ಕ್ಷೇತ್ರದ ಸರ್ವಾಗೀಣ ಅಭೀವೃದ್ದಿಗೆ ಶ್ರಮೀಸುವೆಶಾಸಕ ಡಾ. ಎನ್.ಟಿ. ಶ್ರೀನಿವಾಸ್

ಕೊಟ್ಟೂರು: ಕೂಡ್ಲಿಗಿ ವಿಧಾನ ಸಭೆಯಿಂದ ಮತದಾರರು ನನ್ನ ಮೇಲೆ ವಿಶ್ವಾಸ ವಿಟ್ಟು ಮತಹಾಕಿ ಜಯಶೀಲರನ್ನಾಗಿ ಮಾಡಿದ್ದು.ಅವರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯ ನಿರ್ವಾಹಿಸುವೆ ಎಂದು ಡಾ ಎನ್ ಟಿ ಶ್ರೀನಿವಾಸ್ ಕೂಡ್ಲಿಗಿ ಶಾಸಕರು ಹೆಳಿದರು.
ತಾಲೂಕಿನ ವಿವಿಧ ಕಾಮಗಾರಿ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲಾ ಗ್ರಾಮಗಳ ರಸ್ತೆ ಅಭಿವೃದ್ಧಿಗೆ . 34 ಕೋಟಿ ರೂ. ವೆಚ್ಚದಲ್ಲಿ 12 ಗ್ರಾಮಗಳ ಕೂಡುವ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗು ಮಣ್ಣಿನ ರಸ್ತೆ ಇದ್ದು, ಸಂಚಾರಕ್ಕೆ ಸಮಸ್ಯೆ ಇದ್ದು, ಈ ರಸ್ತೆಗಳು ಸುಸಜ್ಜೆತವಾಗಿ ಡಾಂಬರೀಕರಣ ವಾಗುತ್ತವೆ.
ತಾಲೂಕಿನ ಕಾಳಾಪುರ ಸಮೀಪ ಮಂಗಳವಾರ ಕಲ್ಯಾಣ ಪಥ ಯೋಜನೆಯ ನಾಗರಕಟ್ಟೆ-ಉಜ್ಜಿನಿ ಕೂಡುವ ರಸ್ತೆ ೧೭೧.೬೦ ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತ ನಾಡಿದರು.

ಐದು ವರ್ಷಗಳ ತನಕ ರಸ್ತೆ ಹಾಳಾ – ದಂತೆ ಗುತ್ತಿಗೆದಾರರು ರಕ್ಷಿಸಿ ಆರನೇ ವರ್ಷ ಮತ್ತೊಮ್ಮೆ ಡಾಂಬರೀಕರಣ ಮಾಡಿ ಸರ್ಕಾರಕ್ಕೆ ಒಪ್ಪಿಸುವ ಕರಾರು ಇರುವುದಲ್ಲದೆ, ಕ್ಷೇತ್ರದ ಎಲ್ಲಾ ರಸ್ತೆಗಳು ಡಾಂಬರೀಕರಣವಾಗುವುದು ನನ್ನಗುರಿ ಎಂದರು.
ನಮ್ಮ ಕ್ಷೇತ್ರದಲ್ಲಿ ಎಲ್ಲಿಯೂ ಅಂಗನವಾಡಿ ಕೇಂದ್ರಗಳು ಖಾಸಗಿ ಕಟ್ಟಡ ಹಾಗೂ ಸಮುದಾಯ ಭದನದಲ್ಲಿ ಕರೆಂಟ್, ಮೂಲಭೂತ ಸೌಲಭ್ಯಗಳು ಇಲ್ಲದ ಸ್ಥಳದಲ್ಲಿ ಇರಬಾರದು ಎಂಬ ಸದುದ್ದೇಶದಿಂದ ನಾನು ಶಾಸಕನಾಗಿ ಒಂದು ಮುಕ್ಕಾಲು ವರ್ಷದಲ್ಲಿ ೪೫ ಅಂಗನವಾಡಿ ನೂತನ ಕಟ್ಟಡಗಳನ್ನು ನಿರ್ಮಿಸಲಾ ಗಿದೆ. ಕೆಲವು ಕಡೆ ನಿವೇಶ ಸಮಸ್ಯೆ ಯಿಂದ ನಿರ್ಮಾಣವಾಗಿಲ್ಲವೇ ಹೊರತು ಅನುದಾನದ ಕೊರತೆ ಇಲ್ಲ ಎಂದು ಚಿನ್ನೇನಹಳ್ಳಿಯಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು
ಉದ್ಘಾಟಿಸಿ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಬೀಜ ನಿಗಮದ ನಿರ್ದೇಶಕ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪಿ.ಎಚ್. ದೊಡ್ಡ ರಾಮಣ್ಣ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ. ಗುರುಸಿದ್ದನಗೌಡ, ಕಾಳಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಕೊಲ್ಲೇಶ್, ಎಂ. ದಾದಾಪೀರ್, ಬಿ. ಮಂಜುನಾಥ್, ಉಜ್ಜಿನಿ ಡಾ. ರೇವಣಸಿದ್ದೇಶ್ವರ, ಉಜ್ಜಿನಿ ಶೆಟ್ಟು ಪ್ರಕಾಶ್, ಹೂವಿನ ವೆಂಕಟೇಶ. ಹೊಸೂರಪ್ಪ ಸಿದ್ದಲಿಂಗಪ್ಪ,ವಿಜಲಕ್ಷ್ಮೀ ಸಮಾಜ ಮತ್ತು ಕಲ್ಯಾಣಿ ಇಲಾಖೆ ಮೆಲ್ವೀಚಾರಕರು ,
ಮುಂತಾದವರು ಇದ್ದರು .
ವರದಿ: C ಕೊಟ್ರೇಶ್ tv8kannada ಹೊಸಪೇಟೆ