ಹನೂರು ನ್ಯೂಸ್.ಹುಲಿ ಉಗುರು ಸಾಗಾಟ- ಇಬ್ಬರು ಆರೋಪಿಗಳ ಬಂಧನ…

ಚಾಮರಾಜನಗರ : ಅರಣ್ಯ ಸಂಚಾರಿದಳ ಮಿಂಚಿನ ಕಾರ್ಯಾಚರಣೆ ಹುಲಿ ಉಗುರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧಿಕ್ಷಕರಾದ ಎಸ್ ಎಸ್ ಕಾಶಿ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹನೂರು ತಾಲೂಕಿನ ಕೊಳ್ಳೇಗಾಲ- ಹನೂರು ಮುಖ್ಯ ರಸ್ತೆಯಿಂದ ಲೋಕನಹಳ್ಳಿ ಕಡೆಗೆ ಹೋಗುವ ರಸ್ತೆಯ ಜಂಕ್ಷನ್ ಬಳಿ ನವೀನ್ ಕುಮಾರ್ ಬಿ.ಎಂ ಬಿನ್ ಮಂಜು 24 ವರ್ಷ ದೊಡ್ಡ ಹರವೇ ಗ್ರಾಮ, ಹರನಹಳ್ಳಿ ಹೋಬಳಿ, ಪಿರಿಯಾಪಟ್ಟಣ ತಾಲೂಕು ಹಾಗೂ ಕುಮಾರ ನಾಯ್ಕ ಬಿಲ್ ಚೆಲುವನಾಯಕ 32 ವರ್ಷ,ಆಲನಹಳ್ಳಿ ಗ್ರಾಮ, ಎಚ್ ಡಿ ಕೋಟೆ ತಾಲೂಕು ಈ ಇಬ್ಬರು ತಮ್ಮ ಬಜಾಜ್ ಸಿಟಿ 100 ಬೈಕ್ KA09 – HZ5092 ನಲ್ಲಿ ಹುಲಿಯ ನಾಲ್ಕು ಉಗುರು ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅಪರಾಧ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಎಫ್ಎಂಎಸ್ ಕೊಳ್ಳೇಗಾಲ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕಾರ್ಯಾಚರಣೆಯ ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಪಿಎಸ್ಐ ವಿಜಯ್ ರಾಜ್ ಮುಖ್ಯಪೇದೆಗಳಾದ ಶಂಕರ, ರಾಮಚಂದ್ರ ,ಬಸವರಾಜು ಸ್ವಾಮಿ ,ಲತಾ ,ಕಾನ್ಸ್ಟೇಬಲ್ ಬಸವರಾಜು ಚಾಲಕ ಪ್ರಭಾಕರ್ ಪಾಲ್ಗೊಂಡಿದ್ದರು
ವರದಿ : ಎಸ್. ಪುಟ್ಟಸ್ವಾಮಿಹೊನ್ನೂರು tv8newskannada ಚಾಮರಾಜನಗರ