Maha Kumbh: ಸಂಗಮದ ನೀರು ಕುಡಿದು ತೋರಿಸಿ. ಯೋಗಿ ಗೆ ಸವಾಲು ಹಾಕಿದ ಗಾಯಕ ವಿಶಾಲ್ ದದ್ಲಾನಿ

ಲಖನೌ : ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಈ ನೀರಿನಲ್ಲಿ ಪ್ರಾಣಿಗಳ ಮಲದಲ್ಲಿರುವ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹೇಳಿದ್ದು ಇದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತಿಕ್ರಿಯೆ ನೀಡಿದ್ದು “ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಮಾತ್ರವಲ್ಲ ಆಚಮನಕ್ಕೂ ಯೋಗ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ ಆದರೆ ಈ ಹೇಳಿಕೆ ಬೆನ್ನಲ್ಲೇ ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ದದ್ಲಾನಿ ಯೋಗಿ ಆದಿತ್ಯನಾಥ್ ಗೆ ಸವಾಲೊಂದನ್ನು ಹಾಕಿದ್ದಾರೆ.
ತ್ರಿವೇಣಿ ಸಂಗಮದ ನೀರಿನಲ್ಲಿ ಬ್ಯಾಕ್ಟಿರಿಯಾ ಇಲ್ಲ ಇದು ಕುಡಿಯಲು ಯೋಗ್ಯವಾಗಿದೆ ಎಂದು ಹೇಳಿದ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಗಾಯಕ ವಿಶಾಲ್ ದದ್ಲಾನಿ ಟ್ವೀಟ್ ಮೂಲಕ ನಯವಾಗಿಯೇ ಸವಾಲು ಹಾಕಿದ್ದು ‘ಸರ್, ದ್ವೇಷಿಸುವವರ ಬಗ್ಗೆ ಚಿಂತಿಸಬೇಡಿ. ನಾವು ನಿಮ್ಮನ್ನು ನಂಬುತ್ತೇವೆ, ದಯವಿಟ್ಟು ತ್ರಿವೇಣಿ ಸಂಗಮಕ್ಕೆ ತೆರಳಿ ಅಲ್ಲಿ ಕ್ಯಾಮೆರಾದ ಮುಂದೆ ಸಂಗಮದ ನೀರನ್ನು ಕುಡಿದು ಜನರಿಗೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಜನವರಿಯಲ್ಲಿ ಆರಂಭಗೊಂಡ ಮಹಾಕುಂಭ ಮೇಳಕ್ಕೆ ಈಗಾಗಲೇ ಕೋಟ್ಯಾಂತರ ಮಂದಿ ಬಂದು ಇಲ್ಲಿನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು ಅಲ್ಲದೆ ಪ್ರತಿ ದಿನ ಲಕ್ಷಾಂತರ ಮಂದಿ ಇಲ್ಲಿನ ಸಂಗಮದಲ್ಲಿ ಪವಿತ್ರ ಮಾಡುತ್ತಿದ್ದಾರೆ.