ಇತ್ತೀಚಿನ ಸುದ್ದಿ

ಫೆ.19ರಂದು ಬಸವಣ್ಣನವರ ಪುತ್ಥಳಿ ನಿರ್ಮಾಣ ವಿರೋಧಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ

ಚಾಮರಾಜನಗರ: ಫೆ.15; ಬಸವಣ್ಣನವರ ಪುತ್ಥಳಿ ನಿರ್ಮಾಣ ವಿರೋಧಿಸಿ ಫೆ.19 ಬುಧವಾರದಂದು ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಮುಖಂಡರಾದ ಸಿ.ಎಂ.ಕೃಷ್ಣ ಅವರು ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಡಾ. ರಾಜಕುಮಾರ್ ರಂಗಮಂದಿರದ ಮುಂಭಾಗ ಶ್ರೀ ಬಸವಣ್ಣನವರ ಪುತ್ಥಳಿ ನಿರ್ಮಾಣ ಕುರಿತಂತೆ ಜಿಲ್ಲಾಡಳಿತ ಕಾನೂನುಬಾಹಿರವಾಗಿ ನಡೆದುಕೊಂಡಿದೆ, ಪುತ್ಥಳಿಯನ್ನು ಡಾ.ರಾಜಕುಮಾರ್ ರಂಗಮಂದಿರದ ಮುಂಭಾಗ ಸ್ಥಾಪಿಸಲು ಅಂದಿನ ಸಚಿವ ವಿ.ಸೋಮಣ್ಣ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು ಆದರೆ ಪುತ್ಥಳಿಯನ್ನು ರಾತ್ರೋರಾತ್ರಿ ಜಿಲ್ಲಾಡಳಿತ ಭವನದ ಮುಂಭಾಗ ಸ್ಥಳಾಂತರ ಗೊಳಿಸಿದ್ದ ಪ್ರಯುಕ್ತ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶನ್ ಸಲ್ಲಿಸಲಾಗಿತ್ತು, ಈ ಬಗ್ಗೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಮಂಜುಳಾ, ಎ.ಇಇ. ವೃಷಭೇಂದ್ರಪ್ಪ ರವರ ವಿರುದ್ಧ ಕ್ರಮ ಜರುಗಿಸಿ ಅವರನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಗೊಳಿಸಬೇಕು ಹಾಗೂ ಬಸವಣ್ಣನವರ ಪುತ್ಥಳಿ ಸ್ಥಳಾಂತರಿಸಿ ಅವರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದ ಸ್ಥಳದಲ್ಲೇ ನಿರ್ಮಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೂರುದಾರರಾದ ಹೊಂಗನೂರು ನಟರಾಜು, ನಾಗೇಶ್ ಭೋಗಾಪುರ, ಕದಂಬ ಸೇನೆಯ ಅಂಬರೀಷ್ , ಛಲವಾದಿ ಮಹಾಸಭಾದ ಮುಖಂಡ ಸೋಮಸುಂದರ್ ,ವಿವಿಧ ಸಮಾಜದ ಮುಖಂಡರು ಇದ್ದರು.

ವರದಿ;ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button