IND vs ENG T20: ರಾಜ್‌ಕೋಟ್ ಪಂದ್ಯ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

ರಾಜಕೋಟ್: ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟಿ20 ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ 26 ರನ್‌ಗಳ ಜಯ ಸಾಧಿಸಿರುವ ಇಂಗ್ಲೆಂಡ್ ಭರ್ಜರಿ ಕಂ ಬ್ಯಾಕ್ ಮಾಡಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಗೆಲ್ಲುವ ಭಾರತದ ಕನಸಿಗೆ ಪೆಟ್ಟು ಬಿದ್ದಿದೆ.
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಎಡವಿದ್ದು ಎಲ್ಲಿ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಆ ಕುರಿತಾದ ವರದಿ ಇಲ್ಲಿದೆ.
ಟೀಮ್ ಇಂಡಿಯಾ ಕಳೆದ ಎರಡೂ ಪಂದ್ಯಗಳಲ್ಲಿ ಮಾಡಿದಂತೆ, ಮೂರನೇ ಪಂದ್ಯದಲ್ಲೂ ಟಾಸ್ ಗೆಲ್ಲುತ್ತಿದ್ದಂತೆ ಬೌಲಿಂಗ್ ಮಾಡಲು ನಿರ್ಧರಿಸಿತು. ಈ ಲೆಕ್ಕಾಚಾರನೇ ಟೀಮ್ ಇಂಡಿಯಾ ಸೋಲಿಗೆ ಕಾರಣವಾಯಿತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸೂರ್ಯಕುಮಾರ್ ಯಾದವ್ ಕರೆಕ್ಟ್ ಆಗಿ ಪಿಚ್ ರೀಡ್ ಮಾಡಲೇ ಇಲ್ವಾ ಎಂಬ ಸಂಶಯ ಆರಂಭವಾಗಿದೆ. ಇನ್ನು ರಾಜ್‌ಕೋಟ್ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡನೇ ಹೆಚ್ಚಾಗಿ ಪಂದ್ಯ ಗೆದ್ದಿದ್ದು. ಈ ಲೆಕ್ಕಾಚಾರ ಸಹ ಸೂರ್ಯ ಮಣೆ ಹಾಕಲಿಲ್ಲ.
ಸೂರ್ಯಕುಮಾರ್ ಯಾದವ್ ವೈಫಲ್ಯ
ಕಳೆದ ವರ್ಷ ಅಮೋಘ ಫಾರ್ಮ್‌ನಲ್ಲಿದ್ದ ಸೂರ್ಯಕುಮಾರ್ ಯಾದವ್, ಪ್ರಸಕ್ತ ವರ್ಷದ ಆರಂಭದಲ್ಲಿ ಲಯ ಕಂಡು ಕೊಳ್ಳಲು ಪರದಾಟ ನಡೆಸಿದ್ದಾರೆ. ರಾಜ್‌ಕೋಟ್‌ನಲ್ಲಿ ಬಿಗ್ ಇನಿಂಗ್ಸ್ ಆಡುವ ಸೂಚನೆ ನೀಡಿದರೂ ಸಹ ಅವರು ವೈಫಲ್ಯ ಅನುಭವಿಸಿದ್ದಾರೆ. ಇವರ ವೀಕ್ನೆಸ್ ಕಂಡು ಹಿಡಿದಿರುವ ಇಂಗ್ಲೆಂಡ್ ಬೌಲರ್ಸ್ ಶಾರ್ಟ್ ಪಿಚ್ ಎಸೆತಗಳನ್ನು ಪ್ರಯೋಗಿಸಿ ಖೆಡ್ಡಾ ತೊಡ್ತಾ ಇದ್ದಾರೆ. ಈ ವೈಫಲ್ಯದಿಂದ ಟೀಮ್ ಇಂಡಿಯಾ ಕ್ಯಾಪ್ಟನ್ ಆದಷ್ಟು ಬೇಗ ಪುಟಿದೇಳಬೇಕಿದೆ.
ಒತ್ತಡ ಮೆಟ್ಟಿ ನಿಲ್ಲದ ಟಾಪ್ ಆರ್ಡರ್
ಕೋಲ್ಕತ್ತಾದಲ್ಲಿ ಅಭಿಷೇಕ್ ಶರ್ಮಾ, ಚೆನ್ನೈನಲ್ಲಿ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಮಂಕಾದರು. ಇವರಷ್ಟೇ ಅಲ್ಲಾ ಸಂಜು ಸ್ಯಾಮ್ಸನ್ ಬ್ಯಾಟ್ ಈ ಸರಣಿಯಲ್ಲಿ ಮೌನಕ್ಕೆ ಶರಣಾಗಿರುವುದು ಚಿಂತೆಯನ್ನು ಹೆಚ್ಚಿಸಿದೆ.

ಬ್ಯಾಟಿಂಗ್ ಕ್ರಮಾಂಕದ ಮೇಲೆ ಪ್ರಶ್ನೆ
ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದ ಮೇಲೆ ಪದೇ ಪದೇ ಪ್ರಶ್ನೆಗಳು ಏಳುತ್ತಿವೆ. ಮೂರನೇ ಕ್ರಮಾಂಕದಲ್ಲಿ ಇವರೇ ಆಡಬೇಕು ಎಂದು ಫಿಕ್ಸ್ ಇಲ್ಲ. ರೈಟ್ ಹಾಗೂ ಲೆಫ್ಟ್ ಕಾಂಬಿನೇಷನ್ ಮೆಂಟನ್ ಮಾಡಲು ತಂಡ ವಿಭಿನ್ನ ತಂತ್ರವನ್ನು ಅನುಸರಿಸುತ್ತಿದೆ. ಈ ತಂತ್ರದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಇನ್ನು ತಂಡದಲ್ಲಿ ನುರಿತ ಬ್ಯಾಟರ್ ಧ್ರುವ್ ಜುರೇಲ್ ಅವರಿದ್ದರೂ ಸಹ ಅವರನ್ನು ಎಂಟನೇ ಕ್ರಮಾಂಕದಲ್ಲಿ ಆಡಿಸಿದ್ದು ಏಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಮೊಹಮ್ಮದ್ ಶಮಿ ಫಿಟ್ ಇಲ್ವಾ?
ಟೀಮ್ ಇಂಡಿಯಾಕ್ಕೆ ಕಂಬ್ಯಾಕ್ ಮಾಡುವ ಯೋಜನೆಯಲ್ಲಿರುವ ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಇವರು ಮಂಗಳವಾರ ಕೇವಲ ಮೂರು ಓವರ್ ಬೌಲಿಂಗ್ ನಡೆಸಿದರು. ಅಲ್ಲದೆ ವಿಕೆಟ್ ಪಡೆಯುವಲ್ಲಿ ಸಹ ವಿಫಲರಾದರು. ಇವರು ಇನ್ನಷ್ಟು ಬೌಲಿಂಗ್ ಮೇಲೆ ಕೆಲಸ ಮಾಡಬೇಕಾಗಿದೆ ಎಂಬುದಂತು ಸತ್ಯ.
ವಾಷಿಂಗ್ಟನ್ ಸುಂದರ್‌ಗೆ ಕೇವಲ ಒಂದು ಓವರ್!
ಟೀಮ್ ಇಂಡಿಯಾದಲ್ಲಿ ಇರುವ ಹಲವು ಪ್ರಶ್ನೆಗಳಲ್ಲಿ ಎದ್ದು ಕಾಣುವ ಪ್ರಶ್ನೆ ವಾಷಿಂಗ್ಟನ್ ಸುಂದರ್ ರೋಲ್ ಏನು. ಇವರನ್ನು ತಂಡ ಆಲ್‌ರೌಂಡರ್ ರೂಪದಲ್ಲಿ ನೋಡುತ್ತಿದೆ. ಆದರೆ ಇವರು ಸ್ಪಿನ್ ಬೌಲಿಂಗ್ ಮಾಡುವುದೇ ಇವರ ಶಕ್ತಿ. ಆದರೆ ಈ ಸರಣಿಯಲ್ಲಿ ಇವರಿಗೆ ಹೆಚ್ಚಾಗಿ ಬೌಲಿಂಗ್ ಮಾಡುವ ಅವಕಾಶವನ್ನೇ ನೀಡಿಲ್ಲ. ಮಂಗಳವಾರದ ಪಂದ್ಯದಲ್ಲೂ ಕೇವಲ ಒಂದೇ ಓವರ್ ಬೌಲ್ ಮಾಡಿದ್ದು ಹಲವು ಪ್ರಶ್ನೆಗಳು ಏಳುವಂತೆ ಮಾಡಿವೆ. ವಾಷಿಂಗ್ಟನ್ ಅವರನ್ನು ಬ್ಯಾಟರ್ ರೀತಿ ತಂಡ ನೋಡುತ್ತಿದೆಯಾ ಎಂಬ ಲೆಕ್ಕಾಚಾರ ಆರಂಭವಾಗಿದೆ.
ವರದಿ: ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು