ಕ್ಷೇತ್ರದ ತುರುವಿಹಾಳ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಪಟ್ಟ ತುರುವಿಹಾಳ ಸೋದರರು.

ಅಭಿವೃದ್ಧಿ ಎಂದರೆ ಏನು ಎಂದು ತಿಳಿಸಿದ ಶಾಸಕ ಬಸವನಗೌಡ ತುರುವಿಹಾಳ.
ಮಸ್ಕಿ : ಇದೆ ಫೆ.23 ರಂದು ಮಸ್ಕಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿ, ಶಂಕುಸ್ಥಾಪನೆ ಹಾಗೂ ಸಾಮೂಹಿಕ ಕಾರ್ಯಕ್ರಮ ಅಂಗವಾಗಿ ಕ್ಷೇತ್ರದ ತುರುವಿಹಾಳ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಕಂಡೂ ಕೇಳರಿಯದ ಅಭಿವೃದ್ಧಿಗೆ ತುರುವಿಹಾಳ ಪಟ್ಟಣ ಸಾಕ್ಷಿ ಯಾಗಲಿದೆ ಎಂದರೆ ತಪ್ಪಾಗಲಾರದು.
ಹೌದು ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರದ ಅನುದಾನ ಬಳಸಿಕೊಂಡು ಇದಕ್ಕೆ ಅಧಿಕಾರಿಗಳನ್ನು ಬಳಸಿಕೊಂಡು ಒಂದು ಪಟ್ಟಣವನ್ನು ಹೇಗೆ ಮಾಡಬಹುದು ಎಂದು ತೋರಿಸಿ ಕೊಟ್ಟವರು ತುರುವಿಹಾಳ ಸೋದರಾದ ಶಾಸಕ ಬಸವನಗೌಡ ತುರುವಿಹಾಳ, ಹಾಗೂ ಸಿದ್ದಣಗೌಡ ತುರುವಿಹಾಳ ರವರ ಎಂದು ಕ್ಷೇತ್ರದ ಜನತೆ ಮಾತನಾಡುತ್ತಿದ್ದಾರೆ.

ಕಡಿಮೆ ಸಮಯದ ಅವದಿಯಲ್ಲಿ ಬಸ್ ನಿಲ್ದಾಣ, ಪದವಿ ಪೂರ್ವ ಕಾಲೇಜು ಕೊಠಡಿಗಳ ನಿರ್ಮಾಣ, ಬಾಲಕರ ವಸತಿ ಶಾಲೆ, ಮಸ್ಕಿಯಲ್ಲಿ ತಾಲೂಕ ಆಡಳಿತ ಕಚೇರಿಯ ಸಲುವಾಗಿ ಪ್ರಜಾಸೌಧ, ಗುಂಜಳ್ಳಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ, ಕೆ.ಕೆ.ಆರ್.ಡಿ.ಬಿ ಕಲ್ಯಾಣ ಪಥ ಯೋಜನೆಯ ಗ್ರಾಮೀಣ ರಸ್ತೆಗಳ ನಿರ್ಮಾಣ ಕಾಮಗಾರಿ, ಕೆರೆ ತುಂಬಿಸುವ ಯೋಜನೆ, ಗುಂಡಾದಲ್ಲಿ ಪ್ರಾಥಾಮಿಕ ಆರೋಗ್ಯ ಕೇಂದ್ರ, ಬಳಗಾನೂರ ಪೊಲೀಸ್ ಠಾಣೆ ಕಟ್ಟಡ, ಪಾಮನಕೆಲ್ಲೂರು ಮುರಾರ್ಜಿ ದೇಸಾಯಿ ವಸತಿ ಶಾಲೆ, ಮಸ್ಕಿಯಲ್ಲಿ ಮೌಲಾನ ಅಜಾದ್ ಶಾಲೆ, ಉಮಲೂಟಿ-ಮಹಾಂಪೂರು ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮತ್ತು ತುರವಿಹಾಳ, ಮಸ್ಕಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್, ತುರವಿಹಾಳ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ಕಾಮಗಾರಿ, ಕನಕ ಭವನ ಉದ್ಘಾಟನೆ ಸೇರಿದಂತೆ ಒಟ್ಟು 800 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿ ಉದ್ಘಾಟನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಗಾನೂರು ಪಟ್ಟಣದ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ.
5ಎ ಉಪಕಾಲುವೆ ನಿರ್ಮಿಸುವಂತೆ ರೈತರು 12 ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಇದಕ್ಕೆ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ರೈತರಿಗೆ ಕೊಟ್ಟ ಮಾತನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ತುರುವಿಹಾಳ ಸಹೋದರರು ಹಗಲು-ರಾತ್ರಿ ಎನ್ನದೇ ಕ್ಷೇತ್ರದ ಜನರ ಅಭಿವೃದ್ಧಿಗಾಗಿ, ಸದಾ ಕಾಯಕದಲ್ಲಿ ತೊಡಗಿಸಿಕೊಂಡು, ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಸೌಮ್ಯ ಸ್ವಭಾವದ ಸರಳ ವ್ಯಕ್ತಿತ್ವದ ನಾಯಕರು ಎಂದು ಆರ್.ಬಸವನಗೌಡ ತುರುವಿಹಾಳ ಹಾಗೂ ಯುವಕರ ಆಶಾಕಿರಣ ಎಂದು ಆರ್.ಸಿದ್ದಣಗೌಡ ತುರುವಿಹಾಳ ಅವರನ್ನು ಕ್ಷೇತ್ರದಲ್ಲಿ ಹಾಡಿ ಹೊಗಳುತ್ತಿದ್ದಾರೆಂದು
ಎಂದು ಎಸ್ ಸಿ ನಗರ ಘಟಕದ ಅಧ್ಯಕ್ಷ ಮಲ್ಲಯ್ಯ ಮುರಾರಿ
ಅವರ ಮನದಾಳದ ಮಾತಾಗಿದೆ.

ಹೇಳಿಕೆ 1
ಕ್ಷೇತ್ರದ ಅಭಿವೃದ್ಧಿಗಾಗಿ, ಕಾರ್ಯಕರ್ತರ ಕಷ್ಟಕ್ಕೆ ನನ್ನ ಜೀವನವನ್ನೇ ಮುಡಿಪಾಗಿಡುವೆ. ನಾನು ಮಾಡಿದ ಕೆಲಸ ಸ್ವಲ್ಪ, ಮಸ್ಕಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮವಹಿಸುವೆ.
– ಆರ್.ಬಸವನಗೌಡ ತುರುವಿಹಾಳ, ಶಾಸಕ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ನಿಮಗ ಮಂಡಳಿ ಅಧ್ಯಕ್ಷ.
ವರದಿ : ಸಿದ್ದಯ್ಯ ಹೆಸರೂರು tv8kannada ಮಸ್ಕಿ