ಇತ್ತೀಚಿನ ಸುದ್ದಿ

ಗೃಹ ಮಂತ್ರಿ ಅಮಿತ್ ಶಾ ಹೇಳಿಕೆ ಖಂಡನೀಯ : ದಸಂಸ ಶಿವಣ್ಣ

ಚಾಮರಾಜನಗರ.ಡಿ,20 : ದೇಶದ ಗೃಹಮಂತ್ರಿ ಅಮಿತ್ ಶಾ ಅವರು ಡಿ.17 ರಂದು ಸಂಸತ್ತಿನಲ್ಲಿ ಮಾತನಾಡುವಾಗ ಭಾರತ ರತ್ನ, ವಿಶ್ವ ಜ್ಞಾನಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಜವಾಬ್ದಾರಿಯಿಲ್ಲದೆ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಮಾತನಾಡಿದ್ದಾರೆ. ಇದನ್ನು ದಲಿತ ಸಂಘರ್ಷ ಸಮಿತಿಯ ಒಕ್ಕೂಟ ಖಂಡಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ (ಡಿಜಿ ಸಾಗರ್ ಬಣ) ಜಿಲ್ಲಾ ಅಧ್ಯಕ್ಷ ಸಿ.ಎಂ.ಶಿವಣ್ಣ ಅವರು ತಿಳಿಸಿದರು.
ನಗರದ ಪಚ್ಚಪ್ಪ ವೃತ್ತದಲ್ಲಿ ಇಂದು ಪ್ರತಿಭಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ಅವರು ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್,
ಅಂಬೇಡ್ಕರ್, ಎನ್ನುತ್ತಿರುವುದು
ಇವರೆಲ್ಲಾ ಇಷ್ಟು ಸಾರಿ ಭಗವಂತನ ಸ್ಮರಣೆ ಮಾಡಿದ್ದೇ ಆಗಿದ್ದಲ್ಲಿ 7 ಜನ್ಮದವರೆಗೆ ಸ್ವರ್ಗವಾದರೂ ದೊರೆಯುತ್ತಿತ್ತು. ಹೇಳುತ್ತೇವೆ ಕೇಳಿ ಅಮಿತ್ ಶಾ…ರವರೇ, ನಮಗೆ ಏಳು ಜನ್ಮದ ಪುಣ್ಯ,ಸ್ವರ್ಗ ಬೇಡವೇ ಬೇಡ. ನಮಗೆ ಸ್ವರ್ಗ ನರಕಗಳಲ್ಲಿ ನಂಬಿಕೆ ಇಲ್ಲ. ನಮಗೆ ಅಗತ್ಯವೂ ಇಲ್ಲ. ನಮಗೆ ಅಂಬೇಡ್ಕರ್ ಒಬ್ಬರೇ ಏಕೈಕ ದೇವರು. ಆದ್ದರಿಂದ ಅಂಬೇಡ್ಕರ್ ಅವರ ಬಗ್ಗೆ ಇಷ್ಟೊಂದು ಹಗುರವಾಗಿ ನಾಲಿಗೆ ಹರಿಬಿಟ್ಟಿರುವುದು ಡಾ. ಬಿಆರ್ ಅಂಬೇಡ್ಕರ್ ಗೆ ಅವಮಾನ ಮಾಡಿದಂತಾಗಿದೆ. ನಾವು ಯಾರ ವಿರೋಧಿಗಳಲ್ಲ ಯಾವುದೇ ಧರ್ಮಗಳ ವಿರೋಧಿಗಳು ಅಲ್ಲ ಆದ್ದರಿಂದ ಇಂತಹ ಹೇಳಿಕೆ ನೀಡಿರುವ ಗೃಹ ಮಂತ್ರಿಯವರ ಹೇಳಿಕೆಯನ್ನು ಪ್ರಧಾನಮಂತ್ರಿ ಮೋದಿ ಸಮರ್ಥಿಸಿಕೊಂಡಿದ್ದಾರೆ ಇದು ನಾವು ಖಂಡನೀಯ. ನಮ್ಮ ಉಸಿರು, ಸಾಮರ್ಥ್ಯ ಡಾ. ಬಿಆರ್ ಅಂಬೇಡ್ಕರ್ ಆಗಿದ್ದಾರೆ ಅದರಿಂದ ತಕ್ಷಣ ಗೃಹ ಮಂತ್ರಿ ರಾಜೀನಾಮೆ ನೀಡಬೇಕು ಇಲ್ಲವಾದಲ್ಲಿ ಇಡೀ ಕರ್ನಾಟಕ ಬಂದ್ ಮಾಡಿ ಉಗ್ರ ಪ್ರತಿಭಟನೆಯ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ಸಿ.ರಾಜಣ್ಣ ಮಾತನಾಡಿ, ಕೋಮುವಾದಿ ಗೃಹ ಮಂತ್ರಿ, ಅನಾಗರೀಕ ಮಂತ್ರಿ ಡಾ.ಬಿಆರ್ ಅಂಬೇಡ್ಕರ್ ಅವರಿಗೆ ಗೌರವ ನೀಡದೆ ತನ್ನ ಮನುವಾದಿ ಧೋರಣೆಯನ್ನು ಸಂಸತ್ತಿನಲ್ಲಿ ಬಹಿರಂಗಪಡಿಸಿದ್ದಾರೆ ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿಗಳನ್ನು ಟೀಕೆ ಮಾಡಿದಂತಾಗಿದೆ ಅವರು 130 ಕೋಟಿ ಜನರಿಗೆ ಉಸಿರಾಗಿದ್ದಾರೆ ಆದರಿಂದ ಗೃಹಮಂತ್ರಿ ಸ್ಥಾನದಿಂದ ಶಾ ಅವರನ್ನು ವಜಾ ಗೊಳಿಸಬೇಕು ಎಂದು ತಿಳಿಸಿದರು.

ಸಾಹಿತಿ ಬಿಸಲವಾಡಿ ಸೋಮಶೇಖರ್ ಮಾತನಾಡಿ, ಅಮಿತ್ ಶಾ ಅವರು ತಮ್ಮ ಸರ್ಕಾರದ ಅಜೆಂಡಾ ಹೇಳುವ ಪ್ರಯತ್ನ ಮಾಡಿದ್ದಾರೆ, ಬಿಜೆಪಿ ಸರ್ಕಾರ ಹಿಂದುತ್ವ ಹರಡುವಂತ ಪ್ರಯತ್ನ ಮಾಡುತ್ತಿದೆ, ಸಂವಿಧಾನ ಮತ್ತು ಲೋಕಸಭೆ ದೇವಸ್ಥಾನ ಇದ್ದಹಾಗೆ ಅಂತಹ ಜಾಗದಲ್ಲಿ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡಿರುವ ಅಮಿತ್ ಶಾ ಅವರನ್ನು ಮೋದಿ ಸರ್ಕಾರವು ತಕ್ಷಣ ವಜಗೊಳಿಸಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನೆ ಸಂಚಾಲಕ ಕಂದಹಳ್ಳಿನಾರಾಯಣ,ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ರಾಮಸಮುದ್ರ, ಆಟೋ ಉಮೇಶ್, ಕೆಂಪರಾಜು ಕೊಮಾರನಪುರ,ರಂಗಸ್ವಾಮಿ ಹೊನ್ನೂರು, ಸಿ.ಎನ್. ಮಂಜೇಶ್, ನಂಜುಂಡಸ್ವಾಮಿ, ರಂಗಸ್ವಾಮಿ ಮಾಡ್ರಹಳ್ಳಿ, ಕೃಷ್ಣ್ನಮೂರ್ತಿ ಹೊನ್ನೂರು, ರಂಗಸ್ವಾಮಿ, ಕಾಗಲವಾಡಿ,ಅನಿಲ್ ಕುಮಾರ್, ನಾಗೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ : ಇರಸವಾಡಿ ಸಿದ್ದಪ್ಪಾಜಿ tv8newskannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button