ಇತ್ತೀಚಿನ ಸುದ್ದಿ

ಅರ್ಥಪೂರ್ಣವಾಗಿ ದಿವಂಗತ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ಕೆ.ಶೀವರಾಂ ಹುಟ್ಟು ಹಬ್ಬ ಆಚರಣೆ,

ನಂಜನಗೂಡು: ದಿವಂಗತ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ಕೆ.ಶಿವರಾಂ ರವರ 71ನೇ ವರ್ಷದ ಹುಟ್ಟು ಹಬ್ಬವನ್ನು ನಂಜನಗೂಡಿನಲ್ಲಿ ಮೈಸೂರು ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ನಂಜನಗೂಡು ನಗರದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ದಿವಂಗತ ಕೆ.ಶಿವರಾಂ ರವರ ಬೃಹತ್ ಫ್ಲೆಕ್ಸ್ ಅಳವಡಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ ರೋಗಿಗಳು ಮತ್ತು ಬಾಣಂತಿಯರಿಗೆ ಹಣ್ಣು ಹಂಪಲು ವಿತರಿಸಿ ದಿವಂಗತ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ಕೆ ಶಿವರಾಂ ರವರ ಹುಟ್ಟು ಹಬ್ಬವನ್ನು ಸಿಹಿ ಹಂಚಿ ಸಂಭ್ರಮಿಸಿದರು.

ಬಳಿಕ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್ ಮಾತನಾಡಿ, ಕೆ ಶಿವರಾಂರವರು ಬಡತನದಲ್ಲಿ ಹುಟ್ಟಿ ಬೆಳೆದು, ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಡೆದು ಬಂದು ಬಡತನದಲ್ಲಿರುವ ಎಲ್ಲ ಸಮುದಾಯದ ಜನರಿಗೆ ಆಸರೆಯಾಗಿದ್ದರು. ಈ ಸಮಾಜದಲ್ಲಿ ಹುಟ್ಟಿ ಸಮಾಜವನ್ನು ಸುಧಾರಣೆ ಮಾಡಲು ಪಣತೊಟ್ಟಿದ್ದರು. ತಮ್ಮ ಪರಿಶ್ರಮದಿಂದ ಓದಿ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿ, ದಕ್ಷ ಆಡಳಿತವನ್ನು ನೀಡಿದ್ದರು. ಕೆ ಶಿವರಾಂ ರವರು ಎಲ್ಲ ಸಮಾಜದಲ್ಲಿರುವ ಹಿಂದುಳಿದ ವರ್ಗದ ಬಡವರನ್ನು ಗುರುತಿಸಿ ಅವರನ್ನು ಮೇಲೆ ಎತ್ತುವ ಕೆಲಸವನ್ನು ಮಾಡಿದ್ದಾರೆ. ಅವರಿಗೆ ರಾಜಕೀಯದಲ್ಲಿ ಅವಕಾಶ ಸಿಗದೇ ಇದ್ದರು ಅಧಿಕಾರದಲ್ಲಿದ್ದಾಗಲೇ ಯಾವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾಡದೇ ಇರುವ ಕೆಲಸ ಕಾರ್ಯಗಳನ್ನು ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂತಹ ವ್ಯಕ್ತಿ ದೈಹಿಕವಾಗಿ ನಮ್ಮೊಟ್ಟಿಗೆ ಇಲ್ಲದಿದ್ದರೂ, ಮಾನಸಿಕವಾಗಿ ನಮ್ಮೊಂದಿಗೆ ಸದಾ ಇದ್ದಾರೆ. ಹಾಗಾಗಿ ಅವರ ಹುಟ್ಟು ಹಬ್ಬವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮತ್ತು ಬಾಣಂತಿಯರಿಗೆ ಹಾಲು, ಹಣ್ಣು, ಹಂಪಲು ವಿತರಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್, ಜಿಲ್ಲಾ ಉಪಾಧ್ಯಕ್ಷ ಬದನವಾಳು ಪ್ರಶಾಂತ್, ನಂಜನಗೂಡು ತಾಲ್ಲೂಕು ಅಧ್ಯಕ್ಷ ಉಮೇಶ್ ರಾಜ್, ನಗರ ಅಧ್ಯಕ್ಷ ರಾಜೇಂದ್ರ, ತಾಲ್ಲೂಕು ಉಪಾಧ್ಯಕ್ಷ ಜಗದೀಶ್, ಜಯರಾಮ್, ಮಹೇಶ್, ಮೂರ್ತಿ, ಮಲ್ಲಿಕಾರ್ಜುನ, ಭೀಮಪುತ್ರ ಯಶ್ವಿನ್ ಸೇರಿದಂತೆ ಅಭಿಮಾನಿಗಳು ಹಾಗೂ ಛಲವಾದಿ ಮಹಾಸಭಾದ ಪದಾಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button