Breking news: ಮುಸ್ಲಿಂ ಮುಖಂಡರ ಮನೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ

ಸಿರವಾರ (ರಾಯಚೂರು): ತಾಲೂಕಿನ ಕವಿತಾಳ ಪಟ್ಟಣ ಮುಸ್ಲಿಂ ಮುಖಂಡ ಶ್ರೀ ಅಬ್ದುಲ್ ಕರೀಂ ಸಾಬ್ ಅವರು ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಶನಿವಾರ ಅನ್ನ ಸಂತರ್ಪಣೆ ಮಾಡಿ ಸೌಹಾರ್ದತೆ ಮೆರೆದಿದ್ದಾರೆ..
ಕಳೆದ ಮೂರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಸತತ ಅನ್ನಸಂತರ್ಪಣೆ ಮಾಡುತ್ತಾ ಹಿಂದೂ ಮುಸ್ಲಿಂ ಬಾಂಧವರ ನಡುವೆ ಭಾವೈಕ್ಯತೆ ಸಾರಿದ್ದಾರೆ. ಕವಿತಾಳ ಮತ್ತು ಪಾತಾಪೂರದ ಅಯ್ಯಪ್ಪ ಸ್ವಾಮಿ ಪೀಠದ 40ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಹೋಳಿಗೆ ತುಪ್ಪ ಲಾಡು ಸೇರಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಗಮನ ಸೆಳೆದಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿ.ಎ.ಕರೀಂ ಸಾಬ್, ಮಾನವ ಕುಲ ಒಂದೇ, ಇಲ್ಲಿ ಜಾತಿ ತಾರತಮ್ಯವಿಲ್ಲ.ಮ ನುಷ್ಯ ಕುಲದಲ್ಲಿ ಹುಟ್ಟಿದವರು ಸೌಹಾರ್ದತೆ ಕಾಯಬೇಕು, ಎಲ್ಲ ಧರ್ಮೀಯರನ್ನು ಪ್ರೀತಿ-ವಿಶ್ವಾಸ, ಗೌರವದಿಂದ ಕಾಣಬೇಕು. ಅಂದಾಗ ಮಾತ್ರ ಸಹೋದರತ್ವ, ಸ್ನೇಹ-ಬಾಂಧವ್ಯ ಬೆಳೆಯಲಿದೆ ಎಂದು ಆತಾಭಾವನೆ ವ್ಯಕ್ತಪಡಿಸಿದರು.
ಸೌಹಾರ್ದತೆ ಮೆರೆದ ಬಿ.ಎ.ಕರೀಂ ಸಾಬ್! ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ
ಕವಿತಾಳ ಪಟ್ಟಣದ ಮುಸ್ಲಿಂ ಸಮಾಜದ ಮುಖಂಡ ಬಿ.ಎ.ಕರೀಂ ಸಾಬ್ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಗುರುಸ್ವಾಮಿಗಳಾದ ಶಾಯಣ್ಣ ಸ್ವಾಮಿ, ಯಮನಪ್ಪ ಸ್ವಾಮಿ, ಪಾತಾಪೂರ ರೆಡ್ಡಿ ಸ್ವಾಮಿ, ತಾಯಣ್ಯ, ಮಾಲಾಧಾರಿಗಳಾದ ಕಿನು ಸ್ವಾಮಿ, ಪಂಪಾಪತಿ ಸ್ವಾಮಿ, ಸುಕೇಶ ಸ್ವಾಮಿ, ಅಯಪ್ಪ ಸ್ವಾಮಿ, ಶಿವಪ್ಪ ಸ್ವಾಮಿ,
ಸಂಗಮನಾಥ ಸ್ವಾಮಿ, ವೆಂಕಟೇಶ ಬಳಿಗೇರ ಸ್ವಾಮಿ, ಗಿರಿಜಾಪತಿ ಸ್ವಾಮಿ, ಮಲ್ಲಸ್ಸ ಸ್ವಾಮಿ, ಗಿರಿ ಸ್ವಾಮಿ, ಹರ್ಷ ಘಂಟಿಸ್ವಾಮಿ, ರವಿ ಕತ್ತಿ ಸ್ವಾಮಿ, ಕನ್ನ ಸ್ವಾಮಿ, ನಿಂಗರಾಜ ಸ್ವಾಮಿ, ಶರಣ ಸ್ವಾಮಿ ಅಮರೇಶ್ ಕರೀಂ ಸಾಬ್ ಅವರ ಮಕ್ಕಳಾದ ಮೊಮ್ಮದ್ ಅಬ್ದುಲ್ ವ, ಮಹಮ್ಮದ್ ಅಬ್ದುಲ್ ಕಲೀಮ್ ಹಾಗೂ ಮಹಮ್ಮದ್ ಅಬ್ದುಲ್ ಕಲಾಂ ಇವರು ಉಪಸ್ಥಿತರಿದ್ದರು..