ಇತ್ತೀಚಿನ ಸುದ್ದಿ

ಕನ್ನಡದ ಹಿರಿಯ ನಟ ದಿನೇಶ್‌ ಪುತ್ರ, ನವಗ್ರಹ ಚಿತ್ರದಲ್ಲಿ ಅಭಿನಯಿಸಿದ್ದ ಗಿರಿ ದಿನೇಶ್‌ ಹೃದಯಾಘಾತದಿಂದ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗದಲ್ಲ ದಶಕಗಳಿಗೂ ಕಾಲ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ದಿನೇಶ್‌ ಅವರ ಪುತ್ರ ಹಾಗೂ ನಟ ಗಿರಿ ದಿನೇಶ್‌ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಶುಕ್ರವಾರ ರಾತ್ರಿ ಅವರು ಕೊನೆಯುಸಿರೆಳೆದರು.

ಗಿರಿ ದಿನೇಶ್​ ಅವರಿಗೆ 45 ವರ್ಷ ಆಗಿತ್ತು. ದಶಕದ ಹಿಂದೆ ಕನ್ನಡದ ಆ ಕಾಲದ ಎಲ್ಲಾ ವಿಲನ್‌ಗಳ ಮಕ್ಕಳು ಸೇರಿ ತೆಗೆದಿದ್ದ ಮೈಸೂರು ಅರಮನೆಯ ಚಿನ್ನದ ಅಂಬಾರಿ ಅಪಹರಿಸುವ ಕಥಾನಕದ ನವಗ್ರಹ ಎನ್ನುವ ಚಿತ್ರದಲ್ಲಿ ಗಿರಿ ದಿನೇಶ್‌ ಕೂಡ ಅಭಿನಯಿಸಿದ್ದರು. ನಟ ದರ್ಶನ್‌ ತೂಗುದೀಪ ಮುಖ್ಯ ಪಾತ್ರದಲ್ಲಿದ್ದ ನವಗ್ರಹ ಚಿತ್ರವನ್ನು ದಿನಕರ ತೂಗುದೀಪ ನಿರ್ದೇಶಿಸಿದ್ದರು.

ಬೆಂಗಳೂರಿನಲ್ಲಿಯೇ ನೆಲೆಸಿದ್ದಿ ಗಿರಿ ದಿನೇಶ್‌ ಕನ್ನಡ ಚಿತ್ರರಂಗದಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಅವರು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅದರಲ್ಲೂ ನವಗ್ರಹ ಚಿತ್ರದಲ್ಲಿ ದರ್ಶನ್‌, ಸೃಜನ್‌ ಲೋಕೇಶ್‌, ವಿನೋದ್‌ ಪ್ರಭಾಕರ್‌, ತರುಣ್‌ ಸುಧೀರ್‌, ಧರ್ಮಕೀರ್ತಿರಾಜ್‌ ಜತೆಯಲ್ಲಿ ಅಭಿನಯಿಸಿದ್ದರು. ಗಿರಿ ಆ ಚಿತ್ರದಲ್ಲಿ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸಿನಿಮಾದಲ್ಲೂ ಕೂಡ ಗಿರಿ ಅಭಿನಯಿಸಿದ್ದರು. ದರ್ಶನ್‌ ಜತೆಯಲ್ಲಿ ಹಿಂದಿನಿಂದಲೂ ಆಪ್ತರಾಗಿದ್ದರು ಗಿರಿ.

ಅವಿವಾಹಿತರಾಗಿದ್ದ ಗಿರಿ ಶುಕ್ರವಾರ ಸಂಜೆ ಅಣ್ಣನ ಮನೆಯಲ್ಲಿ ಪೂಜೆ ಮಾಡುವಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ನಂತರ ಹೃದಯಾಘಾತವೂ ಆಗಿದೆ. ಅಲ್ಲಿಯೇ ಗಿರಿ ಕುಸಿದು ಬಿದ್ದಿದ್ದು ಕುಟುಂಬಸ್ಥರು ಅವರನ್ನು ಅಲ್ಲಿಂದ ಆಸ್ಪತ್ರೆಗೆ ತುರ್ತಾಗಿ ಕರೆದುಕೊಂಡು ಹೊರಟಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿಯೇ ಕೊನೆಯುಸಿರೆಳದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆನಂತರ ಅಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದಾಗ ಮೃತಪಟ್ಟಿರುವುದನ್ನು ಖಚಿತಪಡಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button