ಇತ್ತೀಚಿನ ಸುದ್ದಿ

ಧಾರ್ಮಿಕ ವಿಧಿ ವಿಧಾನಗಳಿಂದಶ್ರೀ ಬನಶಂಕರಿ ದೇವಿ ತೇರುಗಾಲಿ ಹೊರಕ್ಕೆ.

ಕೊಟ್ಟೂರು : ಪಟ್ಟಣದ ಕೌಲುಪೇಟೆಯ ಶ್ರೀ ಬನಶಂಕರಿ ದೇವಿಯ ರಥೋತ್ಸವ ಜ.13ರಂದು ಜರುಗುವ ಹಿನ್ನಲೆಯಲ್ಲಿ.ಪ್ರತಿವರ್ಷ ಪದ್ಧತಿಯಂತೆ ತೇರುಗಾಲಿಯನ್ನು ದೇವಾಲಯದ ಬಳಿ ತತ್ಕಾಲಿಕವಾಗಿ ನಿರ್ಮಿಸಿದ್ದ ತಗಡಿನ ಸೆಡ್ಡಿನಿಂದ ಸಂಜೆ 5.6ನಿಮಿಷಕ್ಕೆ ಧಾರ್ಮಿಕ ವಿಧಿವಿಧಾನಗಳಿಂದಹೋರಗಡೆ ಹಾಕಲಾಯಿತು.

ಅರ್ ಎಂ ಕೊಟ್ರಯ್ಯ ಸ್ವಾಮಿಗಳು ರಥವನ್ನು ಏರುತಿದ್ದಂತೆ ಭಕ್ತರು ಜಯ ಘೋಷದೊಂದಿಗೆ ರಥವನ್ನು ಎಳೆದು ಭಕ್ತಿಯನ್ನು ಸಮರ್ಪಿಸಿದರು. ಜ12 ರಂದು ಭಾನುವಾರ ಪ್ರಮುಖ ಬೀದಿಗಳ ಮುಖಾಂತರ 108 ಕುಂಭಗಳ ಉತ್ಸವ.ಜ.13 ರಂದು ಸೋಮವಾರ ಬೆಳಿಗ್ಗೆ 5ಗಂಟೆಗೆ ದೇವಿಗೆ ಕುಂಕುಮಾರ್ಚನೆ ಮತ್ತು ಹೋಮ ನಂತರ ಪ್ರಸಾದ. ಶ್ರೀ ಬನಶಂಕರಿ ದೇವಿಯ ರಥೋತ್ಸವ ಶ್ರೀ ಅಮ್ಮನವರ ಪಾಟಕ್ಷಿ ಹಾರಜು ನಂತರ ಸಂಜೆ4ಕ್ಕೆ ರಥೋತ್ಸವ ಜರುಗುವುದು. ಸಂಜೆ 5 ಕ್ಕೆ ಮುತ್ತೈದೆಯರು ಮತ್ತು ಬಲಿ ಅನ್ನ ಕಾರ್ಯಕ್ರಮ ಸಂಜೆ 7-30 ಕ್ಕೆ ನಂತರ ಪ್ರಸಾದ.14ರಂದು ಮಂಗಳವಾರ ಸಂಜೆ 6-30 ಕ್ಕೆ ಶ್ರೀ ಬನಶಂಕರಿ ದೇವಿಯ ಕಾರ್ತಿಕೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಂತರ ಪ್ರಸಾದ ವ್ಯವಸ್ಥೆ ಸೇವೆ.ಜ 15ರಂದು ಬುಧವಾರ ಸಂಜೆ 7-30 ಕ್ಕೆ ಅಮ್ಮನವರ ಮರಿ ಕಾರ್ತಿಕೋತ್ಸವ ಜರುಗುವುದು ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲುಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗಿ ಎಂದು ಶ್ರೀ ಬನಶಂಕರಿ ದೇವಾಸ್ಥಾನದ ದೈವದವರು ಕೂರಿದ್ದಾರೆ.

ವರದಿ: C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button