ದೇಶ

Central Budget 2025: ದೇಶದ ಆರ್ಥಿಕತೆ ಹೇಗಿದೆ, ನಿರ್ಮಲಾ ಸೀತಾರಾಮನ್ ಕೊಟ್ಟ ಲೆಕ್ಕ ಇಲ್ಲಿದೆ

ನವದೆಹಲಿ: ಕೇಂದ್ರ ಬಜೆಟ್ 2025 ಕ್ಕೆ ಪೂರ್ವಭಾವಿಯಾಗಿ ದೇಶದ ಆರ್ಥಿಕತೆ ಹೇಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೆಕ್ಕ ಕೊಟ್ಟಿದ್ದು ಅದರ ವಿವರ ಇಲ್ಲಿದೆ.

ಕೇಂದ್ರ ಬಜೆಟ್ ಗೆ ಮುಂಚಿತವಾಗಿ ಪ್ರತೀ ಸರ್ಕಾರವು ವಾರ್ಷಿಕ ದಾಖಲೆಯನ್ನು ನೀಡುತ್ತದೆ.

ಇದನ್ನು ಆರ್ಥಿಕ ಸಮೀಕ್ಷೆ ಎಂದು ಕರೆಯಲಾಗುತ್ತದೆ. ನಿರ್ಮಲಾ ಸಿತಾರಾಮನ್ ನೀಡಿರುವ ಲೆಕ್ಕದ ಪ್ರಕಾರ 2025-26 ನೇ ಹಣಕಾಸು ವರ್ಷದಲ್ಲಿ 6.3%-6.8% ಜಿಡಿಪಿ ಬೆಳವಣಿಗೆ ನಿರೀಕ್ಷಿಸಬಹುದಾಗಿದೆ.

ಆರ್ಥಿಕ ಸಮೀಕ್ಷೆಯ ವಿವರ
ವಿತ್ತ ಸಚಿವೆ ಮಂಡಿಸಿದ ಆರ್ಥಿಕ ಸಮೀಕ್ಷೆ ಪ್ರಕಾರ ವಾಣಿಜ್ಯ ಬ್ಯಾಂಕ್ ಗಳ ಒಟ್ಟು ಅನುತ್ಪಾದಕ ಆಸ್ತಿಗಳ ಅನುಪಾತದಲ್ಲಿ ಸ್ಥಿರವಾಗಿ ಇಳಿಕೆಯಾಗಿದೆ. ನಿಗದಿತ ವಾಣಿಜ್ಯ ವಾಣಿಜ್ಯ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿಗಳ ಅನುಪಾತದಲ್ಲಿ 2018 ರಲ್ಲಿದ್ದ ಗರಿಷ್ಠ ಮಟ್ಟದಿಂದ ಈಗ 2.6% ಕಡಿಮೆಯಾಗಿದೆ.

ಒಟ್ಟಾರೆ ರಫ್ತು ಮೊದಲ ಒಂಭತ್ತು ತಿಂಗಳಲ್ಲಿ ಸ್ಥಿರವಾಗಿದ್ದು 6% ವಾರ್ಷಿಕ ಬೆಳವಣಿಗೆ ಕಂಡಿದೆ. ವಿದೇಶೀ ಬಂಡವಾಳ ಹೂಡಿಕೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. 2024 ರಲ್ಲಿ ಮೊದಲ 8 ತಿಂಗಳಲ್ಲಿ ವಿದೇಶೀ ಹೂಡಿಕೆ 47.2 ಶತಕೋಟಿ ಡಾಲರ್ ಹೂಡಿಕೆಯಾಗಿದ್ದರೆ 2025 ರಲ್ಲಿ 55.6% ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಭಾರತದ ವಿಮಾ ಮಾರುಕಟ್ಟೆ, ಪಿಂಚಣಿ ವಲಯವೂ ಬೆಳವಣಿಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button