ಇತ್ತೀಚಿನ ಸುದ್ದಿ

ಫೆ.12 ಕ್ಕೆ ಮಸ್ಕಿ ಮಲ್ಲಿಕಾರ್ಜುನ ರಥೋತ್ಸವ

ಮಸ್ಕಿ: ಪಟ್ಟಣದ ಐತಿಹಾಸಿಕ ಮಲ್ಲಿಕಾರ್ಜುನ ದೇವರ
ರಥೋತ್ಸವ ಫೆ.12 ಕ್ಕೆ ನಡೆಯಲಿದೆ ಎಂದು ಮಲ್ಲಿಕಾರ್ಜುನ ದೇವಸ್ಥಾನ ಅರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ ರವರು ಹಾಗೂ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ
.

ಗುರು ಪರಂಪರೆಯ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಅಂದು ಸಂಜೆ 4: 40 ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ರಥೋತ್ಸವದ ಅಂಗವಾಗಿ ಫೆ.8 ಕ್ಕೆ ಧ್ವಜಾರೋಹಣ 9 ಹಾಗೂ10 ರಂದು ಪಲ್ಲಕ್ಕಿ ಸೇವಾ 11- ರಂದು ಕಳಸದ ಮೆರವಣಿಗೆ ನಡೆಯಲಿದೆ. ಫೆ. 12- ರಂದು ಕಳಸಾರೋಹಣ ಸಂಜೆ 4:10 ರಿಂದ 4:40 ರವರೆಗೆ ಸಲ್ಲುವ ಅಮೃತ ಮಹೋತ್ಸವ ದಲ್ಲಿ ಮಹಾ ರಥೋತ್ಸವ ಜರುಗುತ್ತದೆ.

ಮಸ್ಕಿ ಸೇರಿ ರಾಯಚೂರು ನೆರೆ ಜಿಲ್ಲೆಗಳ ಭಕ್ತರು ಭಾಗಿಯಾಗಲಿದ್ದಾರೆ. ನೂತನ ರಥವನ್ನು ವೀರಭದ್ರೇಶ್ವರ ದೇವಸ್ಥಾನದ ವರಗೆ ಎಳೆದು ಪುನಃ ದೇವಸ್ಥಾನಕ್ಕೆ ತರಲಿದ್ದಾರೆ. ಫೆ. 13 ರಂದು ಪಲ್ಲಕ್ಕಿ ಸೇವಾ ಹಾಗೂ14 ರಂದು ಕಡುಬಿನ ಕಾಳಗದ ಮೂಲಕ ರಥೋತ್ಸವದ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ. ರಥೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವರದಿ : ಸಿದ್ದಯ್ಯ ಸ್ವಾಮಿ tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button