ರಾಜ್ಯ

ಫೆ.23 ರಂದು ತುರ್ವಿಹಾಳಕ್ಕೆ ಸಿಎಂ ಭೇಟಿ; ಸ್ಥಳ ಪರಿಶೀಲಿಸಿದ ಎಸ್‍ಪಿ

ಸಿಂಧನೂರು ಫೆ.23: ರಂದು ತುರ್ವಿಹಾಳ ಪಟ್ಟಣದ ಅಮೋಘಸಿದ್ದೇಶ್ವರ ಮಠ ಆಯೋಜಿಸಿರುವ 108 ಸಾಮೂಹಿಕ ವಿವಾಹ, ನೂತನ ಕನಕ ಭವನ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ಪಟ್ಟಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಪಟ್ಟಣದ ನೂತನ ಇಂದಿರಾ ಕ್ಯಾಂಟಿನ್ ಉದ್ಘಾಟನೆ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ, ಕನಕದಾಸ ಹಾಗೂ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮಗಳು ಸಹ ಇದೇ ಸಮಯದಲ್ಲಿ ನೆರವೇರಲಿವೆ. ಮುಖ್ಯಮಂತ್ರಿಗಳ ಜೊತೆಗೆ ಮಠಾಧೀಶರು, ಸಚಿವರು, ಸಂಸದರು, ಶಾಸಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.ನೀರಾವರಿ ಇಲಾಖೆಯ ಆವರಣದಲ್ಲಿ ವೇದಿಕೆ ಕಾರ್ಯಕ್ರಮ, ಕನಕಪ್ಪ ಸಾಹುಕಾರ ಗೋದಾಮು ಹತ್ತಿರ ಸಿದ್ದಪಡಿಸಿರುವ ವಾಹನ ಫಾರ್ಕಿಂಗ್ ವ್ಯವಸ್ಥೆ, ಕನಕದಾಸ ಮತ್ತು ಸಂಗೊಳ್ಳಿರಾಯಣ್ಣ ವೃತ್ತದ ಸ್ಥಳಗಳನ್ನು ವೀಕ್ಷಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ನಂತರ ಮಠದ ಮಾದಯ್ಯ ಗುರುವಿನ್ ಹಾಗೂ ಚಿದಾನಂದಯ್ಯ ಗುರುವಿನ್ ಅವರೊಂದಿಗೆ ಚರ್ಚಿಸಿದರು.ಡಿವೈಎಸ್‍ಪಿ ಬಿ.ಎಸ್.ತಳವಾರ, ಸರ್ಕಲ್ ಇನ್ಸ್‍ಪೆಕ್ಟರ್ ವೀರಾರೆಡ್ಡಿ, ಪಿಎಸ್‌ಐ ಸುಜಾತ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಶಾಮೀದ್‍ಸಾಬ್, ಮುಖಂಡರಾದ ಆರ್.ಶಿವನಗೌಡ ತುರ್ವಿಹಾಳ, ರಂಗಪ್ಪ ಗೋಸಬಾಳ, ಸಿದ್ದೇಶ್ವರ ಗುರಿಕಾರ ವಕೀಲ, ಶಾಮೀದ್ ಅಲಿ, ಡಿ.ಶಂಕರಗೌಡ, ನಾಗಲಿಂಗಪ್ಪ ಘಂಟಿ ಉಪಸ್ಥಿತರಿದ್ದರು.

ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button