ಸುದ್ದಿ
ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಮಕ್ಕಳ ಪೋಷಕರಿಗೆ ಮತ್ತೊಂದು ಶಾಕ್ –

ಬೆಂಗಳೂರು: ಬಸ್ ದರ ಏರಿಕೆ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಪೋಷಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ.
ಶಾಲಾ ಶುಲ್ಕ ಏರಿಕೆ ಮಾಡಲು ಖಾಸಗಿ ಶಾಲೆಗಳು ಮುಂದಾಗಿದ್ದು, ಬರೋಬ್ಬರಿ 10% ರಿಂದ 15% ದರ ಏರಿಕೆ ಮಾಡಲು ನಿರ್ಧರಿಸಿವೆ. ಈ ದರ ಹೆಚ್ಚಳ ಇದೇ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲು ಮುಂದಾಗಿವೆ.
ಎಲ್ಲವೂ ದುಬಾರಿಯಾಗ್ತಿದೆ ಹಾಗಾಗಿ ಶುಲ್ಕ ಹೆಚ್ಚಳ ಅನಿವಾರ್ಯ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.
ಎಲ್ಲವೂ ದುಬಾರಿಯಾಗ್ತಿದೆ. ವಿದ್ಯುತ್, ಬಸ್ ದರ ಸೇರಿದಂತೆ ಹಲವು ದರ ಏರಿಕೆ ಕಾಣುತ್ತಿದೆ. ನಾವು ಶಾಲೆ ನಡೆಸಬೇಕು, ಶಿಕ್ಷಕರಿಗೆ ಸಂಬಳ ಕೊಡಬೇಕು. ಹೀಗಾಗಿ ನಮಗೂ ಸಹ ಕಷ್ಟ ಆಗ್ತಿದೆ. ಈ ವರ್ಷ 10 ರಿಂದ 15 ಪರ್ಸೆಂಟ್ ದರ ಏರಿಕೆ ಮಾಡುತ್ತೇವೆ ಎಂದರು.
ದರ ಏರಿಕೆ ಮಾಡುವಂತಾಗಲು ಸರ್ಕಾರವೇ ಕಾರಣ. ವಾಡಿಕೆಯಂತೆ ಈ ಬಾರಿ ಕೂಡ 10% ರಿಂದ 15% ಶುಲ್ಕ ಹೆಚ್ಚಿಸಲಾಗಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.