SHIVARAJ KUMAR : ಇಂದು ಬೆಂಗಳೂರಿಗೆ ಮರಳುತ್ತಿರುವ ಶಿವಣ್ಣ – ಅಭಿಮಾನಿಗಳಿಂದ ಸ್ವಾಗತ

ಬೆಂಗಳೂರು: ನಟ ಶಿವಣ್ಣ ಅಮೆರಿಕದಿಂದ ಇವತ್ತು ಬೆಂಗಳೂರಿಗೆ ವಾಪಸ್ ಆಗ್ತಿದ್ದಾರೆ. ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಚಿಕಿತ್ಸೆ ಬಳಿಕ 6 ವಾರಗಳ ವಿಶ್ರಾಂತಿ ಪಡೆದಿದ್ದರು. ಇದೀಗ ಮರಳಿ ತಾಯ್ನಾಡಿಗೆ ಮರಳುತ್ತಿದ್ದಾರೆ.ಈಗಾಗಲೇ ಬೆಂಗಳೂರಿಗೆ ಬರುವ ಕುರಿತು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದರು.
ವಿಡಿಯೋ ಮೂಲಕ ಸಂದೇಶ ಹಂಚಿ ಕೊಂಡಿರುವ ಶಿವರಾಜ್ ಕುಮಾರ್, ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮನ್ನೆಲ್ಲಾ ನೋಡಲು ನಾನು ಜನವರಿ 26ರಂದು ಗಣರಾಜ್ಯೋತ್ಸವ ದಿನ ಬೆಂಗಳೂರಿಗೆ ಬರುತ್ತಿದ್ದೇನೆ. ನಿಮ್ಮ ಆಶೀರ್ವಾದ ಹೀಗೇ ಇರಲಿ ಎಂದು ಹೇಳಿದ್ದಾರೆ.
ಕಳೆದ 2024 ಡಿಸೆoಬರ್ 18ರಂದು ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದ ಶಿವರಾಜ್‌ಕುಮಾರ್ ಅವರಿಗೆ ಚಿಕಿತ್ಸೆ ಯಶಸ್ವಿಯಾಗಿದೆ. ಚಿಕಿತ್ಸೆಯ ನಂತರವೂ ಕೆಲ ದಿನಗಳ ಕಾಲ ಅಮೆರಿಕಾದಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಶಿವಣ್ಣ ಹೆಚ್ಚು ಕಮ್ಮಿ ಒಂದು ತಿಂಗಳ ನಂತರ ಬೆಂಗಳೂರಿಗೆ ಮರಳಿ ಬರುತ್ತಿದ್ದಾರೆ. ಇದೀಗ ನಟ ಶಿವಣ್ಣ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಶಿವರಾಜ್ ಕುಮಾರ್ ಗೆ ಆತ್ಮೀಯವಾಗಿ ಸ್ವಾಗತ ಕೋರಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.