ಇತ್ತೀಚಿನ ಸುದ್ದಿ
ಕೊಟ್ಟೂರು ಪೊಲೀಸ್ ಕಾರ್ಯಾಚರಣೆ ಐದು ಲಕ್ಷ-ರೂ ಬೆಲೆ ಬಾಳುವ 25 ಮೊಬೈಲ್ಗಳ ಜಪ್ತಿ.

ಕೊಟ್ಟೂರು: ಪೊಲೀಸ್ ಠಾಣೆಯಲ್ಲಿ ಸಿ.ಇ.ಐ.ಆರ್. ಪೋರೈಲ್ ಮೂಲಕ ದಾಖಲಾದ ಪ್ರಕರಣಗಳಲ್ಲಿ ತನಿಖೆ ಕೈಗೊಂಡು, ಈ ಬಗ್ಗೆ ಕಳೆದು ಹೋದ ಮೋಬೈಲ್ ಗಳ ಪತ್ತೆಗಾಗಿ ಮಲ್ಲೇಶಪ್ಪ ಮಲ್ಲಾಪುರ ಡಿ.ವೈ.ಎಸ್.ಪಿ. ಕೂಡ್ಲಿಗಿ , ವೆಂಕಟಸ್ವಾಮಿ.ಟಿ ಸಿ.ಪಿ.ಐ. ಕೊಟ್ಟೂರು ವೃತ್ತ ರವರ ನೇತೃತ್ವದಲ್ಲಿ ಶ್ರೀಮತಿ ಗೀತಾಂಜಲಿ.ಶಿಂಧೆ, ಪಿ.ಎಸ್.ಐ ಹಾಗೂ ಪೊಲೀಸ್ ಠಾಣೆ ಸಿಬ್ಬಂದಿಯವರಾದ ಬಸವರಾಜ ಹೆಚ್. ವೀರೇಶ , ಶಶಿಧರ , ಇವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಕಳೆದು ಹೋದ ಸುಮಾರು ಐದು ಲಕ್ಷ ರೂಪಾಯಿ ಬೆಲೆ ಬಾಳುವ ವಿವಿಧ ಕಂಪನಿಯ 25 ಮೊಬೈಲ್ ಗಳನ್ನು ಪತ್ತೆ ಹಚ್ಚಿ ದೂರು ದಾರರಿಗೆ ನೀಡಿರುತ್ತಾರೆ.ಈ ಪತ್ತೆ ಕಾರ್ಯಾಚರಣೆಗೆ ಮಾನ್ಯ ಹರಿಬಾಬು ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿದರು.