ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖ: ಡಾ.ರಾಜ್ ಹುಟ್ಟೂರು ಗಾಜನೂರಿನಲ್ಲಿ ಸಿಹಿ ವಿತರಣೆ

ಚಾಮರಾಜನಗರ: ಫೆ.01: ಕನ್ನಡ ಚಲನಚಿತ್ರ ನಟ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಬಂದ ಹಿನ್ನೆಲೆಯಲ್ಲಿ ಡಾ.ರಾಜ್ ಹುಟ್ಟೂರು ಗಾಜನೂರಿನಲ್ಲಿ ಸಿಹಿ ವಿತರಿಸಲಾಯಿತು.
ಗಡಿಭಾಗ ತಾಳವಾಡಿ ಸಮೀಪದ ಗಾಜನೂರಿನ ಶ್ರೀ ಮಂಟೇಸ್ವಾಮಿ ದೇವಸ್ಥಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕ್ರಾಂತಿ ಸೇನೆ, ಡಾ.ಎಸ್.ಪಿ ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ವತಿಯಿಂದ ಏರ್ಪಡಿಸಲಾಗಿದ್ದ ಸಿಹಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ರಾಜಕುಮಾರ್ ಸಂಬಂಧಿ ಗೋಪಾಲ್ ಶಿವರಾಜ್ ಕುಮಾರ್, ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದಾಗ ರಾಜ್ಯದ ಕನ್ನಡಿಗರು ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು, ಅದರಂತೆ ಗಾಜನೂರಿನಲ್ಲೂ ಕೂಡ ಗ್ರಾಮಸ್ಥರು ಮಂಟೇಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರು ಗುಣಮುಖರಾಗಿ ಬರಲೆಂದು ಪ್ರಾರ್ಥಿಸಿದ್ದರು, ಹೀಗಾಗಿ ಅವರು ಗುಣಮುಖರಾಗಿದ್ದು, ಮುಂದಿನ ದಿನಗಳಲ್ಲಿ ಗಾಜನೂರಿಗೆ ಆಹ್ವಾನ ನೀಡಿ ದೇವರಿಗೆ ಪೂಜೆ ಸಲ್ಲಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗೋಪಾಲ್, ಕದಿರಯ್ಯ, ಚಿಕ್ಕಣ್ಣ ಗೌಡರ್, ಮಾದೇವ ನಾಯಕ, ಶ್ರೀನಿವಾಸ್ ಸಂಘದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.

ಡಾ.ರಾಜಕುಮಾರ್ ಅವರು ತಮಿಳು ಶಾಲೆಗೆ ನಿವೇಶನ ನೀಡಿದ್ದ ಈ ಶಾಲೆಯ ವಿದ್ಯಾರ್ಥಿಗಳಿಗೆ ಸಂಘದಿಂದ ಪೆನ್ನು, ನೋಟ್ ಪುಸ್ತಕ ಹಾಗೂ ವಿತರಿಸಲಾಯಿತು.
ಇದೇ ವೇಳೆ ಡಾ. ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಗೀತೆಗಳನ್ನು ಹಾಡಿ ರಂಜಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ವರ ಹಿಂದೂ ಮಿಲ್ಟ್ರಿ ಹೋಟೆಲ್ ಮಾಲೀಕ ಶ್ರೀನಿವಾಸ್, ಡಾ.ಬಿ.ಆರ್.ಅಂಬೇಡ್ಕರ್ ಕ್ರಾಂತಿ ಸೇನೆ ಮಾಧ್ಯಮ ವಿಭಾಗ ರಾಜ್ಯಾಧ್ಯಕ್ಷ ಇರಸವಾಡಿ ಸಿದ್ದಪ್ಪಾಜಿ, ಡಾ.ಎಸ್.ಪಿ ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಜಿಲ್ಲಾಧ್ಯಕ್ಷ ಹೆಚ್ಎಂ ಶಿವಣ್ಣ ಮಂಗಲ ಹೊಸೂರು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಹೋಬಳಿ ಅಧ್ಯಕ್ಷ ಮಂಜುನಾಥ್ ವಿಶ್ವಕರ್ಮ, ಮುಖಂಡರಾದ ಡಿ.ಎಲ್.ಕುಮಾರ್, ಮಹದೇವನಾಯಕ,ಯುವ ಪ್ರಶಸ್ತಿ ಪುರಸ್ಕೃತ ಎಲ್.ಸುರೇಶ್, ಮುಖಂಡರಾದ ನಾಗೇಂದ್ರ ಸೋಮವಾರಪೇಟೆ, ಮುಳ್ಳೂರು ಸಿದ್ದಪ್ಪಾಜಿ, ಹರದನಹಳ್ಳಿ ಸ್ವಾಮಿ ಆಚಾರ್, ರಂಗಸ್ವಾಮಿ, ಗಾಯಕ ಚಂದಕವಾಡಿ ನಾಗಮಹದೇವ್ , ಕಹಳೆ ರವಿಚಂದ್ರ ಪ್ರಸಾದ್, ಬಸವರಾಜ್ ತೆರಕಣಾಂಬಿ ಸೇರಿದಂತೆ ಗ್ರಾಮದ ಎಲ್ಲಾ ಕೋಮಿನ ಯಜಮಾನರು ಗ್ರಾಮಸ್ಥರು ಯುವ ಮುಖಂಡರು ಹಾಜರಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ