ದೇಶ
BREAKING NEWS: ಖ್ಯಾತ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ.ಮನ ಮೋಹನ್ ಸಿಂಗ್ ವಿಧಿವಶ

ನವದೆಹಲಿ: ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ವಿಧಿವಶರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ವಿಧಿವಶರಾಗಿದ್ದಾರೆ.
ಎರಡು ಅವಧಿಗೆ ಪ್ರಧಾನಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. ಅರ್ಥಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ, ಅಧಿಕಾರಿಯಾಗಿ, ಹಣಕಾಸು ಮಂತ್ರಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ನೆಹರು, ಇಂದಿರಾಗಾಂಧಿ, ಮೋದಿ ಬಳಿಕ ಅತಿ ಹೆಚ್ಚು ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರಲ್ಲಿ ಅವರು ನಾಲ್ಕನೇಯವರಾಗಿದ್ದಾರೆ. 2004ರಿಂದ 2014ರವರೆಗೆ ಪ್ರಧಾನಿಯಾಗಿದ್ದರು.
ಇದೀಗ ಮಾಜಿ ಪ್ರಧಾನಿಗಳು ನಿಧನರಾಗಿದ್ದಾರೆ ಎಂದು ರಾಬರ್ಟ್ ವಾದ್ರಾ ಹಾಗೂ NSUI ಟ್ವೀಟ್ (ಎಕ್ಸ್) ಮಾಡುವ ಮೂಲಕ ಅಧಿಕೃತವಾಗಿ ತಿಳಿಸಲಾಗಿದೆ.
ಯುಪಿಎ ಅವಧಿಯಲ್ಲಿ ಸತತ ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅವರನ್ನು ಕಳೆದುಕೊಂಡಿರುವ ಕಾಂಗ್ರೆಸ್ಗೆ ಹಿರಿಯ ಕೊಂಡಿಯೊಂದು ಕಳಚಿದ ನೋವು ಆವರಿಸಿದೆ.