿಯೋನ ಈ 299 ರೂ. ರೀಚಾರ್ಜ್ ಯೋಜನೆ ನಿಮಗೆ ನಿತ್ಯ 1.5GB ಡೇಟಾ ನೀಡುತ್ತದೆ. ಅಂದರೆ ಒಟ್ಟು 28 ದಿನಗಳವರೆಗೆ 42GB ಡೇಟಾ ಸಿಗುತ್ತದೆ. ನೀವು ಭಾರತದ ಯಾವುದೇ ಸ್ಥಳಕ್ಕೆ ಅನ್‌ಲಿಮಿಟೆಡ್ ಕಾಲ್‌ಗಳನ್ನು ಮಾಡಬಹುದು.

ನೀವು ಪ್ರತಿದಿನ 100 ಎಸ್‌ಎಂಎಸ್‌ ಮಾಡಬಹುದು. ಜೊತೆಗೆ JioTV, JioCinema ಮತ್ತು JioCloud ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು. ನಿತ್ಯ ನೀಡಲಾಗುವ 1.5GB ಡೇಟಾ ಮುಗಿದ ಬಳಿಕ, ಇಂಟರ್ನೆಟ್ ವೇಗವು 64 Kbps ಗೆ ಇಳಿಯುತ್ತದೆ. ಆದರೂ ನೀವು,ವಾಟ್ಸಾಪ್ (WhatsApp) ಮೆಸೇಜ್ ಕಳುಹಿಸುವುದು ಮತ್ತು ಸ್ವೀಕರಿಸುವ ಸಣ್ಣ ಕೆಲಸಗಳನ್ನು ಮಾಡಲು ಇಂಟರ್ನೆಟ್ ವರ್ಕ್ ಆಗುತ್ತದೆ.

ರೀಚಾರ್ಜ್ ಮಾಡಲು ಹೀಗೆ ಮಾಡಿ

ಜಿಯೋನ ಈ ಪ್ಲಾನ್ ರೀಚಾರ್ಜ್ ಮಾಡಲು ಮೈಜಿಯೋ (MyJio) ಅಪ್ಲಿಕೇಶನ್ ಬಳಸಬಹುದು. ನೀವು ಈ ಆಪ್‌ ಮೂಲಕ ರಿಚಾರ್ಜ್ ಮಾಡಿದರೆ, ಯಾವುದೇ ಹೆಚ್ಚುವರಿ ಶುಲ್ಕಗಳು ಇರಲ್ಲ. ಆದರೆ ನೀವು Paytm, Google Pay ಮತ್ತು PhonePe ನಂತಹ ಇನ್ನಿತರೆ ಅಪ್ಲಿಕೇಶನ್‌ಗಳನ್ನು ಬಳಸಿದರೆ, ನೀವು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಇದರಿಂದ ರೀಚಾರ್ಜ್ ದರ ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆಯಿದೆ.

ಮನರಂಜನೆಗಾಗಿ ಹೊಸ ಪ್ರಿಪೇಯ್ಡ್ ಯೋಜನೆ

ಜಿಯೋ ಕೇವಲ 299 ರೂ. ಯೋಜನೆ ಅಲ್ಲ, ಮನರಂಜನೆ ಬಯಸುವ ಬಳಕೆದಾರರಿಗಾಗಿ ಹೊಸ ಯೋಜನೆ ಪರಿಚಯಿಸಿದೆ. ಈ ಯೋಜನೆಯ ಬೆಲೆ 949 ರೂ. ಆಗಿದೆ. ಈ ಪ್ಲಾನ್‌ನಲ್ಲಿ ಮೂರು ತಿಂಗಳ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೇರಿದೆ. ಇದು ಟೆಲಿಕಾಂ ಪ್ರಯೋಜನಗಳ ಜೊತೆಗೆ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಹೊಂದಿದೆ. ಹೀಗಾಗಿ ಹೆಚ್ಚು ಚಲನಚಿತ್ರಗಳು, ವೆಬ್ ಸರಣಿಗಳು ಮತ್ತು ಲೈವ್ ಸ್ಪೋರ್ಟ್‌ ನೋಡುವವರಿಗೆ ಇದು ಉತ್ತಮವಾಗಿದೆ.

299 ರೂ. ರೀಚಾರ್ಜ್ ಪ್ಲಾನ್ ಮತ್ತೆ ಶುರು

ಜಿಯೋ 299 ರೂ.ಗಳ ರೀಚಾರ್ಜ್ ಯೋಜನೆಯನ್ನು ಮತ್ತೆ ಪರಿಚಯಿಸಿದೆ. ಈ ಹಿಂದೆ ಬೆಲೆಗಳು ಹೆಚ್ಚಾದಾಗ ಈ ಯೋಜನೆಯನ್ನು ತೆಗೆದುಹಾಕಲಾಗಿತ್ತು. ಇದೀಗ ಈ ಯೋಜನೆಯನ್ನು ಮರಳಿ ತರಲಾಗಿದೆ. ತನ್ನ ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಡೇಟಾವನ್ನು ಒದಗಿಸುವ ಉದ್ದೇಶದಿಂದ ಜಿಯೋ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಯೋಜನೆ ಮರಳಿ ಬಂದಿರುವುದಕ್ಕೆ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಇತರೆ ಟೆಲಿಕಾಂ ಕಂಪನಿಗಳು ಸಹ ಇದೇ ರೀತಿಯ ಅಗ್ಗದ ಯೋಜನೆಗಳನ್ನು ಮತ್ತೆ ತಂದಿಲ್ಲ. ಒಂದುವೇಳೆ ಮರಳಿ ತಂದರೆ, ಜಿಯೋಗೆ ಭಾರೀ ಪೈಪೋಟಿ ಎದುರಾಗಲಿದೆ. ಬಳಕೆದಾರರಿಗೆ ಸಾಕಷ್ಟು ಹಣ ಉಳಿತಾಯವಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button